ದಕ್ಷಿಣಕನ್ನಡ: ತಾನು ಭೂಗತ ಲೋಕದ ಪಾತಕಿ ಎಂದು ಹೇಳಿಕೊಂಡ ವ್ಯಕ್ತಿಯಿಂದ ನಿರಂತರ ಬೆದರಿಕೆ ಕರೆ; ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ವಕೀಲರು

A lawyer in Puttur received a threatening call from a person who claimed to be an underworld don

Threat Call to Lawyer: ತಾನು ಭೂಗತ ಲೋಕದ ಪಾತಕಿ(Under World Don) ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ವಕೀಲರೊಬ್ಬರಿಗೆ ನಿರಂತರ ಬೆದರಿಕೆ ಕರೆ ಮಾಡುತ್ತಿದ್ದ ಹಿನ್ನೆಲೆ ಇದೀಗ ಅವರು ಪುತ್ತೂರು(Puttur) ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪುತ್ತೂರಿನ ನಗರದ ಪುತ್ತೂರು ಸೆಂಟರ್ ಕಟ್ಟಡದಲ್ಲಿ ಕಚೇರಿ ಹೊಂದಿ ವಕೀಲರಾಗಿ ಕೆಲಸ ಮಾಡುತ್ತಿರುವ ಪ್ರಶಾಂತ್ ಪಿ. ರೈ ಎಂಬವರಿಗೆ ತಾನು ಭೂಗತ ಲೋಕದ ಪಾತಕಿ ಜಗ್ಗು ಶೆಟ್ಟಿ ಯಾನೆ ಜಗದೀಶ್ ಶೆಟ್ಟಿ ಎಂದು ಹೇಳಿ ಮೊದಲಿಗೆ ಕಳೆದ ಮೇ.2ರಂದು ರಾತ್ರಿ ಮೊಬೈಲಿಗೆ ಕರೆ ಮಾಡಿದ್ದಾನೆ. ಈ ವೇಳೆ ಆತ ತನ್ನನ್ನು ಭೂಗತ ಲೋಕದ ಪಾತಕಿ ಜಗ್ಗು ಶೆಟ್ಟಿ ಯಾನೆ ಜಗದೀಶ್ ಶೆಟ್ಟಿ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ  ನೀನು ಪುತ್ತೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿ ತುಂಬಾ ಹಣ ಗಳಿಸಿದ್ದಿಯಾ. ಆ ಹಣದಿಂದ ಜಮೀನು, ಕಟ್ಟಡಗಳು ಹಾಗೂ ಸ್ವತ್ತುಗಳನ್ನು ಹೊಂದಿದ್ದೀಯಾ ಎಂದು ಪ್ರಶ್ನಿಸಿದ್ದಾನೆ. ಈ ವಿಚಾರ ನಿನಗ್ಯಾಕೆ ಎಂದು ಪ್ರಶ್ನಿಸಿದಾಗ ಆತ ಬೆದರಿಕೆಯೊಡ್ಡಿ ನನಗೆ ರೂ.25 ಲಕ್ಷ ಹಣವನ್ನು ನಾನು ಕಳುಹಿಸಿಕೊಡುವ ರೌಡಿ ಗ್ಯಾಂಗಿನ ಸದಸ್ಯರಲ್ಲಿ ನೀಡಬೇಕು ಎಂದು ಬೆದರಿಕೆಯೊಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೊದಲಿಗೆ ಈ ಬೆದರಿಕೆ ಕರೆಯನ್ನು ತಾನು ನಿರ್ಲಕ್ಷಿಸಿದ್ದೆ. ಆದರೆ ಆ ಬಳಿಕ ಜುಲೈ6ರಂದು ಸಂಜೆ ತಾನು ತನ್ನಿಬ್ಬರು ಕಕ್ಷಿದಾರ ರೊಂದಿಗೆ ನ್ಯಾಯಾಲಯದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಳಿಗೆ ಬಂದು ತಮ್ಮನ್ನು ಬಾಸ್ ಜಗ್ಗು ಶೆಟ್ಟಿ ಅವರು ಕಳುಹಿಸಿಕೊಟ್ಟಿದ್ದಾರೆ. ನಮ್ಮಲ್ಲಿ ರೂ.25 ಲಕ್ಷ ಹಣ ನೀಡಬೇಕು. ತಪ್ಪಿದಲ್ಲಿ ನಿಮ್ಮನ್ನು ಕೊಲೆ ಮಾಡಲು ಬಾಸ್ ಆದೇಶ ನೀಡಿದ್ದಾರೆ ಎಂದು ಬೆದರಿಕೆಯೊಡ್ಡಿ ಅಲ್ಲಿಂದ ಕಣ್ಮರೆಯಾಗಿದ್ದಾರೆ. ಆಗಸ್ಟ್ ತಿಂಗಳಲ್ಲಿಯೂ ಕೆಲವು ಅನುಮಾನಾಸ್ಪದ ವ್ಯಕ್ತಿಗಳು ತನ್ನ ಕಚೇರಿ ಬಳಿ ಸುತ್ತಾಡುವುದು ಕಂಡು ಬಂದಿದೆ ಎಂದು ವಕೀಲ ಪ್ರಶಾಂತ್ ರೈ ಅವರು ಪುತ್ತೂರು ನ್ಯಾಯಾಲಯಕ್ಕೆ ನೀಡಿದ ಖಾಸಗಿ ದೂರಿನಲ್ಲಿ ಆರೋಪಿಸಿದ್ದಾರೆ.ಇದೀಗ ನ್ಯಾಯಾಲಯದ ಆದೇಶದಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Dakshinakannada; ಮುಸ್ಲಿಂ ಹೆಂಗಸರಿಗೆ ತುಂಬಾ ಅಹಂಕಾರ ಎಂದ ಬಸ್ ಕಂಡೆಕ್ಟರ್ ವಿರುದ್ಧ ದೂರು ದಾಖಲು

Leave A Reply

Your email address will not be published.