Mysore Dasara: ಈ ಸಲ ಮೈಸೂರು ದಸರಾ ನೋಡಲು ಹೊರಟವರಿಗೆ ಬಿಗ್ ಶಾಕ್- ಎದುರಾಯ್ತು ಭಾರೀ ಬ್ಯಾಡ್​ ನ್ಯೂಸ್​, ಯಾಕೆ ಏನಾಯ್ತು?

Big shock for those who went to see Mysore Dasara this time

Mysore Dasara: ಮೈಸೂರು ದಸರಾ, ಎಷ್ಟೊಂದು ಸುಂದರಾ! ನಿಜ ಅಲ್ವಾ? ಅದೆಷ್ಟೋ ಜನರು ಜಂಬೂಸವಾರಿ ಮತ್ತು ಪಂಜಿನ ಕವಾಯತು ವೀಕ್ಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ ಅಂತಲೇ ಹೇಳಬಹುದು. ಮೈಸೂರು ದಸರಾವನ್ನು ಹತ್ತಿರದಿಂದ ಸೆಲೆಬ್ರಿಟಿ ಗಳ ಥರ ಕೂತು ವೀಕ್ಷಿಸಲು ಬಯಸುವ ಜನರಿಗೆ ತೀವ್ರ ನಿರಾಸೆಯಾಗಿದೆ. ಇವತ್ತು ಗೋಲ್ಡ್ ಕಾರ್ಡ್ ಟಿಕೆಟ್ ಖರೀದಿಯ ನಿರೀಕ್ಷೆಯಲ್ಲಿದ್ದ ಬಹುತೇಕರಿಗೆ ನಿರಾಸೆಯಾಗಿದೆ. ಕಾರಣ ಗೋಲ್ಡ್ ಕಾರ್ಡ್ ಟಿಕೆಟ್ ಬಿಡುಗಡೆಯಾದ ಇಪ್ಪತ್ತೇ ನಿಮಿಷಕ್ಕೆ ಕಂಪ್ಲೀಟ್ ಸೋಲ್ಡ್ ಔಟ್ ಆಗಿದ್ದು !

ಮೈಸೂರು ದಸರಾ 2023ರ ಆನ್ಲೈನ್ ಪ್ಲಾಟ್ಫಾರಂನಲ್ಲೂ ಗೋಲ್ಡ್ ಕಾರ್ಡ್ ಸೋಲ್ಡ್ಔಟ್ ಆಗಿದ್ಯಂತೆ. ಮೈಸೂರು ದಸರಾ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಬಿಡುಗಡೆ ಇಂದು (ಅಕ್ಟೋಬರ್ 18) ಬೆಳಗ್ಗೆ 10 ಗಂಟೆಗೆ ಸಮಯ ನಿಗದಿ ಮಾಡಲಾಗಿತ್ತು. ಆನ್ ಲೈನ್ ಮೂಲಕ https://mysoredasara.gov.in ವೆಬ್ ಸೈಟ್ ನಲ್ಲಿ ಖರೀದಿ ಮಾಡಬಹುದಾಗಿತ್ತು.

ಈ ಮೊದಲೇ ಘೋಷಿಸಿದ ಪ್ರಕಾರ ಇಂದು ಅಕ್ಟೋಬರ್ 18ರಂದು ಬೆಳಿಗ್ಗೆ 10 ಗಂಟೆಯ ಬದಲು 11 ಗಂಟೆಗೆ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಬಿಡುಗಡೆ ಮಾಡಲಾಗಿತ್ತು. ಟಿಕೆಟ್ ಮಾರಾಟ ವಿಂಡೋ ಓಪನ್ ಆದ 20 ನಿಮಿಷದಲ್ಲಿ ಎಲ್ಲ ಗೋಲ್ಡ್ ಕಾರ್ಟ್ ಮತ್ತು ಟಿಕೆಟ್ಗಳು ಖರೀದಿಯಾಗಿವೆ ಎಂಬ ಅಧಿಕೃತ ಮಾಹಿತಿ ತಿಳಿದು ಬಂದಿದೆ.

ಕೇವಲ 20 ನಿಮಿಷದಲ್ಲಿ ಎಲ್ಲಾ ಗೋಲ್ಡ್ ಕಾರ್ಡ್​ ಸೇಲ್​ ಆಗಿರೋದ ಅಚ್ಚರಿಯನ್ನೇ ಮೂಡಿಸಿದೆ. ಆದರೆ, ಏನೇ ಆದ್ರೂ ಕೂಡ ಮೈಸೂರನ್ನು ನೋಡಲು ಬರೋ ಜನರ ಸಂಖ್ಯೆ ಏನು ಕಮ್ಮಿ ಆಗಿಲ್ಲ ಬಿಡಿ.
ಕೇವಲ ಕರ್ನಾಟಕ ಮಾತ್ರವಲ್ಲದೇ ನಾನಾ ಕಡೆಯಿಂದ ಕೂಡ ಜನ ಸಾಗರವೇ ಹರಿದು ಬರುತ್ತೆ. ಆದ್ರೆ ಗೋಲ್ಡ್​ ಕಾರ್ಡ್​ ಪಡೆದು ಹತ್ತಿರದಿಂದ ದಸರಾದ ಸಂಭ್ರಮ ಹೊರುವ ಆಸೆಯನ್ನು ಹೊತ್ತವರು ಈ ಮೂಲಕ ನಿರಾಸೆ ಹೊಂದಿದ್ದಾರೆ.

Leave A Reply

Your email address will not be published.