Mumbai: ಮುಂಬೈ ಮಹಾನಗರದ ಗೋರೆಗಾoವ್ ಬಹು ಮಹಡಿ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕ; 6 ಮಂದಿ ಸಾವು, 40ಕ್ಕೂ ಅಧಿಕ ಮಂದಿಗೆ ಗಾಯ

6 dead, 40 injured as fire breaks out at building in Mumbai’s Goregaon

 

Mumbai; ಮುಂಬೈ ಮಹಾನಗರದ ಗೋರೆಗಾoವ್ (Goregaon)ಬಹು ಮಹಡಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ(Fire Accident)ಕ್ಕೆ ಆರು ಮಂದಿ ಬಲಿಯಾಗಿದ್ದಾರೆ. ಒಟ್ಟಾರೆ 40 ಕ್ಕಿಂತಲೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಮುಂಬೈನ (Mumbai)ಈ ಭೀಕರ ಅಗ್ನಿ ದುರಂತ ಇಂದು ಮುಂಜಾನೆ ಸಂಭವಿಸಿದೆ ಬೆಂಕಿಗೆ ಆಹುತಿಯಾದ ಆರು ಜನರಲ್ಲಿ ಓರ್ವ ಪುರುಷ ಸೇರಿದ್ದು ಉಳಿದ ಐವರು ಮಹಿಳೆಯರು ಮತ್ತು ಮಕ್ಕಳು. ಬೆಂಕಿಯಲ್ಲಿ ಸಿಕ್ಕಿ ಗಾಯಗೊಂಡವರಲ್ಲಿ ಬಹುತೇಕ ಮಂದಿ ಮಹಿಳೆಯರು ಮತ್ತು ಮಕ್ಕಳು ಎನ್ನುವ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಒಟ್ಟು 28 ಜನ ಮಹಿಳೆಯರು ಮತ್ತು ಮಕ್ಕಳು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮುಂಬೈನ ಹೆಚ್ ಬಿ ಟಿ ಮತ್ತು ಕೂಪರ್ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಮುಂಬೈ ಮಹಾನಗರದ ಗೋರೆಗಾವ್ ಪ್ರದೇಶದ ಪಶ್ಚಿಮ ಆಜಾದ್ ನಗರದಲ್ಲಿ ಇರುವ ಜೈ ಭವಾನಿ ಕಟ್ಟಡದಲ್ಲಿ ಮುಂಜಾನೆ 3 ಗಂಟೆಯ ಸುಮಾರಿಗೆ ಈ ಬೆಂಕಿ ಕಾಣಿಸಿಕೊಂಡಿದೆ. ಫ್ಲ್ಯಾಟ್ ಒಂದರಲ್ಲಿ ಕಾಣಿಸಿಕೊಂಡ ಈ ಬೆಂಕಿಗೆ 6 ಜನರು ಅಸು ನೀಗಿದ್ದಾರೆ. ಬೆಂಕಿ ಹಬ್ಬಲು ಕಾರಣವೇನು ಎನ್ನುವ ಬಗ್ಗೆ ಇನ್ನಷ್ಟೇ ತನಿಖೆಯಿಂದ ಮಾಹಿತಿ ಲಭ್ಯವಾಗಬೇಕಾಗಿದೆಯೆಂದು ಅಗ್ನಿಶಾಮಕದಳ ಮತ್ತು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Mangalore: ಉಪ್ಪಿನಂಗಡಿಯಲ್ಲಿ ಅಂಗಡಿಯೊಂದಕ್ಕೆ ನುಗ್ಗಿ ರೌಡಿ ಶೀಟರ್ ಹಾಗೂ ತಂಡವರಿಂದ ಹಲ್ಲೆ

Leave A Reply

Your email address will not be published.