Kasaragodu: ಬಸ್ ನಲ್ಲಿ ಕೂತು ತಲೆ ಹೊರಕ್ಕೆ ಇಣುಕಿದ ವಿದ್ಯಾರ್ಥಿ ?- ಲೈಟ್ ಕಂಬಕ್ಕೆ ತಲೆ ಬಡಿದು ಬಾಲಕ ದಾರುಣ ಸಾವು !

Kasaragodu death news a student died due to head hit electric poll in kasaragodu

Kasaragodu: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಯೊಬ್ಬನ ತಲೆ ವಿದ್ಯುತ್ ಕಂಬಕ್ಕೆ ತಾಗಿ ದಾರುಣ ಅಂತ್ಯ ಕಂಡ ಘಟನೆ ನಡೆದಿದೆ.

ಕಾಸರಗೋಡಿನ( ಕಾಸರಗೋಡು) ಚೆಮ್ಮನಾಡು ಜಮಾತ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಮನ್ವಿತ್ (15) ಮೃತ ಬಾಲಕ.

ಮನ್ನಿಪಾಡಿ ಹೌಸಿಂಗ್ ಕಾಲೋನಿಯ ಸುನೀಲ್ ಕುಮಾರ್ ಅವರ ಪುತ್ರ ಮನ್ವಿತ ಬಸ್ಸಿನಲ್ಲಿ ಪ್ರಯಾಣಿಸುವಾಗ ಕರಂದಕ್ಕಾಡ್ ಎಂಬಲ್ಲಿ ಬುಧವಾರ ಸಂಜೆ ಈ ದುರ್ಘಟನೆ ನಡೆದಿದೆ. ಶಾಲೆ ಬಿಟ್ಟು ಮನೆಗೆ ತೆರಳಲು ಖಾಸಗಿ ಬಸ್‌ನಲ್ಲಿ ಮಧೂರಿಗೆ ತೆರಳುತ್ತಿದ್ದಾಗ ಕರಂದಕ್ಕಾಡ್ ಎಂಬಲ್ಲಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ವಿದ್ಯಾರ್ಥಿಯ ತಲೆ ಬಡಿದಿದೆ. ತಕ್ಷಣ ಆತನನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದರಿಂದ ಏನೂ ಪ್ರಯೋಜನ ಆಗಲಿಲ್ಲ. ಮನ್ವಿತ್ ದಾರಿ ಮೃತನಾಗಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ಇದನ್ನೂ ಓದಿ: ಮದುವೆ ಆಗ್ತಾರಂತ ಪ್ರಭಾಸ್? ಡೇಟ್ ಕೂಡ ರಿವೀಲ್ ಮಾಡಿದ ಸ್ಟಾರ್!

Leave A Reply

Your email address will not be published.