Rajdhani and shatabdi express: ಜನಪ್ರಿಯ ರಾಜಧಾನಿ ಮತ್ತು ಶತಾಬ್ಧಿ ಎಕ್ಸ್‌ಪ್ರೆಸ್‌ ರೈಲುಗಳಿಗೆ ಫುಲ್ ಸ್ಟಾಪ್ !! : ಕೊನೆಗೊಳ್ಳಲಿದೆ ಐತಿಹಾಸಿಕ ಪಯಣ !

Bengaluru news Close of Rajdhani and shatabdi express train latest news

Rajdhani and shatabdi express : ಕಳೆದ 45 ವರ್ಷಗಳಿಂದ ಭಾರತೀಯರ ಕನಸ್ಸುಗಳಿಗೆ ಬೆನ್ನೆಲುಬಾಗಿ ತಮ್ಮ ಪ್ರಯಾಣದ ಜೀವನದ ಭಾಗವಾಗಿದ್ದ ಬಹು ಜನಪ್ರಿಯ ರಾಜಧಾನಿ ಮತ್ತು ಶತಾಬ್ಧಿ ಎಕ್ಸ್‌ಪ್ರೆಸ್‌( Rajdhani and shatabdi express ) ರೈಲುಗಳು ನಿವೃತ್ತಿಯ ಹಂತದಲ್ಲಿದ್ದು 2024 ರ ವೇಳೆಗೆ ತಮ್ಮ ಪಯಣವನ್ನು ನಿಲ್ಲಿಸಲಿದೆ. ಹೌದು ರಾಜಧಾನಿ ಶತಾಬ್ಧಿ ಎಕ್ಸ್‌ಪ್ರೆಸ್‌ ಗಳನ್ನು ಬದಲಿಸಿ ಹೊಸ ಮಾದರಿಯ ರೈಲುಗಳನ್ನು ಪರಿಚಯಿಸಲಿದೆ ಭಾರತೀಯ ರೈಲ್ವೇ. ಏನಿದರ ವಿಶೇಷ? ಈ ಬಗೆಗಿನ ಪೂರ್ಣ ಲೇಖನ ಇಲ್ಲಿದೆ.

ಜನರ ಬೇಡಿಕೆಗೆ ಅನುಗುಣವಾಗಿ ಭಾರತೀಯ ರೈಲ್ವೇ 2019 ರಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪರಿಚಯಿಸಿದ್ದು ಇದುವರೆಗೆ ದೇಶದಾದ್ಯಂತ 35 ರೈಲುಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ 3 ವಂದೇ ಭಾರತ್ ಕಾರ್ಯನಿರ್ವಹಿಸುತ್ತಿದ್ದು ಬೆಂಗಳೂರು – ಹುಬ್ಬಳ್ಳಿ , ಮೈಸೂರು -ಬೆಂಗಳೂರು – ಚೆನ್ನೈ ಹಾಗೂ ಬೆಂಗಳೂರು – ಹೈದರಾಬಾದ್ ನಡುವೆ ಓಡಾಟ ನಡೆಸುತ್ತಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತೀಯ ರೈಲ್ವೆ 2024 ರ ಆಗಸ್ಟ್ ವೇಳೆಗೆ 75 ವಂದೇ ಭಾರತ್ ಎಕ್ಸ್‌ಪ್ರೆಸ್‌ ಭಾರತದಾದ್ಯಂತ ಪರಿಚಯಿಸುವ ಇರಾದೆಯನ್ನು ಹೊಂದಿದೆ.ಜೊತೆಗೆ 400 KM ದೂರದ ಪ್ರಯಾಣಕ್ಕೆ ಅನುಕೂಲವಾಗುವಂತೆ ಸ್ಲೀಪರ್ ಕೋಚ್ ಗಳ ತಯಾರಿಕೆಗೆ ಚಾಲನೆ‌‌ ನೀಡಿದ್ದು ಮುಂದಕ್ಕೆ ರಾಜಧಾನಿ ಮತ್ತು ಶತಾಬ್ಧಿ ಎಕ್ಸ್‌ಪ್ರೆಸ್‌ಗಳನ್ನು ಈ ರೈಲುಗಳು ಬದಲಿಸಲಿವೆ.

ಪ್ರಸ್ತುತ ಚೆನ್ನೈನ ICF ತಯಾರಿಕಾ ಘಟಕ ವಂದೇ ಭಾರತ್ ಎಕ್ಸ್‌ಪ್ರೆಸ್‌ ಗಳನ್ನು ಉತ್ಪಾದಿಸುತ್ತಿದ್ದು ಕಡಿಮೆ ಟಿಕೇಟ್ ದರದಲ್ಲಿ ಆರಾಮದಾಯಕ ಪ್ರಯಾಣ ಮತ್ತು ಹೆಚ್ಚು ವೇಗದಲ್ಲಿ ಸಾಗುವ ರೈಲುಗಳನ್ನು ಪರಿಚಯಿಸಲು ಉತ್ಪಾದನೆಗೆ ಖಾಸಗಿ ಮತ್ತು ಸರಕಾರಿ ಒಡೆತನದ ಸಂಸ್ಥೆಗಳನ್ನು ಭಾರತ ಸರಕಾರ ಟೆಂಡರ್ ಮೂಲಕ ಆಹ್ವಾನಿಸಿದೆ.

ವಿವಿಧ ಖಾಸಗಿ ಕಂಪನಿಗಳು ತಯಾರಿಕಾ ಬಿಡ್ಡಿ೦ಗ್ ಪ್ರಕ್ರೀಯೆಗೆ ಹೊಸ ಮಾದರಿಯ ರೈಲುಗಳ ಮಾಡೆಲ್ ನ್ನು ಬಿಡುಗಡೆಗೊಳಿಸಿದೆ. ಕೇಂದ್ರ ಸರಕಾರದ ಒಡೆತನದ BEML ಮತ್ತು ICF ಜತೆಗೂಡಿ ರೈಲುಗಳನ್ನು ಉತ್ಪಾದಿಸಲಿದ್ದು 2024 ರ ವೇಳೆ ಹಳಿಗಳಲ್ಲಿ ಓಡಾಟ ನಡೆಸಲಿವೆ. ಹಾಗೂ ರಷ್ಯಾ ಒಡೆತನದ ಖಾಸಗಿ ಸಂಸ್ಥೆ ಮತ್ತು RVNL ವಿನೂತನ‌ ಮಾದರಿಯ ಕೋಚ್ ಗಳನ್ನು ಪರಿಚಯಿಸಿದ್ದು ರೈಲ್ವೇ ಇಲಾಖೆಯ ಸಮ್ಮತಿಗೆ ಕಾಯುತ್ತಿದ್ದು 2025 ರ ವೇಳೆಗೆ ತಯಾರಿಕೆ ಪೂರ್ಣಗೊಳ್ಳಲಿವೆ. ಗಂಟೆಗೆ 350 KM ಗಿಂತ ಹೆಚ್ಚು ಶರ ವೇಗದಲ್ಲಿ ಓಡುವ ಈ ರೈಲುಗಳು ಭಾರತದ ಎಲ್ಲಾ ಪ್ರಮುಖ ಧಾರ್ಮಿಕ ‌ಶ್ರದ್ಧಾ ಕೇಂದ್ರಗಳನ್ನು ಪ್ರವಾಸಿ ತಾಣಗಳನ್ನು ವಿಮಾನಯಾನ ಕ್ಕಿಂತ ಕಡಿಮೆ ವೆಚ್ಚದಲ್ಲಿ ಮತ್ತು ಪ್ರಯಾಣಿಕರನ್ನು ತಲುಪಿಸುವ ಉದ್ದೇಶ ಹೊಂದಿದೆ

ಇದನ್ನೂ ಓದಿ: ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಅಪಘಾತ; ಓವರ್ ಟೇಕ್ ಮಾಡಲು ಹೋಗಿ ಕಬ್ಬಿಣದ.ಮುದ್ದೆಯಾದ ಮಾರುತಿ ಓಮ್ನಿ !

Leave A Reply

Your email address will not be published.