Actor siddarth: “ಆಸ್ಪತ್ರೆಯಲ್ಲಿ ನಾನು ಬೆತ್ತಲಾಗಿದ್ದಾಗ ನರ್ಸ್ ಗಳು ನನ್ನ ವೀಡಿಯೋ ಮಾಡಿದ್ದಾರೆ”;ಸಂದರ್ಶನವೊಂದರಲ್ಲಿ ಸ್ಫೋಟಕ ಹೇಳಿಕೆ ನೀಡಿದ ನಟ ಸಿದ್ಧಾರ್ಥ್

Actor siddarth shocking statement

Actor Siddarth;ಪದೇ ಪದೇ ಒಂದಿಲ್ಲೊಂದು ವಿಚಾರಗಳಿಂದ ಸುದ್ದಿಯಾಗುತ್ತಲೇ ಇರುವ ನಟ ಸಿದ್ಧಾರ್ಥ್ (actor Siddarth) ಇದೀಗ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಫಿಲ್ಮ್ ಕಂಪಾನಿಯನ್ (Film Companion) ಗೆ ನೀಡಿದ ಸಂದರ್ಶನ (Interview)ದಲ್ಲಿ, ಮಾತನಾಡಿದ ಅವರು ನೀವು ಕಲಾವಿದರು. ನೀನು ಎಲ್ಲೇ ಇದ್ದರೂ ಜನರೊಟ್ಟಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ ಅಂತಾ ಕೆಲವರು ಹೇಳ್ತಾರೆ. ಆದರೆ ಅದು ತಪ್ಪು. ಏಕೆಂದರೆ ಒಂದು ವಿಚಾರ ಹೇಳ್ತೀನಿ. ನಾನು ಆಸ್ಪತ್ರೆಯಲ್ಲಿ ಬೆತ್ತಲಾಗಿದ್ದಾಗ ಆಸ್ಪತ್ರೆ ವೈದ್ಯರು, ನರ್ಸ್‌’ಗಳು ಫೋಟೊ(Phot0) ಕ್ಲಿಕ್ಕಿಸಿದ್ದಾರೆ. ಸರ್ ಒಂದು ಫೋಟೊ ಪ್ಲೀಸ್ ಅಂತ ಬರ್ತಾರೆ. ನಾನು ಬಟ್ಟೆ ಇಲ್ಲದೇ ಬೆತ್ತಲಾಗಿ ಎಕ್ಸ್‌ರೇ ತೆಗೆಸುತ್ತಿದ್ದರೆ ಆ ಸಮಯದಲ್ಲೂ ಫೋಟೊಗಳನ್ನು ತೆಗೆದುಕೊಂಡಿದ್ದಾರೆ. ನರ್ಸ್‌’ಗಳು ವಿಡಿಯೋ ಮಾಡಿದ್ದಾರೆ. ಏನ್ ಮಾಡ್ತಿದ್ದೀರಾ ನೀವು? ಅಂತ ಕೇಳ್ದೆ… ಈ ಘಟನೆ ಈಗಿನದ್ದಲ್ಲ, ಹಲವು ವರ್ಷಗಳ ಹಿಂದೆ ನಡೆದಿತ್ತು” ಎಂದಿದ್ದಾರೆ.

“ಸರಿಯಾಗಿ ಫೋನ್( Mobile) ಬಳಸಲು ಗೊತ್ತಿಲ್ಲದವರ ಕೈಗೆ ಮೊಬೈಲ್ ಕೊಟ್ಟರೆ ಕೆಟ್ಟದಾಗಿಯೇ ಬಳಕೆ ಆಗುತ್ತದೆ. ಸೋಶಿಯಲ್ ಮೀಡಿಯಾ ಅಂದ್ರೆ ನನಗೆ ಭಯ ಹುಟ್ಟಿಸುತ್ತದೆ. ಅಂತ್ಯಕ್ರಿಯೆಗೆ ಹೋದಾಗಲೂ ಫೋಟೊ, ವಿಡಿಯೋ ಮಾಡುತ್ತಾರೆ. ಅದು ವಿಚಿತ್ರವಾದ ಭಯವನ್ನುಂಟು ಮಾಡುತ್ತದೆ” ಎಂದಿದ್ದಾರೆ.

“ನಾನು ಸಿನಿಮಾ ಕಾರ್ಯಕ್ರಮಕ್ಕೆ ಬಂದರೆ ಮಾತನಾಡೋದು ನನ್ನ ಕೆಲಸ. ಶೂಟಿಂಗ್‌’ಗೆ ಹೋದರೆ ಕ್ಯಾಮರಾ ಮುಂದೆ ನಟಿಸೋದು ನನ್ನ ಕೆಲಸ. ಆದರೆ ದಿನದ 24 ಗಂಟೆ ಕಾಮೆಂಟ್‌’ಗಳಿಗೆ ಉತ್ತರಿಸುತ್ತಿರುವುದು ನನ್ನ ಕೆಲಸ ಅಲ್ಲ. ನಾನು ಸಿನಿಮಾ ಪ್ರಚಾರಕ್ಕೆ ಬಂದರೆ ನನ್ನ ಸಿನಿಮಾ ಮತ್ತು ನನ್ನ ವೃತ್ತಿ ಬಗ್ಗೆ ಮಾತನಾಡುತ್ತೇನೆ. ನೀವು ಏನೇ ಪ್ರಶ್ನೆ ಕೇಳಿದರೂ ನಾನು ಉತ್ತರಿಸುತ್ತೇನೆ. ಆದರೆ ಉಳಿದ ವಿಚಾರಗಳ ಬಗ್ಗೆ ಮಾತನಾಡಲು ನಾನು ಬಂದಿಲ್ಲ. ಏರ್‌ಪೋರ್ಟ್‌ಗೆ ಹೋದರೆ ಏರ್‌ಪೋರ್ಟ್ ಲುಕ್ ಅಂತ ಹೇಳ್ತಾರೆ. ಏರ್‌ಪೋರ್ಟ್‌’ನಲ್ಲಿ ನನ್ನ ಫೋಟೋ ತೆಗೆಯಬೇಡಿ. ಅದರಿಂದ ನನಗೆ 1 ರೂ. ಕೂಡ ಸಿಗಲ್ಲ, ಜೊತೆಗೆ ನನ್ನ ಅಭಿಮಾನಿಗಳು ಅದನ್ನು ಇಷ್ಟಪಡಲ್ಲ” ಎಂದಿದ್ದಾರೆ.“ಇಂತಹ ಫೋಟೋಗಳನ್ನೆಲ್ಲಾ ಬಳಸಿಕೊಂಡು ಕೆಲವರು ಬ್ಯುಸಿನೆಸ್ ಮಾಡ್ತಾರೆ ಎಂದು ಗರಂ ಆಗಿದ್ದಾರೆ.

ಇದನ್ನೂ ಓದಿ: ಸರ್ವ ಜನಾಂಗದ ಶಾಂತಿಯ ತೋಟ ಮಾಡಲು ಹೊರಟಿದೆ ಕುಡುಕರ ತೋಟ ಸಿಎಂ ಸಿದ್ದರಾಮಯ್ಯ ಮಾತು ಕೇಳಿ ಕಣ್ಣರಳಿಸಿ ನೋಡಿದ ಹೆಣ್ಮಕ್ಕಳು

Leave A Reply

Your email address will not be published.