ಕೋರ್ಟಿನ ಜತೆ ಅಧಿಕ ಪ್ರಸಂಗ ಮಾಡಲು ಹೋದ ವ್ಯಕ್ತಿ, ಸುಪ್ರೀಂ ಕೋರ್ಟ್ ಕೊಟ್ಟ ಶಿಕ್ಷೆ ಕೇಳಿದ್ರೆ…!!

National news Supreme Court Slaps Rs 5 Lakh Cost On Lawyer For Misusing PIL

Supreme Court: ಬೇಡದ ಕೆಲಸಕ್ಕೆ ಹೋಗಿ ವ್ಯಕ್ತಿಯೊಬ್ಬ ಕೋರ್ಟಿನಿಂದ 5 ಲಕ್ಷ ದಂಡ ಹಾಕಿಸಿಕೊಂಡ ಪ್ರಕರಣ ನಡೆದಿದೆ. ಬಾಂಬೆ ಹೈಕೋರ್ಟ್ ನ (Bombay High Court) ಮುಖ್ಯ ನ್ಯಾಯಮೂರ್ತಿಗಳ ಪ್ರಮಾಣ ವಚನ ದೋಷಪೂರಿತವಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬನಿಗೆ ಸುಪ್ರೀಂ ಕೋರ್ಟ್ (Supreme Court) 5 ಲಕ್ಷ ರೂ. ದಂಡ ಜಡಿದು ವಾಪಸ್ಸು ಕಳಿಸಿದೆ. ಇದು ಪ್ರಚಾರ ಪಡೆಯುವ ಕ್ಷುಲ್ಲಕ ಪ್ರಯತ್ನ (Cheap efforts )ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಕರಣ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (Justice DY Chandrachud) ನೇತೃತ್ವದ ಪೀಠವು ಕಾಮೆಂಟ್ ಮಾಡಿದ್ದು, ‘ರಾಜ್ಯಪಾಲರಿಂದ ಪ್ರಮಾಣ ವಚನ ಬೋಧಿಸಲ್ಪಟ್ಟಿದೆ. ಪ್ರಮಾಣ ವಚನ ಸ್ವೀಕಾರದ ನಂತರ ಅಂತಹ ಆಕ್ಷೇಪಣೆಗಳನ್ನು ಎತ್ತುವಂತಿಲ್ಲ. ಅರ್ಜಿದಾರ ಕೇವಲ ಪ್ರಚಾರಕ್ಕಾಗಿ ನ್ಯಾಯಾಲಯವನ್ನು ಬಳಸಿಕೊಳ್ಳುತ್ತಿದ್ದಾನೆ. ಇಂತಹ ಕ್ಷುಲ್ಲಕ ಮೇಲ್ಮನವಿಗಳನ್ನು ನ್ಯಾಯಾಲಯದ ಸಮಯವನ್ನು ಹಾಳು ಮಾಡುತ್ತವೆ ಮತ್ತು ನ್ಯಾಯಾಲಯದ ಗಮನವನ್ನು ಹೆಚ್ಚು ಗಂಭೀರ ವಿಷಯಗಳಿಂದ ಇಂತಹ ಅರ್ಜಿಗಳು ತಿರುಗಿಸುತ್ತವೆ’ ಎಂದು ಅದು ಹೇಳಿದೆ.

ನ್ಯಾಯಾಲಯವು ಇಂತಹ ಕ್ಷುಲ್ಲಕ ಅರ್ಜಿಗಳಿಗೆ ದೊಡ್ಡ ಪ್ರಮಾಣದ ದಂಡ ವಿಧಿಸುವ ಸಮಯ ಇದೀಗ ಬಂದಿದೆ. ಅದರಂತೇ ನಾವೀಗ 5,00,000 ರೂಪಾಯಿ ದಂಡ ಹಾಕಿ ಈ ಮೂಲಕ ಅರ್ಜಿಯನ್ನು ವಜಾಗೊಳಿಸುತ್ತೇವೆ. ಅರ್ಜಿದಾರರು ತಿಂಗಳ ಒಳಗೆ ಈ ಹಣವನ್ನು ಠೇವಣಿ ಇಡಬೇಕು. ಅವಧಿಯೊಳಗೆ ಠೇವಣಿ ಮಾಡದಿದ್ದರೆ ಜಿಲ್ಲಾಧಿಕಾರಿಗಳ ಮೂಲಕ ಭೂ ಕಂದಾಯ ಸಂಗ್ರಹಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅಶೋಕ್ ಪಾಂಡೆ ಅರ್ಜಿ ಸಲ್ಲಿಸಿ, ನ್ಯಾಯಮೂರ್ತಿಗಳಿಗೆ ಬೋಧಿಸಲಾದ ಪ್ರಮಾಣ ವಚನದಿಂದ ತಾನು ಅಸಮಾಧಾನಗೊಂಡಿದ್ದೇನೆ ಎಂದು ಹೇಳಿದ್ದರು. ಪ್ರಮಾಣ ವಚನ ಸ್ವೀಕರಿಸುವಾಗ ಮುಖ್ಯ ನ್ಯಾಯಾಧೀಶರು ತಮ್ಮ ಹೆಸರಿನ ಮುಂದೆ “I” ಎಂಬ ಅಭಿವ್ಯಕ್ತಿಯನ್ನು ಬಳಸಲಿಲ್ಲ ಎಂದಿದ್ದರು. ಕೇಂದ್ರಾಡಳಿತ ಪ್ರದೇಶವಾದ ದಾಮನ್, ದಿಯು, ದಾದರ್ ಮತ್ತು ನಗರ್ ಹವೇಲಿ ಸರ್ಕಾರದ ಪ್ರತಿನಿಧಿಗಳು ಹಾಗೂ ಆಡಳಿತಾಧಿಕಾರಿಗಳನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಲಾಗಿಲ್ಲ. ಇದು ಸಂವಿಧಾನದ ವಿರುದ್ಧವಾಗಿದೆ ಎಂದು ಅವರು ವಾದಿಸಿದ್ದರು. ಇದೀಗ ಅರ್ಜಿದಾರರ ಬಗ್ಗೆ ಕೋರ್ಟ್ ಗರಂ ಆಗಿ ಭಾರೀ ದಂಡ ಹಾಕಿ ಶಿಕ್ಷಿಸಿದೆ.

ಇದನ್ನೂ ಓದಿ: Big Boss 10: ದೊಡ್ಮನೆಯಲ್ಲಿ ಪ್ರತಾಪ್ ಕಣ್ಣೀರು, ಡ್ರೋನ್ ರೆಕ್ಕೆ ಪುಕ್ಕಗಳನ್ನು ಕಿತ್ತಿದ್ದು ಯಾರು ?

Leave A Reply

Your email address will not be published.