ದಕ್ಷಿಣಕನ್ನಡ: ಚಲಿಸುತ್ತಿದ್ದ ಬಸ್ ಹತ್ತಲು ಯತ್ನಿಸಿ ರಸ್ತೆಗೆ ಎಸೆಯಲ್ಪಟ್ಟು ವ್ಯಕ್ತಿ ಸಾವು

Man-fell-down-from-bus-and-died-in-sullia

Man Fell down from Bus: ಚಲಿಸುತ್ತಿದ್ದ ಬಸ್(Bus) ಹತ್ತಲು ಯತ್ನಿಸಿ ರಸ್ತೆಗೆ ಎಸೆಯಲ್ಪಟ್ಟು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಸುಳ್ಯ(Sullia)ದ ಆಲೆಟ್ಟಿ ಕ್ರಾಸ್ ಬಳಿ ನಡೆದಿದೆ.

ಆಲೆಟ್ಟಿ ಗ್ರಾಮದ ಕೂಳಿಯಡ್ಕ ಕರುಣಾಕರ ಅವರು ಸುಳ್ಯ ಆಲೆಟ್ಟಿ ಕ್ರಾಸ್ ಬಳಿ ಚಲಿಸುತ್ತಿದ್ದ ಖಾಸಗಿ ಬಸ್ ಹತ್ತಲು ಹೋಗಿದ್ದಾರೆ. ಈ ವೇಳೆ ಬಸ್ಸಿನ ಬಾಗಿಲು ತಳ್ಳಲ್ಪಟ್ಟು ರಸ್ತೆಗೆ ಆಯತಪ್ಪಿ ಬಿದ್ದಿದ್ದಾರೆ. ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರು ಚಿಕಿತ್ಸೆಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

 

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮನೆಗೆ ಹೋಗಿದ್ದಾರೆ. ಆದರೆ ಮನೆಯಲ್ಲೇ ಮರುದಿನ ಮುಂಜಾನೆ ಸಮಸ್ಯೆ ಉಲ್ಬಣವಾದ ಹಿನ್ನಲೆಯಲ್ಲಿ ಅವರನ್ನು ಚಿಕಿತ್ಸೆಗಾಗಿ ಮತ್ತೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪಿದ್ದಾರೆ.

Leave A Reply

Your email address will not be published.