ಮಂಗಳೂರು; ಬ್ಯಾಂಕ್ ನಿಂದ ಹಣ ಡ್ರಾ ಮಾಡಿ ಬೈಕ್ ನ ಸೀಟಿನಡಿ ಬಾಕ್ಸ್ ನಲ್ಲಿಟ್ಟ ವ್ಯಕ್ತಿ; ಸ್ವಲ್ಪ ಹೊತ್ತು ಬಿಟ್ಟು ನೋಡುವಾಗ ಹಣ ಮಂಗ ಮಾಯ

Manglore; ಮಂಗಳೂರು;  ವ್ಯಕ್ತಿಯೊಬ್ಬರು ಬ್ಯಾಂಕ್(Bank) ನಿಂದ ಹಣ ಡ್ರಾ ಮಾಡಿ ತಂದು ಬೈಕ್ (Bike) ನ ಸೀಟಿ(Seat)ನಡಿ ಬಾಕ್ಸ್ ನಲ್ಲಿಟ್ಟು ಸ್ವಲ್ಪ ಹೊತ್ತಿನಲ್ಲಿ ಹಣ ಮಂಗಮಾಯವಾದ ಘಟನೆ ಬಂಟ್ವಾಳ   ಬಿಸಿ ರೋಡಿನಲ್ಲಿ ನಡೆದಿದೆ.

ಬಂಟ್ವಾಳದ ನರಿಕೊಂಬು ನಿವಾಸಿ ಪ್ರಕಾಶ್ ಕೋಡಿಮಜಲು ಎಂಬವರು ಅವರು ಶುಕ್ರವಾರ ಬೆಳಿಗ್ಗೆ ರೂ.1.40 ಲಕ್ಷ ಹಣವನ್ನು ಬ್ಯಾಂಕಿನಿಂದ ಡ್ರಾ ಮಾಡಿ ಬಳಿಕ ಬಿಸಿರೋಡಿನ ಮಿನಿವಿಧಾನ ಸೌಧದ ಕಚೇರಿಯ ಮುಂಭಾಗದಲ್ಲಿ ಇರಿಸಲಾಗಿದ್ದ, ದ್ವಿಚಕ್ರವಾಹನದ ಸೀಟಿನಡಿ ಇರುವ ಬಾಕ್ಸ್ ನಲ್ಲಿ ಇಟ್ಟಿದ್ದರು.ಬಳಿಕ ಬೇರೆ ಬೇರೆ ಕೆಲಸ ನಿಮಿತ್ತ ಅಲ್ಲಿಂದ ತೆರಳಿದ್ದರು.ಮಧ್ಯಾಹ್ನ ಬಳಿಕ ಬಂದು ಸೀಟು ಲಾಕ್ ತೆರೆದಾಗ ಅದರೊಳಗೆ ಇರಿಸಲಾಗಿದ್ದ 1.40 ಲಕ್ಷದಲ್ಲಿ 40 ಸಾವಿರ ಮಾತ್ರ ಇದ್ದು ಉಳಿದ 1 ಲಕ್ಷ ಹಣ ಕಳವಾಗಿದೆ ಎಂದು ತಿಳಿಸಿದ್ದಾರೆ.ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.