Chennai: ಜವಬ್ದಾರಿ ಮರೆತು ವೀಲೀಂಗ್ ಮಾಡುತ್ತಿದ್ದ ಯೂಟ್ಯೂಬರ್;10 ವರ್ಷ ಮತ್ತೆ ಬೈಕ್ ಮುಟ್ಟದಂತೆ ಶಾಕ್ ಕೊಟ್ಟ ಆರ್ ಟಿಓ

YouTuber TTF Vasan’s driving licence suspended for 10 years

Chennai; ಚೆನ್ನೈ; ಸೆಲೆಬ್ರೆಟಿಗಳು ಅನ್ನಿಸಿಕೊಂಡವರು ಜವಬ್ದಾರಿ ಮರೆತು ವರ್ತಿಸದರೆ ಏನಾಗುತ್ತೆ ಅನ್ನೋದಕ್ಕೆ ಈ ಘಟನೆ ಪ್ರತ್ಯಕ್ಷ ಸಾಕ್ಷಿ. ನಾನು ಯೂಟ್ಯೂಬರ್(Youtuber), ಸಾಕಷ್ಟು ಫಾಲೋವರ್ಸ್ (Followers)ಇದ್ದಾರೆ. ಏನ್ ಬೇಕಾದ್ರೂ ಮಾಡ್ಬೋದು ಅಂತಾ ಅಂತಾ ವರ್ತಿಸಿದ್ದ ಯೂಟ್ಯೂಬರ್ ಒಬ್ಬನಿಗೆ ಆರ್ ಟಿ ಓ ಅಧಿಕಾರಿಗಳು ಚೆನ್ನಾಗಿಯೇ ಬಿಸಿ ಮುಟ್ಟಿಸಿದ್ದಾರೆ.

ಹೌದು…ತಮಿಳಿನ ಖ್ಯಾತ ಟಿಟಿಎಫ್ ವಾಸನ್ (TTF Vasan) ಸುಮಾರು 45 ಲಕ್ಷಕ್ಕೂ ಅಧಿಕ ಸಬ್ ಸ್ಕ್ರೈಬರ್ ನ್ನು ಹೊಂದಿದ್ದಾರೆ. ಆದರೆ ಸಾಮಾಜಿಕ ಜವಬ್ದಾರಿ ಬಗ್ಗೆ ಅವರಿಗೆ ಅರಿವಿಲ್ಲ. ಇತ್ತೀಚೆಗೆ ಕಾಂಚಿಪುರಂ(Kanchipuram) ಬಳಿಯ ಥಮಲ್ ಪ್ರದೇಶದ ಚೆನ್ನೈ-ವೆಲ್ಲೂರು ಹೆದ್ದಾರಿಯಲ್ಲಿ ವೇಗವಾಗಿ, ಅಜಾಗರೂಕತೆಯಿಂದ ಮತ್ತು ಅಪಾಯಕಾರಿ ರೀತಿಯಲ್ಲಿ ದ್ವಿಚಕ್ರ ವಾಹನವನ್ನು ವೀಲಿಂಗ್ ಮಾಡಿದ್ದರು. ಅಲ್ಲದೆ ವೀಲಿಂಗ್ ವೇಳೆ ಬಿದ್ದು ಗಾಯ ಮಾಡಿಕೊಂಡಿದ್ದರು. ಈ ಘಟನೆ ಕುರಿತಂತೆ ಬಾಲುಚೆಟ್ಟಿ ಛತ್ರಂ ಪೊಲೀಸರು ಪ್ರಕರಣ ದಾಖಲಿಸಿ ಟಿಟಿಎಫ್ ವಾಸನ್ ಅವರನ್ನು ಸೆಪ್ಟೆಂಬರ್ 19 ರಂದು ಬಂಧಿಸಿದ್ದರು. ಇನ್ನು ಸ್ಥಳೀಯ ನ್ಯಾಯಾಲಯ ಜಾಮೀನು ನೀಡದ ಹಿನ್ನಲೆ ಟಿಟಿಎಫ್ ವಾಸನ್ ಪರವಾಗಿ ಮದ್ರಾಸ್ ಹೈಕೋರ್ಟ್ ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅಲ್ಲೂ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು.

ಇದಾದ ಬೆನ್ನಲ್ಲೇ ಟಿಟಿಎಫ್ ವಾಸನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಇನ್ನು ಹತ್ತು ವರ್ಷಗಳ ಕಾಲ ಅವರ ಚಾಲನಾ ಪರವಾನಗಿಯನ್ನು ಸಾರಿಗೆ ಇಲಾಖೆ ರದ್ದುಗೊಳಿಸಿದೆ. ವಾಸನ್ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ, ವಿಶೇಷವಾಗಿ ಯೂಟ್ಯೂಬ್‌ನಲ್ಲಿ ಗಮನಾರ್ಹ ಅನುಯಾಯಿಗಳನ್ನು ಹೊಂದಿದ್ದಾರೆ, ಅಲ್ಲಿ ಅವರು ಸಾರ್ವಜನಿಕ ರಸ್ತೆಗಳಲ್ಲಿ ಬೈಕ್ ಸ್ಟಂಟ್‌ಗಳು, ರೇಸಿಂಗ್, ವೀಲಿಗಳು ಇತ್ಯಾದಿಗಳ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. ಆದರೆ ಇಂತಹ ವೀಡಿಯೋಗಳನ್ನು ಪೋಸ್ಟ್ ಮಾಡಿ ಯುವಕರನ್ನು ಪ್ರಚೋದಿಸುವುದರಿಂದ ಅವರ ಲೈಸನ್ಸ್ ರದ್ದು ಮಾಡಿದ್ದಾರೆ.

ಇದನ್ನೂ ಓದಿ: Bengaluru: ಪಟಾಕಿ ಅಂಗಡಿಯಲ್ಲಿ ಭಾರೀ ಸ್ಪೋಟ, 13 ಜನ ಪಟಾಕಿ ಜತೆ ಸ್ಪೋಟ – ಜೀವಂತ ದಹನ !

Leave A Reply

Your email address will not be published.