Big Boss 10: ದೊಡ್ಮನೆಯಲ್ಲಿ ಪ್ರತಾಪ್​ ಕಣ್ಣೀರು, ಡ್ರೋಣ್​​ ರೆಕ್ಕೆ ಪುಕ್ಕಗಳನ್ನು ಕಿತ್ತಿದ್ದು ಯಾರು ?

Entertainment Bigg Boss Kannada season 10 drone Prathap teased by vinay gowda

Drone Prathap: ಬಿಗ್​ ಬಾಸ್​ ಸೀಸನ್​ 10 ನಲ್ಲಿ ಜಗಳದ ಕಾವು ಏರುತ್ತಲೇ ಇದೆ. ಇದರ ನಡುವೆ ಟಾಸ್ಕ್​ಗಳು ಕೂಡ ಬರ್ತಾ ಇವೆ. ವಿನ್ನರ್​ ಮಾತ್ರ ಅಸಮರ್ಥರೇ ಆಗ್ತಾ ಇದ್ದಾರೆ. ಇದೀಗ ಡ್ರೋನ್​ ಪ್ರತಾಪ್​ನ ಮನಸ್ಸಿಗೆ ತುಂಬಾ ನೋವಾಗಿ ಕಣ್ಣೀರನ್ನು ಇಟ್ಟಿದ್ದಾರೆ. ಅರೇ!ಡ್ರೋನ್ ​ ಗೆ ಏನಾಯ್ತು ಅಂತ ಯೋಚನೆ ಮಾಡ್ತಾ ಇದ್ದೀರಾ? ಈ ಸುದ್ಧಿ ಕಂಪ್ಲೀಟ್​ ಆಗಿ ಓದಿ.

ಎಸ್​, ಎದುರುಗಡೆ ಚೆನ್ನಾಗಿಯೇ ಪ್ರತಾಪ್(​Drone Prathap) ಜೊತೆ ಮನೆ ಮಂದಿ ಮಾತಾಡ್ತಾರೆ ಆದರೆ, ಹಿಂದೆಯಿಂದ ಮನೆಯ ಜನರು ತುಂಬಾ ಗೇಲಿ ಮಾಡ್ತಾ ಇದ್ದಾರೆ. ಹಾಗೆಯೇ ತುಕಾಲಿ ಸಂತೋಷ್​ ಕೂಡ ಎದುರುಗಡೆ ತಮ್ಮ ಅಂತೆಲ್ಲ ಕರೆದು ನಂತರ ಬೇರೆ ಗುಂಪನ್ನು ಮಾಡಿಕೊಂಡು ​ಡ್ರೋನ್ ಪ್ರತಾಪ್​ ಬಗ್ಗೆ ಹಳೆಯ ವಿಚಾರಗಳನ್ನು ಎಲ್ಲರ ಮುಂದೆ ಹೇಳಿ ನಗುತ್ತಾ ಇದ್ದಾರೆ.


ಹಾಗೆಯೇ ಪ್ರತಾಪ್​ ಜೊತೆಗೆ ವಿನಯ್​ ಕೂಡ ಜಗಳ ಆಡಿದ್ದಾರೆ, ಡ್ರೋನ್​ ರೆಕ್ಕೆ ಪುಕ್ಕನ್ನೆಲ್ಲಾ ಕಿತ್ತು ಹಾಕ್ತೀನಿ ಅಂತ ಕೂಡ ವಾರ್ನಿಂಗ್​ ಮಾಡಿದ್ದರು. ಒಟ್ಟಿನಲ್ಲಿ ಮನೆ ಮಂದಿ ಅರ್ಧದಷ್ಟು ಜನರು ಪ್ರತಾಪ್​ಗೆ ಗೇಲಿ ಮಾಡುತ್ತಾ ಇದ್ದಾರೆ.

ಇದರಿಂದ ನೊಂದ ಪ್ರತಾಪ್ ಬಾತ್​​ರೂಂನಲ್ಲಿ ತುಂಬಾ ಹೊತ್ತು ಸುಮ್ಮನೆ ಒಬ್ಬರೇ ಕೂತಿರುತ್ತಾರೆ. ಅಲ್ಲಿಗೆ ಕ್ಯಾಪ್ಟನ್​ ಸ್ನೇಹಿತ್​ ಬಂದು, ಪ್ರತಾಪ್​ ಬನ್ನಿ ಎಲ್ಲರ ಜೊತೆ ಬೆರೆಯಿರಿ ಒಬ್ಬರೇ ಇರಬೇಡಿ ಅಂತಾರೆ. ಆಗ ಪ್ರತಾಪ್​ ಇಲ್ಲ ಸ್ವಲ್ಪ ಹೊತ್ತು ಮಾತ್ರ ಬರ್ತೀನಿ ಅಂತಾರೆ. ನಮ್ರತ, ಸಂಗೀತ ಮತ್ತು ರಕ್ಷತ್​ ಕೂಡ ಬಾತ್​ ರೂಂಗೆ ಬರ್ತಾರೆ.

ಆಗ ಎಲ್ಲರಿಗೂ ತಿಳಿಯುತ್ತೆ ಡ್ರೋನ್​​ ಅಳ್ತಾ ಇದ್ದಾರೆ ಅಂತ. ಬಾತ್​ ರೂಂ ಒಳಗೆ ಹೋಗಿ ಅಳಲು ಆರಂಭಿಸುತ್ತಾನೆ. ಸಂಗೀತ ಮತ್ತು ನಮ್ರತ ಕೂಡ ಆತನಿಗೆ ಸಾತ್​ ನೀಡಿ, ಅವರೂ ಕಣ್ಣೀರನ್ನು ಇಡುತ್ತಾರೆ. ಇನ್ನು ಮುಂದೆ ಯಾರು ಕೂಡ ಪ್ರತಾಪ್​ಗೆ ಕಾಲೆಳೆಯೋದು ಬೇಡ, ನಾವೆಲ್ಲರೂ ಒಂದೇ ಫ್ಯಾಮಿಲಿ, ದಯವಿಟ್ಟು ಹಿಂದೆ ಒಂದು ಮುಂದೆ ಒಂದು ಮಾತನಾಡೋದು ಬೇಡ ಎಂದು ಎಲ್ಲರೆದುರು ಸ್ನೇಹಿತ್​ ಮತ್ತು ನಮ್ರತ ಕೇಳಿಕೊಳ್ಳುತ್ತಾರೆ. ಇದು ಇಲ್ಲಿಯ ತನಕಡದ ಪ್ರತಾಪ್ ಸಂಬಂಧಿ ಅಪ್ಡೇಟ್. ಶನಿವಾರ ಕಿಚ್ಚನ ಪಂಚಾಯಿತಿಯಲ್ಲಿ ಏನಾಗುತ್ತೆ? ಯಾರಿಗೆ ಕಿಚ್ಚ ಕ್ಲಾಸ್​ ತಗೋತ್ತಾರೆ, ಆಗ ಡ್ರೋನ್ ಏನು ಸೌಂಡ್ ಮಾಡುತ್ತೆ, ಅಂತ ಕಾದು ನೋಡಬೇಕಾಗಿದೆ !

ಇದನ್ನೂ ಓದಿ: ಜನಪ್ರಿಯ ರಾಜಧಾನಿ ಮತ್ತು ಶತಾಬ್ಧಿ ಎಕ್ಸ್‌ಪ್ರೆಸ್‌ ರೈಲುಗಳಿಗೆ ಫುಲ್ ಸ್ಟಾಪ್ !! : ಕೊನೆಗೊಳ್ಳಲಿದೆ ಐತಿಹಾಸಿಕ ಪಯಣ !

Leave A Reply

Your email address will not be published.