ನಮ್ರತಾ ಜೊತೆನೇ ಸಕತ್ ಫ್ಲರ್ಟ್ ಮಾಡಿದ ಬಿಗ್ ಬಾಸ್, ಅಯ್ಯೋ ಏನಾಗ್ತಿದೆ ಈ ದೊಡ್ಮನೆಯಲ್ಲಿ ?

Bigg Boss flirted with Namrata

ಬಿಗ್ ಬಾಸ್ ಸೀಸನ್ 10 ಆರಂಭವಾಗಿ ಒಂದು ವಾರ ಆಗ್ತಾ ಬಂತು. ಸಮರ್ಥರ ಅಸಮರ್ಥರ ಜಿದ್ದಾ ಜಿದ್ದಿ ಜೋರಾಗಿಯೇ ನಡೆಯುತ್ತಿದೆ. ಹಾಗೆಯೇ ನಿನ್ನೆ ನಡೆದ ಟಾಸ್ಕ್ ನಲ್ಲಿ ಅಸಮರ್ಥರೇ ವಿನ್ ಆಗಿದ್ದಾರೆ ಎನ್ನಲಾಗಿದೆ.

ಅದರ ಬೆನ್ನಲ್ಲೇ ಬಿಗ್ ಬಾಸ್ ಮೇಲೇನೆ ಗುರುತರ ಆರೋಪ ಕೇಳಿಬಂದಿದೆ. ಬಿಗ್ ಬಾಸ್ ಗೇನೇ ನಮ್ರತಾ.ಮೇಲೆ ಮನಸ್ಸಾಗಿದೆಯಂತೆ. ಇದೀಗ ಬಿಗ್ ನಮ್ರತಾಳ ಜೊತೆ ಫ್ಲರ್ಟ್ ಮಾಡ್ತಾ ಇದ್ದಾರಂತೆ. ಅದಕ್ಕೆ ಮುಖ್ಯ ಕಾರಣ, ಕ್ಯಾಪ್ಟನ್ಸಿ ಟಾಸ್ಕ್. ಹೌದು, ಯಾಕಂದ್ರೆ ಮನೆಯ ನಾಯಕನಾಗಿ ಸೆಲೆಕ್ಟ್ ಮಾಡುವಾಗ ಸ್ನೇಹಿತ್, ನಮ್ರತಾ ಮತ್ತು ತುಕಾಲಿ ಸಂತೋಷ್ ಉಳಿದುಕೊಂಡಿದ್ರು.

ರೌಂಡ್ ಆಕಾರಾದ ಮೇಲೆ ಯಾರು ಎಷ್ಟೊ ಹೊತ್ತು ನಿಲ್ಲುತ್ತಾರೋ ಅವರೇ ಮನೆಯೆ ನಾಯಕ ಎಂದು ಬಿಗ್ ಬಾಸ್ ಟಾಸ್ಕ್ ಕೊಟ್ಟಿದ್ದರು. 2 ರಿಂದ 3 ಗಂಟೆಗಳ ಕಾಲ ಕಷ್ಟಪಟ್ಟು ಮೂರು ಜನನೂ ನಿತ್ತಾಗ, ಅವರಿಗೆ ಪ್ರೋತ್ಸಾಹ ನೀಡುವುದಾಗಿ ಬಿಗ್ ಬಾಸ್ ಒಂದಷ್ಟು ಮಾತುಗಳನ್ನು ಆಡುತ್ತಾರೆ.

ಆ ಮಾತು ಏನು?
ಕೊನೆಯ 3 ಸ್ಪರ್ಧಿಗಳಿಗೆ ಪ್ರೋತ್ಸಾಹ ತುಂಬುವ ಸಲುವಾಗಿ. ನಮ್ರತಾಳಿಗೆ ಬಿಗ್ ಬಾಸ್ “ನಮ್ರತ ನಿಮ್ಮ ನಗು ತುಂಬಾ ಚೆನ್ನಾಗಿದೆ, ಈ ನಗುವಿನ ಹಿಂದೆ ಏನು ಸೀಕ್ರೇಟ್? ” ಎಂದು ಕೇಳುತ್ತಾರೆ. ಆಗ ನಮ್ರತಾಳಿಗೆ ನೋವು ಮರೆತು ನಗುತ್ತಾ, ‘ಹೋ ಬಿಗ್ ಬಾಸ್ ,ನನ್ ಜೊತೆ ಫ್ಲರ್ಟ್ ಮಾಡಿದ ಮೊದಲ ಹುಡುಗ ನೀವೇ’ ಅಂತ ನಗುತ್ತಾ ಹೇಳುತ್ತಾರೆ.

ನಂತರ ಸ್ನೇಹಿತ್ ಮತ್ತು ತುಕಾಲಿ ಸಂತೋಷ್’ಗೂ ಒಂದಷ್ಟು ಪ್ರೋತ್ಸಾಹದ ಮಾತುಗಳನ್ನು ಹೇಳುತ್ತಾರೆ ಬಿಗ್ ಬಾಸ್. ಕೊನೆಗೆ ಅಷ್ಟು ಕಷ್ಟ ಪಟ್ಟು ವಿನ್ ಆಗಿದ್ದು ಸ್ನೇಹಿತ್. ಬಿಗ್ ಬಾಸ್ 10 ರ ಮನೆಯ ಮೊದಲ ಕ್ಯಾಪ್ಟನ್ ಆಗಿದ್ದು ಸ್ನೇಹಿತ್.
ಯಾವ ರೀತಿಯ ಟಾಸ್ಕ್ಗಳು ಬರಲಿವೆ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಸಮರ್ಥರ ನಡುವೆ ಅಸಮರ್ಥರು – ಇಲ್ಲಿ ಯಾರೂ ಗೆಲುವನ್ನು ಸಾಧಿಸ್ತಾರೆ ಅಂತ ಕಾದು ನೋಡಬೇಕಾಗಿದೆ. ಈ ಸಾರಿ, ವಾರಗಳ ನಂತರ ಮನೆಯ ಮಂದಿಗೆ ಒಳ್ಳೆಯ ನಾನ್ ವೆಜ್ ಊಟ ಕೂಡ ಸಿಕ್ಕಿದೆ. ಬಾಸ್ ಜತೆ ಮನೆ ಮಂದಿ ಎಲ್ಲಾ ಖುಷಿಯಾಗಿದ್ದಾರೆ. ನಿಧಾನಕ್ಕೆ ಹೋಮ್ ಸಿಕ್ ಬಿಟ್ಟು ಕೊಡುತ್ತಿರುವ ಮನೆಮಂದಿ ಹೊಸ ವಾತಾವರಣಕ್ಕೆ, ಗೆಳೆತನಕ್ಕೆ, ಹೊಸ ಪ್ರೀತಿಗೆ ಒಡ್ಡಿಕೊಳ್ಳುತ್ತಿದ್ದಾರೆ.

Leave A Reply

Your email address will not be published.