Bangalore-Mysore Expressway: ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಅಪಘಾತ; ಓವರ್ ಟೇಕ್ ಮಾಡಲು ಹೋಗಿ ಕಬ್ಬಿಣದ ಮುದ್ದೆಯಾದ ಮಾರುತಿ ಓಮ್ನಿ !

Karnataka accident news Accident on Bangalore-Mysore Expressway 2 dead latest news

Bangalore-Mysore Expressway: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ ಇಂದು ನಸುಕಿನ ಸಂದರ್ಭ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ವಾಹನದಲ್ಲಿದ್ದ ಇತರ ಐದು ಮಂದಿ ಗಾಯಗೊಂಡಿದ್ದಾರೆ. ರಾಮನಗರದ ಕೆಂಪೇಗೌಡನದೊಡ್ಡಿ ಬಳಿ ದುರ್ಘಟನೆ ನಡೆದಿದೆ.

ಬೆಂಗಳೂರಿನಿಂದ ಮೈಸೂರು (Bangalore-Mysore Expressway) ಕಡೆ ಲಾರಿ ಹೋಗುತ್ತಿತ್ತು. ಈ ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಒಮ್ನಿ ಕಾರು ಡಿಕ್ಕಿ ಹೊಡೆದಿದೆ. ಲಾರಿಯನ್ನು ಓವರ್ ಟೇಕ್ ಮಾಡಲು ಹೋದಾಗ ಈ ಡಿಕ್ಕಿ ಸಂಭವಿಸಿದೆ. ಲಾರಿಯ ಹಿಂಬದಿಗೆ ಮಾರುತಿ ಒಮ್ನಿ ಕಾರು ಡಿಕ್ಕಿ ಹೊಡೆದಿದ್ದು, ಗುದ್ದಿದ ತೀವ್ರತೆಗೆ ಒಮ್ನಿ ಕಾರು ಸಂಪೂರ್ಣ ಮುದ್ದೆಯಾಗಿದೆ. ಮಾರುತಿ ಒಮ್ನಿಯಲ್ಲಿ ಒಟ್ಟು 7 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿದ್ದರೆ, ಮಕ್ಕಳು ಸೇರಿದಂತೆ ನಾಲ್ವರಿಗೆ ಸಣ್ಣಪುಟ್ಟ ಗಾಯ‌ಗಳಾಗಿವೆ.

ಒಬ್ಬ ಮಹಿಳೆಗೆ ತೀವ್ರತರ ಗಾಯಗಳಾಗಿವೆ. ಮೃತರನ್ನು 42 ವರ್ಷ ವಯಸ್ಸಿನ ರಾಜೇಶ್, 35 ವರ್ಷ ವಯಸ್ಸಿನ ಉಮಾ ಎಂದು ಗುರುತಿಸಲಾಗಿದ್ದು, ಅವರು ಬೆಂಗಳೂರಿನ ಪೀಣ್ಯ ಮೂಲದವರಾಗಿರುವ ಮಾಹಿತಿ ಇದೆ. ರಾಜೇಶ್ ರ ಕುಟುಂಬ ಮೈಸೂರು ಕಡೆಗೆ ತೆರಳುತ್ತಿತ್ತು.
ಅಪಘಾತದ ಹಿನ್ನೆಲೆಯಲ್ಲಿ ಅಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಕೂಡಾ ಆಗಿತ್ತು. ಸ್ಥಳಕ್ಕೆ ರಾಮನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕರುವಿನ ತಲೆ ಪ್ರತ್ಯಕ್ಷ: ಸಾಕು ಪ್ರಾಣಿಗಳ ಆಹಾರ ತಯಾರಿಕಾ ಕಾರ್ಖಾನೆ ಮೇಲೆ ದಾಳಿ, ಹಸುಗಳ ಮಾಂಸ ಬಳಕೆ ಸಾಧ್ಯತೆ !

Leave A Reply

Your email address will not be published.