ಸರ್ವ ಜನಾಂಗದ ಶಾಂತಿಯ ತೋಟ ಮಾಡಲು ಹೊರಟಿದೆ ಕುಡುಕರ ತೋಟ’ ; ಸಿಎಂ ಸಿದ್ದರಾಮಯ್ಯ ಮಾತು ಕೇಳಿ ಕಣ್ಣರಳಿಸಿ ನೋಡಿದ ಹೆಣ್ಮಕ್ಕಳು

No plan to set up new liquor outlets in Karnataka said siddaramaiah

ಉಚಿತ ಯೋಜನೆ(Free Scheme)ಗಳಿಂದಾಗಿ ಸರ್ಕಾರದ ಖಜಾನೆ ತೂತು ಬಿದ್ದ ಕಾರಣ ನಷ್ಟ ಸರಿದೂಗಿಸಲು, ಪ್ರತಿ ಗ್ರಾಮ ಪಂಚಾಯತ್ಗೆ ಒಂದರಂತೆ ಬಾರ್ ತೆರೆಯಲು ರಾಜ್ಯ ಸರ್ಕಾರ(State government) ಚಿಂತನೆ ನಡೆಸಿತ್ತು. ಆದ್ರೆ ಇದಕ್ಕೆ ಮದ್ಯ ಪ್ರಿಯ ಗಂಡಸರ ಪ್ರೀತಿಯ ಪತ್ನಿಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಹೊಸ ಮದ್ಯದಂಗಡಿಗಳ ಬಗ್ಗೆ ಬಿಗ್ ಹೇಳಿಕೆ ನೀಡಿದ್ದಾರೆ. ಸರ್ಕಾರ ಹೊಸ ಮದ್ಯದ ಅಂಗಡಿಗಳನ್ನು ತೆರೀತಾರಾ ಇಲ್ವಾ ಎನ್ನುವ ಬಗ್ಗೆ ಲೇಟೆಸ್ಟ್ ಅಪ್ಡೇಟ್ ನೀಡಿದೆ. ಖುದ್ದು ಸಿದ್ದರಾಮಯ್ಯನವರೇ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ(Siddaramaiah) , ಹೊಸ ಮದ್ಯದಂಗಡಿ(bar)ಗಳಿಗೆ ಪರವಾನಗಿ ನೀಡುವುದಕ್ಕೆ ಮಹಿಳೆ(Women)ಯರ ವಿರೋಧವಿದೆ ಎಂದಿದ್ದಾರೆ. ಉಚಿತಗಳ ಹಲವು ಖಚಿತ ಲಾಭ ಪಡೆಯೋರು ಈ ಮಹಿಳೆಯ ಆಗಿದ್ದರೂ, ಮಹಿಳಾ ಮತ ಭಿಕ್ಷೆಯಿಂದಲೆ ಸರ್ಕಾರ ಬಂದದ್ದು ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಹೀಗಾಗಿ ಸರ್ಕಾರಕ್ಕೆ ಹಣಕಾಸಿನ ತೀವ್ರ ಕೊರತೆ ಇದ್ದರೂ ಮದ್ಯದಂಗಡಿಗಳು ತೆರೆಯುವುದಕ್ಕೆ ಹೊಸ ಲೈಸೆನ್ಸ್ ನೀಡಲು ನಾನು ಅನುಮತಿ ನೀಡುವುದಿಲ್ಲ ಎಂದು ಸಿದ್ದು ವಾಗ್ದಾನ ಮಾಡಿದ್ದಾರೆ.

ಗ್ರಾಮ ಮಟ್ಟದಲ್ಲಿ ರಾಜ್ಯ ಸರ್ಕಾರ ಮದ್ಯದಂಗಡಿ ತೆರೆಯಲಿದೆ ಎನ್ನುವ ವಿಚಾರ ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಭಾರೀ ಸದ್ದು ಮಾಡಿತ್ತು. ಸರಕಾರದ ಈ ಕ್ರಮವನ್ನು ವಿಪಕ್ಷಗಳು ಕಟುವಾಗಿ ಟೀಕಿಸಿದ್ದವು.’ ಸರ್ವ ಜನಾಂಗದ ಶಾಂತಿಯ ತೋಟ, ಮಾಡಲು ಹೊರಟಿದೆ ಕುಡುಕರ ತೋಟ’ ಎಂದು ಪಕ್ಷಗಳು ಟೀಕಾ ಪ್ರಹಾರ ನಡೆಸಿದ್ದವು. ಬಾರ್, ವೈನ್ ಶಾಪ್ ತೆರೆಯುವ ವಿಚಾರ ತಿಳಿಯುತ್ತಿದ್ದಂತೆ ಮಹಿಳೆಯರು ಸೆರಗು ಬಿಗಿದು ಬೀದಿಗಿಳಿದು ಅಲ್ಲಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದು ಸರ್ಕಾರದ ಗಮನಕ್ಕೂ ಬಂದಿತ್ತು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಇದೀಗ ಅಪ್ಡೇಟ್ ನೀಡಿದ್ದಾರೆ. ಹೊಸ ಮದ್ಯದ ಅಂಗಡಿಗಳು ರಾಜ್ಯದಲ್ಲಿ ಪ್ರಾರಂಭ ಆಗುವುದಿಲ್ಲ ಎಂದು ಅವರು ಮತ್ತೊಮ್ಮೆ ಸ್ಪಷ್ಟವಾಗಿ ತಿಳಿಸಿದ್ದಾರೆ.

Leave A Reply

Your email address will not be published.