Shivamogga: ಕರುವಿನ ತಲೆ ಪ್ರತ್ಯಕ್ಷ: ಸಾಕು ಪ್ರಾಣಿಗಳ ಆಹಾರ ತಯಾರಿಕಾ ಕಾರ್ಖಾನೆ ಮೇಲೆ ದಾಳಿ, ಹಸುಗಳ ಮಾಂಸ ಬಳಕೆ ಸಾಧ್ಯತೆ !

Karnataka news attack on pet food manufacturing factory malnad pro rich factory in shivamogga latest news

Shivamogga: ಶಿವಮೊಗ್ಗ ಜಿಲ್ಲೆಯ (Shivamogga) ಭದ್ರಾವತಿಯ (Bhadravathi) ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಸಾಕು ಪ್ರಾಣಿಗಳ ಆಹಾರ ತಯಾರಿಕಾ ಕಾರ್ಖಾನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಭದ್ರಾವತಿಯ ತುಂಗಾನಗರ ಠಾಣೆಯ ಪೊಲೀಸರು ದಾಳಿ ನಡೆಸಿದ್ದು, ಕಾರ್ಖಾನೆಯಲ್ಲಿ ಸಾಕು ಪ್ರಾಣಿಗಳ ಆಹಾರ ತಯಾರಿಕೆಗೆ ಹಸುಗಳ ಮಾಂಸ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಕಾರಣ ಈ ದಾಳಿ ನಡೆಸಿದ್ದಾರೆ.

ಪೊಲೀಸರು ಕಮಲೇಶ್ ಎಂಬವರಿಗೆ ಮಲ್ನಾಡ್ ಪ್ರೋ ರಿಚ್ (Malnad Pro Rich) ಎಂಬ ಕಾರ್ಖಾನೆ ಮೇಲೆ ದಾಳಿ ಮಾಡಿದ್ದಾರೆ. ಪಾಲಿಕೆ ವ್ಯಾಪ್ತಿಯಿಂದ ಬರುವ ಇಲ್ಲಿನ ಕಾರ್ಖಾನೆಯಲ್ಲಿ ಕೋಳಿಯ ತ್ಯಾಜ್ಯ ಸಂಗ್ರಹಿಸಿ ಆಹಾರದ ಪ್ಯಾಕೇಟ್ ಗಳನ್ನು ಸಾಕು ಪ್ರಾಣಿಗಳಿಗೆ ಸಿದ್ಧಪಡಿಸಲಾಗುತ್ತದೆ. ಆದ್ರೆ ನಿನ್ನೆ ಗುರುವಾರ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಕಾರ್ಖಾನೆಯಲ್ಲಿ ಕರುವಿನ ತಲೆ ಪತ್ತೆಯಾಗಿದೆ. ಹೀಗಾಗಿ ಈ ಸಾಕು ಪ್ರಾಣಿಗಳ ಆಹಾರ ತಯಾರಿಕಾ ಕಾರ್ಖಾನೆಯಲ್ಲಿ ಹಸುಗಳ ಮಾಂಸವನ್ನು ಬಳಸಲಾಗುತ್ತಿದೆ ಎಂಬ ಅನುಮಾನ ಬಲವಾಗಿದೆ.

ನಿನ್ನೆ ಸಂಜೆ ದಾಳಿ ನಡೆಸಿರುವ ಪೊಲೀಸರು ಹಲವು ಫೀಡಿಂಗ್ ಪುಡ್ ಚೀಲಗಳನ್ನು ವಶಪಡಿಸಿಕೊಂಡು, ಸ್ಯಾಂಪಲ್ ಗಳನ್ನು ಸಂಗ್ರಹಿಸಿದ್ದಾರೆ. ಕಂಪನಿಯ ಮಾಲೀಕ, ಆರೋಪಿ ಕಮಲೇಶ್ ವಿರುದ್ಧ ಸುಮೋಟೋ ಪ್ರಕರಣವನ್ನು ಅಲ್ಲಿನ ಪೊಲೀಸರು ದಾಖಲಿಸಿದ್ದಾರೆ ಎನ್ನುವ ಮಾಹಿತಿಯಿದೆ.

ಇದನ್ನೂ ಓದಿ: ತುಂತುರು, ಸಾಧಾರಣ, ಭಾರೀ ಮಳೆಯ ಸಂಗಡ ಗುಡುಗು ಮಿಂಚು ಗೋಚರ – ಒದ್ದೆಯಾಗಲಿದೆ ಇಡೀ ದೇಶ !

Leave A Reply

Your email address will not be published.