Dakshinakannada: ದಕ್ಷಿಣಕನ್ನಡ; ಬಂಟ್ವಾಳ; ಗಾಳ ಹಾಕುತ್ತಿದ್ದಾಗ ರಾತ್ರಿ ಆಯತಪ್ಪಿ ನೀರಿಗೆ ಬಿದ್ದ ಯುವಕ; 2 ಗಂಟೆಗಳ ಕಾಲ ನೀರಿನಲ್ಲಿದ್ದು ಆತ ಬದುಕಿ ಬಂದದ್ದೇ ರೋಚಕ

Bantwala; A young man survived in the water for 2 hours

Bantwala ಬಂಟ್ವಾಳ; ಗಾಳ ಹಾಕುತ್ತಿದ್ದಾಗ ರಾತ್ರಿ ಆಯತಪ್ಪಿ ನೀರಿಗೆ ಬಿದ್ದ ಯುವಕನೊಬ್ಬ ಸತತ 2 ಗಂಟೆಗಳ ಕಾಲ ನೀರಿನಲ್ಲಿದ್ದು ಬದುಕಿ ಬಂದ ರೋಚಕ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ತುಂಬೆ ಡ್ಯಾಂ(Thumbe Dam) ಬಳಿ ಇರ್ಷಾದ್‌ ಎಂಬ ಯುವಕ ಮೀನಿಗೆ ಗಾಳ ಹಾಕುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ, ಈ ವೇಳೆ ಡ್ಯಾಂನಿಂದ ಹೊರಕ್ಕೆ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಸಿಲುಕಿಕೊಂಡಿದ್ದಾನೆ. ಸುಮಾರು 2 ತಾಸುಗಳ ಕಾಲ ಈಜಾಡಿ ಕೊನೆಗೆ ಡ್ಯಾಂ ಸಿಬ್ಬಂದಿ ಹಾಗೂ ಬಂಟ್ವಾಳ ಅಗ್ನಿಶಾಮಕ ದಳದವರ ನೆರವಿನಿಂದ ಮೇಲಕ್ಕೆ ಸುರಕ್ಷಿತವಾಗಿ ಬಂದಿದ್ದಾನೆ.

ರಾತ್ರಿ ಸುಮಾರು 8 ಗಂಟೆಗೆ ಇರ್ಷಾದ್ ನೀರಿಗೆ ಬಿದ್ದಿದ್ದಾನೆ.  ಆತ 2 ಗಂಟೆಗಳ ಕಾಲ ಈಜಿ ಜೀವ ಉಳಿಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಡ್ಯಾಂ ಸಿಬಂದಿಗೆ ಎಲ್ಲಿಂದಲೋ ಬೊಬ್ಬೆ ಕೇಳಿದ್ದು, ಹೋಗಿ ನೋಡಿದಾಗ ವ್ಯಕ್ತಿಯೋರ್ವ ನೀರಿನಲ್ಲಿ ಒದ್ದಾಡುತ್ತಿರುವುದು ಕಂಡಿದೆ. ಕೂಡಲೇ ಡ್ಯಾಂ ಸಿಬಂದಿ ಅಗ್ನಿಶಾಮಕ ದಳ, ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಎಲ್ಲರೂ ಸೇರಿ ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಜು ಬಂದಿದ್ದರಿಂದ ಯುವಕ ಬದುಕಿ ಉಳಿದಿದ್ದಾನೆ.

 

Leave A Reply

Your email address will not be published.