Shivamogga; ಪುತ್ತೂರಿನ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ದೂರು ದಾಖಲು

complaint registers against arunkumar puthila

 

Shivamogga; ಪುತ್ತೂರಿ(Puttur) ನ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ (Arunkumar Puthila) ವಿರುದ್ಧ ಶಿವಮೊಗ್ಗದಲ್ಲಿ ದೂರು(Complaint) ದಾಖಲಾಗಿದೆ.

ನಿನ್ನೆ ಶಿವಮೊಗ್ಗದ(Shivamogga) ರಾಗಿಗುಡ್ಡದ ಗಲಭೆ ಪೀಡಿತ ಪ್ರದೇಶಕ್ಕೆ ಅವರು ಭೇಟಿ ನೀಡಿದ್ದರು. ಈ ವೇಳೆ‌ ಅಲ್ಲಿನ ಜನರೊಂದಿಗೆ ಮಾತಾನಾಡುತ್ತಾ ಮನೆಯಲ್ಲಿದ್ದ ಆಯುಧಗಳಿಗೆ ಪೂಜೆ ಮಾಡಿ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿಕೆ ನೀಡಿದ್ದರು.

ರಾಗಿಗುಡ್ಡ(Raagigudda)ದ ಗಲಭೆ ಪೀಡಿತ ಪ್ರದೇಶದಲ್ಲಿ 144 ಸೆಕ್ಷನ್ (144 Scetion) ಜಾರಿಯಿದ್ದು ನಿಷೇಧಾಜ್ಞೆ ಇದ್ದರೂ ಇದರ ನಡುವೆ ಅರುಣ್ ಕುಮಾರ್ ಪುತ್ತಿಲ ಪ್ರಚೋದನಾಕಾರಿ‌ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ನಿನ್ನೆ ರಾಗಿಗುಡ್ಡಕ್ಕೆ ಭೇಟಿ‌‌ ನೀಡಿದ್ದ ಅರುಣ್ ಕುಮಾರ್ ಪುತ್ತಿಲ, ಕಲ್ಲು ತೂರಾಟದಿಂದ ಸಂತ್ರಸ್ತರಾದ ಹಿಂದೂ‌ ಸಮುದಾಯದ ಮನೆಗಳಿಗೆ ಭೇಟಿ ನೀಡಿದ್ದರು.

ಇದನ್ನೂ ಓದಿ: Manglore; ಪುತ್ತೂರು ಸುತ್ತಮುತ್ತಲು ಹೆಚ್ಚುತ್ತಿದೆ ಚಿರತೆ ಕಾಟ; ದನದ ಕರುವನ್ನು ಅರ್ಧ ತಿಂದು ಮರದಲ್ಲಿ ನೇತು ಹಾಕಿದ ಚಿರತೆ

 

Leave A Reply

Your email address will not be published.