Siddaramaiah: ಪಟಾಕಿ ಅಂಗಡಿ ದುರಂತ ಸ್ಥಳ ವೀಕ್ಷಿಸಿದ ಸಿದ್ದರಾಮಯ್ಯ:  ಪ್ರಕರಣ ಸಿಓಡಿ ತನಿಖೆಗೆ !

Firecracker accident investigation to COD

Siddaramaiah: ಪಟಾಕಿ ಶೇಖರಿಸಿಟ್ಟಿದ್ದ ಜಾಗದಲ್ಲಿ ಸ್ಪೋಟಕಗಳಿಗೆ  ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ, ಮಾಲೀಕರ ನಿರ್ಲಕ್ಷ್ಯವೇ ಇದಕ್ಕೆಲ್ಲಾ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಹೇಳಿದ್ದಾರೆ. ಈ ಸಂದರ್ಭದಲ್ಲಿ ಪ್ರಕರಣವನ್ನು ಸಿಐಡಿ(CID) ತನಿಖೆಗೆ ವಹಿಸುವುದಾಗಿ ಘೋಷಿಸಿದ್ದಾರೆ.

ಅತ್ತಿಬೆಲೆ(Attibele)ಯಲ್ಲಿ ನಡೆದ ಪಟಾಕಿ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸೀಎಂರವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಿನ್ನೆ ಸುಮಾರು ಮಧ್ಯಾಹ್ನ 3.30ಕ್ಕೆ ಬೆಂಕಿ ಅನಾಹುತ ನಡೆದಿದೆ. ಅವಘಡ ನಡೆದಿರುವುದು ದುರಾದೃಷ್ಟಕರ ಸಂಗತಿ. ರಾಮಸ್ವಾಮಿ ರೆಡ್ಡಿಯವರು ಲೈಸೆನ್ಸ್ ತೆಗೆದುಕೊಂಡು ಪಟಾಕಿ ಮಾರಾಟ ಮಾಡುತ್ತಿದ್ದರು’ ಎಂದರು. ‘ಅಲ್ಲಿ ಮೊದಲಿಗೆ ಬೆಂಕಿ ಹೇಗೆ ಹೊತ್ತಿಕೊಂಡಿತು, ಪಟಾಕಿ ಹೇಗೆ ಸ್ಪೋಟವಾಯಿತು ಎನ್ನುವುದಕ್ಕೆ ಇನ್ನೂ ಯಾವುದೇ ಕಾರಣ ಪತ್ತೆಯಾಗಿಲ್ಲ. ಇಲ್ಲಿಯವರೆಗೂ ನಿಖರ ಕಾರಣ ಗೊತ್ತಾಗಿಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಪಟಾಕಿ ಗೋಡೌನ್ ನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳು ಇರಲಿಲ್ಲ’ ಎಂದು ಅವರು ಹೇಳಿದ್ದಾರೆ.

ಪಟಾಕಿ ದುರಂತದಲ್ಲಿ 14 ಜನ ಮೃತಪಟ್ಟಿದ್ದಾರೆ, ಎಲ್ಲರೂ ಕೂಡ ತಮಿಳುನಾಡಿನವರು. ಅನೇಕರು ಧರ್ಮಪುರಿ, ಕೃಷ್ಣಗಿರಿ ಭಾಗದವರು. ಎಲ್ಲರೂ ತಾತ್ಕಾಲಿಕವಾಗಿ ಕೆಲಸ ಮಾಡ್ತಿದ್ದವರು. ಸ್ಪೋಟಕಗಳಿಗೆ ಬೇಕಾದ ಸೇಫ್ಟಿ ಮೆಶರ್ಸ್ (ಮುಂಜಾಗ್ರತಾ ಕ್ರಮ) ತೆಗೆದುಕೊಂಡಿಲ್ಲ. ಮಾಲೀಕರ ನಿರ್ಲಕ್ಷ್ಯವೇ ಇದಕ್ಕೆಲ್ಲಾ ಮೂಲ ಕಾರಣ’ ಎಂದು ಅವರು ದೂರಿದ್ದಾರೆ.
ಪಟಾಕಿ ದುರಂತದಲ್ಲಿ ತಮಿಳುನಾಡು ಮೂಲದ ಗಿರಿ ಬಿನ್ ವೇಡಿಯಪ್ಪನ್, ಸಚಿನ್ ಬಿನ್ ಲೇಟ್ ವೇಡಿಯಪ್ಪನ್, ವಿಜಯ ರಾಘವನ್, ವಿಳಂಬರತಿ ಬಿನ್ ಸೆಂದಿಲ್, ಆಕಾಶ ಬಿನ್ ರಾಜಾ, ವೆಡಿಯಪ್ಪನ್, ಆದಿಕೇಶವ ಬಿನ್ ಪೆರಿಯಾಸ್ವಾಮಿ, ಪ್ರಕಾಶ್ ಬಿನ್ ರಾಮು, ವಸಂತರಾಜು ಬಿನ್ ಗೋವಿಂದ ರಾಜು, ಅಬ್ಬಾಸ್ ಬಿಸ್ ಶಂಕರ್, ಪ್ರಭಾಕರನ್ ಬಿನ್ ಗೋಪಿನಾಥ್, ನಿತೀಶ್ ಬಿನ್ ಮೇಘನಾಥ್, ಸಂತೋಷ್ ಬಿನ್ ಕುಮಾರ್ ಮೃತಪಟ್ಟಿದ್ದರು ಮತ್ತು ಇನ್ನೊಬ್ಬನ ಹೆಸರು ಗುರುತು ಇನ್ನೂ ಪತ್ತೆಯಾಗಿಲ್ಲ.

‘ಜಿಲ್ಲಾಧಿಕಾರಿಗಳು ಕೂಡ ಸಂಪೂರ್ಣ ಪರಿಶೀಲನೆ ನಡೆಸಿ ಲೈಸೆನ್ಸ್ ನೀಡಬೇಕಿತ್ತು. ಪ್ರಕರಣ ತನಿಖೆಯನ್ನು ಸಿಐಡಿಗೆ ವಹಿಸುತ್ತೇನೆ. ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲಾಗುವುದು. ಗಾಯಾಳುಗಳ ಆಸ್ಪತ್ರೆ ಚಿಕಿತ್ಸೆ ವೆಚ್ಚವನ್ನೂ ಸರ್ಕಾರವೇ ಭರಿಸುತ್ತದೆ. ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಗೆ ಸೂಚಿಸುತ್ತೇನೆ. ಇದು ಬಹು ದೊಡ್ಡ ದುರಂತ. ಸತ್ತವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಯಸುತ್ತೇನೆ, ತಪ್ಪಿತಸ್ಥರ ವಿರುದ್ಧ ಕೇಸ್ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಕ್ರಮ ವಹಿಸಲಾಗುವುದು’ ಎಂದರು.

ಪರಿಶೀಲನೆ ವೇಳೆ ಸಿಎಂ ಸಿದ್ದರಾಮಯ್ಯ ಅವರ ಜತೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಇದ್ದರು. ದುರಂತದ ತೀವ್ರತೆ ಬಗ್ಗೆ ಸಿಎಂ ಹಾಗೂ ಡಿಸಿಎಂ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಜತೆಗೆ, ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡಾ ಘಟನಾ ಸ್ಥಳಕ್ಕೆ ಭೇಡಿ ಕೊಟ್ಟರು. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿವಕುಮಾರ್ಗೆ ದುರಂತದ ಬಗ್ಗೆ ಡಿಜಿಪಿ ಕಮಲ್ ಪಂತ್ ಮಾಹಿತಿ ನೀಡಿದರು.

ಈ ಮಧ್ಯೆ ಪಟಾಕಿ ಅಂಗಡಿ ಮಾಲೀಕ ನನ್ನು ನಿರ್ಲಕ್ಷ್ಯದ ಆಧಾರದ ಮೇಲೆ ಬಂಧಿಸಲಾಗಿದೆ.

ಇದನ್ನೂ ಓದಿ: Big Boss Season 10: ಈ ಬಾರಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ ಖ್ಯಾತ ಆಂಕರ್

Leave A Reply

Your email address will not be published.