ICC ವಿಶ್ವಕಪ್ ಕ್ರಿಕೆಟ್: ಭಾರತ ಸೋಲಿಸಿದ್ರೆ ಬಾಂಗ್ಲಾ ಕ್ರಿಕೆಟಿಗರಿಗೆ ಡೇಟಿಂಗ್ ಜತೆ ‘ತಿನ್ನಿಸುವ’ ವಿಚಿತ್ರ ಆಫರ್ ನೀಡಿದ ಪಾಕಿಸ್ತಾನಿ ಹುಡುಗಿ !

Cricket news If Bangladesh defeat India in icc world cup Pakistani actress dinner date promise

ICC World Cup: “ಇನ್ಶಾ ಅಲ್ಲಾಹ್ ನನ್ನ ಬಂಗಾಳಿ ಬಂಧು ಮುಂದಿನ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುತ್ತಾರೆ. ಅವರ ತಂಡ ಭಾರತವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ ನಾನು ಢಾಕಾಕ್ಕೆ ಹೋಗಿ ಬಂಗಾಳಿ ಹುಡುಗರೊಂದಿಗೆ ಮೀನಿನ ಊಟ ಮಾಡುತ್ತೇನೆ” ಎಂದು ಸಹೆರ್ ಟ್ವೀಟ್ ಮಾಡಿದ್ದಾರೆ.

ICC World Cup

ಪುಣೆಯ ಎಂ ಸಿ ಎ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ವಿಶ್ವಕಪ್ (ICC World Cup) 2023ರ 17 ಪಂದ್ಯದಲ್ಲಿ ಭಾರತ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಹಿಂದಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತವು 7 ವಿಕೆಟ್ ಗಳಿಂದ ಹೀನಾಯವಾಗಿ ಸೋಲಿಸಿ, ತನ್ನ ಬಲ ಪ್ರದರ್ಶನ ಮಾಡಿತ್ತು. ಈ ಸೋಲನ್ನು ಪಾಕಿಸ್ತಾನ ಜನತೆ ಮನಸ್ಸಿಗೆ ಹಚ್ಚಿಕೊಂಡಿದ್ದು, ಭಾರತವನ್ನು ಬಾಂಗ್ಲಾದೇಶ ಇವತ್ತು ಸೋಲಿಸಲೇಬೇಕೆಂದು ಬಾಂಗ್ಲಾ ತಂಡವನ್ನು ಹುರಿದುಂಬಿಸುತ್ತಿದ್ದಾರೆ. ಅದರಲ್ಲೂ ಪಾಕಿಸ್ತಾನದ ಬ್ಯೂಟಿ ಒಬ್ಬಳು ಭಾರತವನ್ನು ಇಂದು ಬಾಂಗ್ಲಾ ಸೋಲಿಸಿದರೆ ಕ್ರಿಕೆಟಿಗರಿಗೆ ಡೇಟಿಂಗ್ ಕೊಡೋದಾಗಿ ಹೇಳಿದ್ದಾಳೆ.

ಕ್ರಿಕೆಟ್ ಬಗ್ಗೆ ಟ್ವೀಟ್ ಮಾಡಿ ಈಕೆ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಹಿಂದೆ ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನವು ಸೋಲನುಭವಿಸಿದಾಗಲೂ ಬಾಬರ್ ಅಜಮ್ ಮತ್ತು ಆತನ ತಂಡದ ವಿರುದ್ಧ ಎಫ್‌ಐಆರ್ ದಾಖಲಿಸಲು ಸೆಹರ್ ಬಯಸಿದ್ದ ಹುಡುಗಿ.

“ಬಾಬರ್ ಅಜಮ್ ಮತ್ತು ಆತನ ತಂಡದ ವಿರುದ್ಧ ಎಫ್‌ಐಆರ್ ದಾಖಲಿಸುತ್ತೇನೆ. ಏಕೆಂದರೆ ಈ ಹುಡುಗರು ಯಾವಾಗಲೂ ಕ್ರಿಕೆಟ್ ಆಡುವ ಬದಲು ನಮ್ಮ ರಾಷ್ಟ್ರೀಯ ಭಾವನೆಗಳೊಂದಿಗೆ ಆಡುತ್ತಾರೆ” ಎಂದು ಆಕೆ ಬರೆದುಕೊಂಡಿದ್ದರು.

ಇದನ್ನೂ ಓದಿ: ಪತಿ ಮನೆಯಲ್ಲಿ ವಿಪರೀತ ಕಿರುಕುಳ: ಮಗಳನ್ನು ಬ್ಯಾಂಡ್ ಸಮೇತ ಅದ್ದೂರಿ ಮೆರವಣಿಗೆಯಲ್ಲಿ ಪತಿ ಮನೆಯಿಂದ ಮರಳಿ ತವರಿಗೆ ಕರೆತಂದು ಸೇಡು ತೀರಿಸಿಕೊಂಡ ಅಪ್ಪ !

Leave A Reply

Your email address will not be published.