Big Boss Season 10: ಈ ಬಾರಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ ಖ್ಯಾತ ಆಂಕರ್

gaurish-akki-entered-bigboss-house

Big Boss Season 10: ಬಿಗ್ ಬಾಸ್ ಸೀಸನ್ 10ಕ್ಕೆ ಇಂದು ಸಂಜೆ ಚಾಲನೆ ಸಿಗಲಿದೆ. ಈ ಬಾರಿ ದೊಡ್ಮನೆ ಯಾರೆಲ್ಲಾ ಪ್ರವೇಶ ಮಾಡ್ತಾರೆ ಅನ್ನೋ ಕುತೂಹಲದ ಮಧ್ಯೆ ಒಂದಷ್ಟು ಹೆಸರುಗಳು ಓಡಾಡ ತೊಡಗಿವೆ. ಹೀಗಿರುವಾಗಲೇ ಖ್ಯಾತ ನ್ಯೂಸ್ ಆಂಕರ್ (News Anchor) ಒಬ್ಬರು ದೊಡ್ಮನೆಗೆ ಎಂಟ್ರಿ ಕೊಡೋದು ಪಕ್ಕಾ ಆಗಿದೆ. ಕಳೆದ ಸೀಸನ್ ನಲ್ಲಿ ಆಂಕರ್ ಸೋಮಣ್ಣ ಮಾಚಿಮಾಡ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿದ್ದರು. ಇದೀಗ ಮತ್ತೊಬ್ಬ ಖ್ಯಾತ ನ್ಯೂಸ್ ಆಂಕರ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ.

ಹೌದು.. ಹಿರಿಯ ಆಂಕರ್ ಗೌರೀಶ್ ಅಕ್ಕಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡೋದು ಪಕ್ಕಾ ಆಗಿದೆ. ಗೌರೀಶ್ ಅವರ ಸ್ನೇಹಿತರೇ ಈ ಸುದ್ದಿಯನ್ನು ಕನ್ಫರ್ಮ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಗೆಳೆಯನಿಗೆ ಶುಭ ಹಾರೈಸಿದ್ದಾರೆ.

ಉಪನ್ಯಾಸಕರಾಗಿ ವೃತ್ತಿ ಬದುಕು ಆರಂಭಿಸಿದ  ಗೌರೀಶ್ ಅಕ್ಕಿ ಮೊದಲಿಗೆ  ನ್ಯೂಸ್ ರೀಡರ್ ಆಗಿ ಈಟಿವಿಯಿಂದ ತಮ್ಮ ಮಾಧ್ಯಮ ಜರ್ನಿ ಆರಂಭಿಸಿದರು. ಬಳಿಕ TV9Kannada , SuvarnaNews Samayanews, Suddi Tv,  Kasturinews ವಾಹಿನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಹಲವಾರು ಹಿರಿ-ಕಿರಿಯ ಚಿತ್ರತಾರೆಗಳನ್ನು ಸಂದರ್ಶನ ಮಾಡಿರುವ ಕೀರ್ತಿ ಇವರದು. ಪ್ರೋಗ್ರಾಂ ಪ್ರೊಡ್ಯೂಸರ್, ಚಲನಚಿತ್ರ ನಿರ್ದೇಶನ ತದನಂತರ ಈಗ ಪ್ರಸ್ತುತ Alma Media School Gaurish Akki Studio ಮುಖಾಂತರ ಸ್ವಂತ ಸಂಸ್ಥೆಯನ್ನ ಸ್ಥಾಪಿಸಿ ಹಲವರಿಗೆ ಉದ್ಯೋಗವನ್ನ ನೀಡಿದ್ದಾರೆ. ಇದೀಗ ಬಿಗ್ ಬಾಸ್ (Big Boss Season 10)ಮನೆಗೆ ಎಂಟ್ರಿ ಕೊಡುವ ಮೂಲಕ ಹೊಸ ಹಾದಿಯಲ್ಲಿದ್ದಾರೆ. ಬಿಗ್ ಬಾಸ್ ಅವರ ಬದುಕಿಗೆ ಯಾವ ರೀತಿ ಟರ್ನಿಂಗ್ ಪಾಯಿಂಟ್ ಆಗುತ್ತೆ ಅನ್ನೋದನ್ನು ಕಾದು ನೋಡ್ಬೇಕಿದೆ

Leave A Reply

Your email address will not be published.