Emergency Alert: ಬೀಪ್ ಶಬ್ದದೊಂದಿಗೆ ನಿಮ್ಮ ಮೊಬೈಲ್ ಗೆ ಅಲರ್ಟ್ ಮೆಸ್ಸೇಜ್ ಬಂದಿಲ್ವಾ, ಹಾಗಾದ್ರೆ ಇದೇ ನೋಡಿ ಕಾರಣ !

Why do some phones not receive this beep sound message

ಮುಂಬರುವ ದಿನಗಳಲ್ಲಿ ಸಂಭವಿಸುವ ವಿಕೋಪಗಳ ಕುರಿತು ‘ಪಬ್ಲಿಕ್ ಅಡ್ರೆಸ್ ‘ಮಾಡಲು ಪ್ರತಿಯೊಬ್ಬರ ಮೊಬೈಲ್ ಗೆ ಎಚ್ಚರಿಕೆ ಸಂದೇಶ ಕಳಿಸುವ ಮಾಕ್ ಸಾರ್ವಜನಿಕ ಸಂದೇಶ (public address system) ಈಗಾಗಲೇ ಬಹುತೇಕ ಎಲ್ಲರ ಮೊಬೈಲ್ ಗೆ ಬಂದಿರಬಹುದು. ಇಂದು ಬೆಳಗ್ಗೆ ಕೂಡಾ 11.58 ರ ಹೊತ್ತಿಗೆ ಮತ್ತು ಮಧ್ಯಾಹ್ನ 12.12 ರ ಹೊತ್ತಿಗೆ ಎರಡೆರಡು ಬಾರಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ರಾಜ್ಯದ ಬಹುತೇಕರ ಮೊಬೈಲ್ಗೆ ಬೀಪ್ ಸೌಂಡ್ ಜತೆಯಲ್ಲಿ ಎಚ್ಚರಿಕೆ ಸಂದೇಶವೊಂದು ಬಂದಿದೆ. ಆದರೆ ಕೆಲವರ ಮೊಬೈಲ್ಗೆ ಈ ಸಂದೇಶ ಬಂದಿಲ್ಲವಂತೆ. ಯಾಕಿರಬಹುದು ?

ಅಲರ್ಟ್ ಮೆಸೇಜ್ ಬರದೆ ಇರಲು ಸಂಭಾವ್ಯ ಕಾರಣ:
1) ಅಲರ್ಟ್ ಮೆಸೇಜ್ ಸುಮಾರು ಕೇವಲ 30 ನಿಮಿಷ ಕಾಲಘಟ್ಟದಲ್ಲಿ ಜೀವಂತ ಇರುತ್ತದೆ. ಈ ಮೆಸೇಜು ಬಂದ ಸಂದರ್ಭ ನಿಮ್ಮ ಮೊಬೈಲ್ ಸ್ವಿಚ್ ಆಫ್ ಆಗಿದ್ದರೆ ನಿಮಗೆ ಮೆಸೇಜ್ ಬರುವುದಿಲ್ಲ.
2) ಅದರ ಅವಧಿ 30 ನಿಮಿಷ ಮಾತ್ರ ಇರುವ ಕಾರಣ ಈ ಅವಧಿಯೊಳಗೆ ನಿಮ್ಮ ಮೊಬೈಲ್ ಸ್ವಿಚ್ ಆನ್ ಆಗಿದ್ದನ್ನು ನೀವು ಮತ್ತೆ ಆನ್ ಮಾಡಿದಾಗ ಮೆಸೇಜ್ ಬರುತ್ತದೆ. ಒಂದು ವೇಳೆ ಅರ್ಧ ಗಂಟೆಗಿಂತಲೂ ಹೆಚ್ಚು ಕಾಲ ನಿನ್ನ ಮೊಬೈಲ್ ಸ್ವಿಚ್ ಆಫ್ ಇದ್ದರೆ ಈ ಮೆಸೇಜ್ ಬರೋದಿಲ್ಲ ಬರಲ್ಲ. ಜತೆಗೆ ಮೊಬೈಲ್ ಏರೋಪ್ಲೇನ್ ಮೊಡ್ ನಲ್ಲಿ ಹಾಕಿದ್ದರೆ ಕೂಡಾ ಅಲರ್ಟ್ ಮೆಸೇಜ್ ಬರುವುದಿಲ್ಲ.
3) ಏರ್ಟೆಲ್, ಜಿಯೋ, ವೊಡಾಫೋನ್ ಇತ್ಯಾದಿ ಟೆಲಿಕಾಂ ಕಂಪನಿಗಳ ಬಳಕೆದಾರರಿಗೆ ಪ್ರತ್ಯೇಕವಾಗಿ ಈ ಅಲರ್ಟ್ ಮೆಸೇಜ್ ತಲುಪಿರುತ್ತದೆ.
4) ನೀವು ಬಳಸುವ ಮೊಬೈಲ್ ಹಳೆಯದ್ದು, ಆಗಿದ್ದರೆ ಕೂಡಾ ಎಮರ್ಜೆನ್ಸಿ ಅಲರ್ಟ್ ಬರದೇ ಹೋಗಬಹುದು. ಎಮರ್ಜೆನ್ಸಿ ಸಿಸ್ಟಂ ವಾರ್ನಿಂಗ್ ವ್ಯವಸ್ಥೆಗೆ ನಿಮ್ಮ ಫೋನ್ ಹೊಂದಿಕೆಯಾಗಿರುವುದಿಲ್ಲ.
5) ಫೋನ್ ಸೆಟಿಂಗ್ ನಲ್ಲಿ ಎಮರ್ಜೆನ್ಸಿ ಅಲರ್ಟ್ ಸಿಸ್ಟಂ ಆಫ್ ಆಗಿರಬಹುದು. ಅಲ್ಲದೆ, ನೀವು ಬಳಸುವ ಮೊಬೈಲ್ ಸಂಖ್ಯೆ ತುಂಬಾ ದಿನಗಳಿಂದ ಆಕ್ಟಿವ್ ಆಗಿ ಇರದೆ ಇರಬಹುದು.

ಇವತ್ತು ಬಂದ ಅಲರ್ಟ್ ಮೆಸೇಜ್ ನಲ್ಲಿ ಏನಿತ್ತು?
ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ (Alert Test Message) ಸಂದೇಶವಾಗಿದೆ. ಯಾವುದೇ ರೀತಿಯ ಪ್ರತಿಕ್ರಿಯೆಯ ನಿಮ್ಮ ಕಡೆಯಿಂದ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ ಹೊಸ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ. ಇದೊಂದು ಟ್ರಯಲ್ ಮೆಸ್ಸೇಜ್. ಇದು ಸಾರ್ವಜನಿಕರನ್ನು ಎಚ್ಚರಿಸಲು ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಎಚ್ಚರಿಕೆಗಳನ್ನು ನೀಡಲು ಡಿಸೈನ್ ಮಾಡಿದ ವ್ಯವಸ್ಥೆ ಇದಾಗಿದೆ. ಎಮರ್ಜೆನ್ಸಿ ಪರಿಸ್ಥಿತಿಗಳಲ್ಲಿ ಒಟ್ಟಾರೆ ದೇಶದ ಜನರನ್ನು ಎಬ್ಬಿಸುವ ಎಚ್ಚರಿಸುವ ಜನರಿಗೆ ಅಗತ್ಯ ಸೂಚನೆಗಳನ್ನು ನೀಡಲು ಬಳಸುವ ವ್ಯವಸ್ಥೆ ಇದಾಗಿದ್ದು ಇದಕ್ಕೆ ಸೆಲ್ ಬ್ರಾಡ್ಕಾಸ್ಟಿಂಗ್ ಸಿಸ್ಟಮ್ ( Cell broadcast system) ಎನ್ನಲಾಗುತ್ತದೆ.

Leave A Reply

Your email address will not be published.