Mangalore: ಉಪ್ಪಿನಂಗಡಿಯಲ್ಲಿ ಅಂಗಡಿಯೊಂದಕ್ಕೆ ನುಗ್ಗಿ ರೌಡಿ ಶೀಟರ್ ಹಾಗೂ ತಂಡವರಿಂದ ಹಲ್ಲೆ

Rowdy-sheeter-and-gand-attacked-on-shop-owner-in-uppinangady

Uppinangady:  ಅಂಗಡಿ(Shop)ಯೊಂದಕ್ಕೆ ನುಗ್ಗಿ  ರೌಡಿ ಶೀಟರ್ (Rowdy Sheeter) ಹಾಗೂ ಆತನ ತಂಡವರು ಹಲ್ಲೆ ಮಾಡಿರುವ ಘಟನೆ ಉಪ್ಪಿನಂಗಡಿಯಲ್ಲಿ(Uppinangady)ನಡೆದಿದೆ.

ಕಲ್ಲಡ್ಕದ ರೌಡಿಶೀಟರ್ ಭರತ್ ಕುಮ್ಡೇಲು ಹಾಗೂ ಆತನ ತಂಡದವರಾದ ಜಗಜೀವನ್ ರೈ, ಭವಿಷ್, ಸಂದೀಪ್ ಎಂಬವರು ಜಾಗದ ವಿಚಾರದಲ್ಲಿ ಕಿರಿಕ್ ಮಾಡಿ, ಅಂಗಡಿಗೆ ನುಗ್ಗಿ ನಾಲ್ವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನು ಅಂಗಡಿಯಿಂದ ಹೊರಗೆಳೆದು ನಡುರಸ್ತೆಯಲ್ಲಿ ವ್ಯಕ್ತಿಗೆ ಹಲ್ಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಹರೀಶ್ ನಾಯ್ಕ, ಸುದರ್ಶನ್ ಕುಮಾರ್, ರಮಾನಂದ ಎಂಬವರ ಮೇಲೆ ಹಲ್ಲೆ ಮಾಡಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಎಸ್ಸಿ- ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಭರತ್ ಕುಮ್ಡೇಲು ಬಂಟ್ವಾಳದಲ್ಲಿ ರೌಡಿ ಶೀಟರ್ ಆಗಿದ್ದಾನೆ.2017ರಲ್ಲಿ ಎಸ್ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ.

ಇದನ್ನೂ ಓದಿ: Conversion Case: ಹಿಂದೂ ಯುವಕನ ಸೋಗಿನಲ್ಲಿ ಹಿಂದೂ ಯುವತಿಯನ್ನು ಮದುವೆಯಾದ ಮುಸ್ಲಿಂ ಯುವಕ; ಲವ್ ಜಿಹಾದ್ ಮಾಡಿದಾತನ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಿದ ಕೋರ್ಟ್

Leave A Reply

Your email address will not be published.