Forbes India Richest List 2023: ಮೊದಲ ಸ್ಥಾನ ಯಾರಿಗೆ ? ಉದ್ಯಮಿ ಮುಖೇಶ್ ಅಂಬಾನಿಗೇ ಸ್ಪರ್ಧೆ ಒಡ್ಡಿದ 20 ವರ್ಷದ ಎಳೆಯ ಹುಡುಗ ಯಾರು ?!

Business news forbes India richest list 2023 released latest news

Forbes India Richest List 2023: ಫೋರ್ಬ್ಸ್ ಇಂಡಿಯಾ ಸಂಸ್ಥೆ ಭಾರತದ ಅತಿ ಶ್ರೀಮಂತರ ಪಟ್ಟಿ ಬಿಡುಗಡೆ(Forbes India Richest List 2023) ಮಾಡಿದ್ದು, ಭಾರತದ ಶ್ರೀಮಂತ ವ್ಯಕ್ತಿಗಳ ವಾರ್ಷಿಕ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಮುಖೇಶ್ ಅಂಬಾನಿ ಅವರು 2023 ರ ಫೋರ್ಬ್ಸ್ ಭಾರತದ 100 ಶ್ರೀಮಂತರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಈ ಸಲದ ಇಂಡಿಯಾದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿಯವರು ರಿಚ್ ಲಿಸ್ಟ್ 2023 ರಲ್ಲಿ ಭಾರತದ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಮರು ಪಡೆದುಕೊಂಡಿದ್ದಾರೆ. ಕಳೆದ ವರ್ಷ ಅತ್ಯಂತ ಶ್ರೀಮಂತ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರನ್ನು ಹಿಂದಿಕ್ಕಿದ್ದಾರೆ.

ಭಾರತದ ಟಾಪ್‌ 10 ಕುಬೇರರ ಪಟ್ಟಿ ಇಲ್ಲಿದೆ: ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಕೇಶ್‌ ಅಂಬಾನಿ 8.08 ಲಕ್ಷ ಕೋಟಿ ರೂ. ಆಸ್ತಿಯೊಂದಿಗೆ ದೇಶದ ನಂ.1 ಶ್ರೀಮಂತ. ಕಳೆದ ವರ್ಷಕ್ಕೆ ಹೋಲಿಸಿದರೆ ಅಂಬಾನಿ ಆಸ್ತಿಯಲ್ಲಿ ಕೇವಲ ಶೇಕಡಾ 2.2 ರಷ್ಟು ಮಾತ್ರವೇ ಏರಿಕೆಯಾಗಿದೆ. ಆದರೆ ಕಳೆದ ವರ್ಷದ ಮೊದಲ ಸ್ಥಾನದಲ್ಲಿದ್ದ ಗೌತಮ್‌ ಅದಾನಿ ಆಸ್ತಿ, ಹಿಂಡನ್‌ಬರ್ಗ್‌ ವರದಿ ಪ್ರಕಟ ಬಳಿಕ ಶೇಕಡಾ 57 ರಷ್ಟು ಬಿದ್ದಿದೆ. ಹಾಗಾಗಿ ಅವರ ಮೌಲ್ಯ 4.74 ಲಕ್ಷ ಕೋಟಿಗೆ ಇಳಿದ ಪರಿಣಾಮ ಅವರು 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಈ ಸಲ ಮೂರನೇ ಸ್ಥಾನಕ್ಕೆ ಹೊಸ ಮುಖ ಎಂಟ್ರಿ ಆಗಿದೆ. ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಮಾಲೀಕ ಸೈರಸ್‌ ಪೂನಾವಾಲಾ (2.78 ಲಕ್ಷ ಕೋಟಿ ರೂಪಾಯಿ) ಮೂರನೆಯ ಸ್ಥಾನದಲ್ಲಿದ್ದಾರೆ.

ಉಳಿದಂತೆ ಎಚ್‌ಸಿಎಲ್‌ನ ಶಿವ ನಾಡಾರ್‌ (2.28 ಲಕ್ಷ ಕೋಟಿ ರೂಪಾಯಿ), ಗೋಪಿಚಂದ್‌ ಹಿಂದೂಜಾ , ದಿಲೀಪ್‌ ಸಿಂಘ್ವಿ , ಲಕ್ಷ್ಮೀ ನಿವಾಸ್‌ ಮಿತ್ತಲ್‌, ರಾಧಾಕೃಷ್ಣನ್‌ ದಮಾನಿ , ಕುಮಾರ ಮಂಗಳಂ ಬಿರ್ಲಾ, ನೀರಜ್‌ ಬಜಾಜ್‌ ಕ್ರಮವಾಗಿ 4 ರಿಂದ 10 ಸ್ಥಾನದವರೆಗೆ ಸ್ಥಾನ ಪಡೆದಿದ್ದಾರೆ. ಒಟ್ಟು 138 ನಗರಗಳ 1319 ಶ್ರೀಮಂತರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಿಸಿಷನ್‌ ವೈರ್ಸ್‌ನ ಮುಖ್ಯಸ್ಥ ಮಹೇಂದ್ರ ರತಿಲಾಲ್‌ ತಮ್ಮ 94 ನೇ ವಯಸ್ಸಿನಲ್ಲಿ ಸಿರಿವಂತರ ಪಟ್ಟಿ ಸೇರಿ ಅತಿ ಹಿರಿಯ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಜಪ್ಟೋ ಸ್ಟಾರ್ಟಪ್‌ನ ಕೈವಲ್ಯ ವೋಹ್ರಾ (20 ವರ್ಷ) ಪಟ್ಟಿಯಲ್ಲಿ ಸ್ಥಾನ ಪಡೆದ ಅತಿ ಕಿರಿಯ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ರಾಜ್ಯದ 19 ಜಿಲ್ಲಾಸ್ಪತ್ರೆಗಳಲ್ಲಿ ಶ್ವಾಸಕೋಶದ ಉಚಿತ ಕ್ಯಾನ್ಸರ್ ಸ್ಕ್ರೀನಿಂಗ್, ಗುಡ್ ನ್ಯೂಸ್ ಕೊಟ್ಟ ದಿನೇಶ್ ಗುಂಡೂರಾವ್ !

Leave A Reply

Your email address will not be published.