Conversion Case: ಹಿಂದೂ ಯುವಕನ ಸೋಗಿನಲ್ಲಿ ಹಿಂದೂ ಯುವತಿಯನ್ನು ಮದುವೆಯಾದ ಮುಸ್ಲಿಂ ಯುವಕ; ಲವ್ ಜಿಹಾದ್ ಮಾಡಿದಾತನ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಿದ ಕೋರ್ಟ್

India Court sentences Tara Shahdeo’s former husband to life imprisonment in conversion case

Conversion Case: ಮತಾಂತರ ಪ್ರಕರಣ (Conversion Case)ದಲ್ಲಿ ಶೂಟರ್ (Shooter), ಹಿಂದೂ ಹುಡುಗಿ( Hindu Girl) ತಾರಾ ಶಹದೇವ್ (Thara Shadev) ಅವರ ಮಾಜಿ ಪತಿಗೆ ಕೇಂದ್ರೀಯ ತನಿಖಾ ದಳದ (ಸಿಬಿಐ) (CBI)ವಿಶೇಷ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ತಾನೊಬ್ಬ ಹಿಂದೂ ಎಂದು ಹೆಸರು ಬದಲಿಸಿಕೊಂಡು ಆಕೆಯನ್ನು ಆತ ಮದುವೆಯಾಗಿದ್ದ.

ಸಿಬಿಐನ ವಿಶೇಷ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ತಾನೊಬ್ಬ ಹಿಂದೂ ಎಂದು ಹೆಸರು ಬದಲಿಸಿಕೊಂಡು ಆಕೆಯನ್ನು ಆತ ಮದುವೆಯಾಗಿದ್ದ.

ಸಿಬಿಐನ ವಿಶೇಷ ನ್ಯಾಯಾಧೀಶ ಪ್ರಭಾತ್ ಕುಮಾರ್ ಶರ್ಮಾ ಅವರು ತಾರಾ ಶಹದೇವ್ ಅವರ ಮಾಜಿ ಪತಿ ರಕಿಬುಲ್ ಹಸನ್‌ ಅಲಿಯಾಸ್ ರಂಜಿತ್ ಕೊಹ್ಲಿಗೆ ಜೀವಾವಧಿ ಶಿಕ್ಷೆ ಮತ್ತು ಅವರ ಮಾಜಿ ಅತ್ತೆ ಕೌಸರ್ ರಾಣಿಗೆ 10 ವರ್ಷ ಜೈಲು ಶಿಕ್ಷೆ ಮತ್ತು ಮುಷ್ತಾಕ್ ಅಹ್ಮದ್‌ಗೆ (Musthak Ahamed) 15 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಮತಾಂತರಕ್ಕೆ ಭ್ರಮಾಸ್ತ್ರ ಪ್ರಯೋಗಿಸಿದೆ ಕೋರ್ಟು (Court)

ಅಲ್ಲದೆ, ಈ ಮೂವರಿಗೂ ತಲಾ 50,000 ರೂಪಾಯಿ ದಂಡವನ್ನೂ ನ್ಯಾಯಾಲಯ ವಿಧಿಸಿದೆ. ವಿಶೇಷ ಸಿಬಿಐ ನ್ಯಾಯಾಲಯವು ಪ್ರಕರಣದಲ್ಲಿ ಮೂವರೂ ತಪ್ಪಿತಸ್ಥರು ಎಂದು ಸೆಪ್ಟೆಂಬರ್ 30 ರಂದು ತೀರ್ಪು ನೀಡಿತ್ತು ಮತ್ತು ಶಿಕ್ಷೆಯ ಪ್ರಮಾಣವನ್ನು ಅಕ್ಟೋಬರ್ 5 ಕ್ಕೆ ಕಾಯ್ದಿರಿಸಿತ್ತು.

ರಂಜಿತ್ ಕೊಹ್ಲಿ ಅಲಿಯಾಸ್ ರಕಿಬುಲ್ ಹಸನ್ ಅವರನ್ನು 2014 ರ ಜುಲೈ 7 ರಂದು ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದರು. ಆದರೆ ಮದುವೆಯಾದ ಕೇವಲ 2ನೇ ದಿನದಲ್ಲಿ ಆಕೆಯ ಪತಿಯ ಮಾವ ಅಹ್ಮದ್ ಮತಾಂತರಗೊಳ್ಳುವಂತೆ ಒತ್ತಡ ಹೇರಲು ಪ್ರಾರಂಭಿಸಿದರು ಎಂದು ಶಹದೇವ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಆಗ ಅಹ್ಮದ್ ವಿಜಿಲೆನ್ಸ್ ರಿಜಿಸ್ಟ್ರಾರ್ ಆಗಿ ಕೆಲಸ ಮಾಡುತ್ತಿದ್ದರು.

ಈ ಘಟನೆಯ ಬಗ್ಗೆ ಸಿಬಿಐ 2015 ರಲ್ಲಿ ಪ್ರಕರಣವನ್ನು ವಹಿಸಿಕೊಂಡು ತನಿಖೆ ಕೈಗೊಂಡಿತು. ಈ ಪ್ರಕರಣವನ್ನು ದೆಹಲಿಯಲ್ಲಿ ದಾಖಲಿಸಿತು. ಹಿಂದೂ ಮಹಿಳೆ ಶಹದೇವ್‌ಗೆ 2018 ರ ಜೂನ್‌ನಲ್ಲಿ ಕ್ರೌರ್ಯದ ಆಧಾರದ ಮೇಲೆ ರಾಂಚಿಯ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನವನ್ನು ನೀಡಿತು.

ಹಸನ್ ಅಹ್ಮದ್ ತನ್ನ ಧರ್ಮದ ಬಗ್ಗೆ ಸುಳ್ಳು ಮಾಹಿತಿ ನೀಡಿ, ತಾನು ರಂಜಿತ್ ಕೊಹ್ಲಿ ಎಂದು ತನ್ನನ್ನು ಮದುವೆಯಾಗಿ ವಂಚಿಸಿದ್ದಾನೆ ಎಂದು ಆರೋಪಿಸಿ ಶಹದೇವ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಇಸ್ಲಾಂಗೆ ಮತಾಂತರಗೊಳ್ಳಲು ನಿರಾಕರಿಸಿದ್ದಕ್ಕಾಗಿ ಹಸನ್ ತನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಸಂತ್ರಸ್ತ ಪತ್ನಿ ಶಹದೇವ್ ಆರೋಪಿಸಿದ್ದರು. ಇದೀಗ ಆತನಿಗೆ ಜೀವಾವಧಿಯಂತಹ ಕಠಿಣ ಶಿಕ್ಷೆ ಆಗಿದೆ.

ಇದನ್ನೂ ಓದಿ: BJP Hindu activist: ಮುಸ್ಲಿಂ ಹುಡುಗಿಯ ಹಿಂದೆ ಅಡಗಿ ಕುಳಿತ ಬಿಜೆಪಿ ಹಿಂದೂ ಪರ ಕಾರ್ಯಕರ್ತ !:ಕಬೋರ್ಡ್ ನಲ್ಲಿ ಅಡಗಿ ಕುಳಿತವನ ಕಥೆ ಏನಾಯ್ತು !

Leave A Reply

Your email address will not be published.