Dakshinakannada; ಒಬ್ಬ ಹೆಣ್ಣುಮಗಳಿಂದ ಚಪ್ಪಲಿಯಿಂದ ಹೊಡೆಸಿಕೊಂಡವನಿಂದ ನಾನು ಪಾಠ ಕಲಿಯುವ ಅವಶ್ಯಕತೆ ಇಲ್ಲ; ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿಯನ್ನು ಹಿಗ್ಗಾಮುಗ್ಗಾ ಝಾಡಿಸಿದ ವಾಗ್ಮಿ ತಮ್ಮಣ್ಣ ಶೆಟ್ಟಿ.

Tammanna Shetty lashed out at Power TV Rakesh Shetty

ದಕ್ಷಿಣಕನ್ನಡ; ಒಬ್ಬ ಹೆಣ್ಣುಮಗಳಿಂದ ಚಪ್ಪಲಿಯಿಂದ ಹೊಡೆಸಿಕೊಂಡವನಿಂದ ನಾನು ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಪವರ್ ಟಿವಿ (Power TV) ಎಂಡಿ ರಾಕೇಶ್ ಶೆಟ್ಟಿ( Rakesh Shetty) ಯನ್ನು ಹಿಗ್ಗಾಮುಗ್ಗಾ ಝಾಡಿಸಿದ್ದಾರೆ ವಾಗ್ಮಿ ತಮ್ಮಣ್ಣ ಶೆಟ್ಟಿ(Tammanna Shetty).

ಸುಳ್ಯದ ಐವರ್ನಾಡಿನಲ್ಲಿ ಸೌಜನ್ಯ(Soujanya) ನ್ಯಾಯ ಪರ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದ ಅವರು ಒಬ್ಬ ಹೆಣ್ಣುಮಗಳಿಂದ ಚಪ್ಪಲಿಯಿಂದ ಪೆಟ್ಟು ತಿಂದು ಮರ್ಯಾದೆ ಕಳೆದುಕೊಂಡವನಿಂದ ನಾನು ಬುದ್ದಿ ಕಲಿಯಬೇಕಾದ ಅವಶ್ಯಕತೆ ಇಲ್ಲ. ನಿನ್ನ ಬಳಿ ನನ್ನ ಕುರಿತಾದ ದಾಖಲಿಗಳಿದ್ರೆ ನಿನ್ನ ಪೆಟ್ಟಿಗೆಯಲ್ಲಿ ಹಾಕಿ ತೋರಿಸು”. ಹೀಗೆ ಏಕವಚನದಲ್ಲೇ ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಒಬ್ಬ ಹೆಣ್ಣುಬಾಕ, ಪಿಂಪ್, ಟ್ರಾವೆಲ್ ಏಜೆಂಟ್, ಭ್ರಷ್ಟ ಬಕೆಟ್ ಪತ್ರಕರ್ತ ಎನಿಸಿಕೊಂಡವನ ಬಗ್ಗೆ ಮಾತನಾಡುವ ಅನಿವಾರ್ಯತೆ ನನಗಿಲ್ಲ. ಸೌಜನ್ಯಳಿಗೆ ನ್ಯಾಯದ ಹೋರಾಟ ನೆಪದಲ್ಲಿ ಹೋರಾಟಗಾರರ ತೇಜೋವಧೆ ಮಾಡುವ ನಿನ್ನಂತವರು ಎಷ್ಟೇ ಜನ ಬಂದರೂ ಏನೂ ಸಾಧ್ಯವಾಗದು, ಸತ್ಯ ಯಾವತ್ತಿದ್ರೂ ಸತ್ಯವೇ. ನನ್ನ ಬಗ್ಗೆ ಮಾಡಿದ ಆರೋಪಗಳಿಗೆ ನೀನು ಸಾಕ್ಷಿ ತೋರಿಸು. ನಾನು ಭಾಷಣ ಮಾಡಿದ ಅಷ್ಟೂ ಕಡೆಗಳಲ್ಲಿ ಜನರ ಕಾಲು ಹಿಡಿದು ಬರುತ್ತೇನೆ. ನಿನ್ನ ಬಗೆಗಿನ ಆರೋಪಗಳಿಗೆ ನನ್ನ ಬಳಿ ಸಾಕ್ಷಿಯಿದೆ. ನಿನಗೆ ನನ್ನ ಚಾಲೆಂಜ್ಎಂದು ತಮ್ಮಣ್ಣ ಶೆಟ್ಟಿ ಓಪನ್ ಛಾಲೆಂಜ್ ಹಾಕಿದ್ದಾರೆ.

ದೇವಸ್ಥಾನಗಳು ಜನರ ಕಷ್ಟಗಳಿಗೆ ನೆರವಾಗಬೇಕೇ ಹೊರತು ಜನರಿಗೆ ಕಷ್ಟ ನೀಡುವ ಕೇಂದ್ರಗಳಾಗಬಾರದು.‌ ನಾವು ಹಾಕಿದ ಹರಿಕೆ, ಕಾಣಿಕೆಗಳೇ ನಮಗೆ ತಿರುಗಿ ನಿಲ್ಲುತ್ತವೆ ಎಂದಾದರೆ ನಾವೇಕೆ ದೇವಸ್ಥಾನಗಳಿಗೆ ಹಣ ಹಾಕಬೇಕು?’ ಎಂದು ಶೆಟ್ಟಿ‌ ಗರಂ ಆಗಿದ್ದಾರೆ.

 

 

 

Leave A Reply

Your email address will not be published.