Dharwad:ಸಿಬಿಐ ಅಧಿಕಾರಿಗಳು ಬಂಧಿಸ್ತಾರೆಂದು ಹಿಂಬಾಗಿಲಿನಿಂದ ಓಡಿ ಪರಾರಿಯಾದ ಪೊಲೀಸ್ ಇನ್ಸ್ ಪೆಕ್ಟರ್

Inspector escaped from cbi officials

Dharwad:ಸಿಬಿಐ(CBI) ಅಧಿಕಾರಿಗಳು ಬಂಧಿಸ್ತಾರೆಂದು ಹಿಂಬಾಗಿಲಿನಿಂದ ಪೊಲೀಸ್ ಇನ್ಸ್ ಪೆಕ್ಟರ್ (Police Inspector) ಓಡಿ ಪರಾರಿಯಾದ ಘಟನೆ ಧಾರವಾಡ(Dharwad) ದಲ್ಲಿ ನಡೆದಿದೆ.

ಧಾರವಾಡ ಜಿಲ್ಲಾ ಪಂ‌ಚಾಯತ್ ಸದಸ್ಯರಾಗಿದ್ದ ಯೋಗೀಶ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಮತ್ತೆ ಸಿಬಿಐ ತನಿಖೆಗೆ ಮುಂದಾಗಿದ್ದು, ಬಂಧನಕ್ಕೆ ಹೆದರಿ ಪೊಲೀಸ್ ಇನ್ಸ್ ಪೆಕ್ಟರ್ ಪರಾರಿಯಾಗಿದ್ದಾರೆ.

ಹತ್ಯೆ ಪ್ರಕರಣದ ಹಿಂದಿನ ತನಿಖಾಧಿಕಾರಿ ಚೆನ್ನಕೇಶವ ಟಿಂಗರಿಕರ್ ಮನೆಗೆ ಸಿಬಿಐ ದಾಳಿ ನಡೆಸಿ ಟಿಂಗರಿಕರ್ ಬಂಧನಕ್ಕೆ ಮುಂದಾಗಿತ್ತು.ಸಿಬಿಐ ಅಧಿಕಾರಿಗಳು ಧಾರವಾಡದ ಮಲಪ್ರಭಾ ನಗರದಲ್ಲಿರುವ ಮನೆಗೆ  ಬರುತ್ತಿದ್ದಂತೆಯೇ ಇನ್ಸ್ ಪೆಕ್ಟರ್ ಟಿಂಗರಿಕರ್ ಪರಾರಿಯಾಗಿದ್ದಾರೆ.

ಸದ್ಯ ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ ಚನ್ನಕೇಶವ ಟಿಂಗರಿಕರ್ ಯೋಗೇಶ್ ಗೌಡ ಹತ್ಯೆ ನಡೆದಾಗ ಧಾರವಾಡ ಉಪನಗರ ಠಾಣೆ ಇನ್ಸ್ಪೆಕ್ಟರ್ ಆಗಿದ್ದರು.

ಧಾರವಾಡ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದ ಟಿಂಗರಿಕರ್, ಬಳಿಕ ಎಫ್‌ಐಆರ್‌ಗೆ ತಡೆ ತರಲು ಯತ್ನಿಸಿಹೈಕೋರ್ಟ್ ಮೊರೆ ಹೋಗಿದ್ದರು. ಕಳೆದ ವಾರ ಹೈಕೋರ್ಟ್ ಅರ್ಜಿ ವಜಾಗೊಳಿಸಿದ್ದು, ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ನಡೆದಿದ್ದ ವಿಚಾರಣೆಗೆ ಟಿಂಗರಿಕರ್ ಗೈರಾಗಿದ್ದರು.ಈ ಹಿನ್ನೆಲೆಯಲ್ಲಿ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಬಂಧನಕ್ಕೆ ಬಂದಿದ್ದರು.

ಸಿಬಿಐ ಅಧಿಕಾರಿಗಳು ಬರುತ್ತಲೇ ಮನೆಯ ಹಿಂದಿನ ಬಾಗಿಲಿನಿಂದ ಇನ್ಸ್ ಪೆಕ್ಟರ್ ಚನ್ನಕೇಶವ ಟಿಂಗರಿಕರ್ ಇಂದು ಪರಾರಿಯಾಗಿದ್ದಾರೆ.2016ರ ಜೂನ್ 15 ರಂದು ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ ಗೌಡ ಹತ್ಯೆ ನಡೆದಿತ್ತು.

Leave A Reply

Your email address will not be published.