Latest News: ಬಿಗ್ ಬಾಸ್ Vs ಸರಿಗಮಪ ಟಿ ಆರ್ ಪಿ ಎಷ್ಟು ಗೊತ್ತಾ? ಉಫ್, ಯಾರಿಗೂ ಇದನ್ನು ಬೀಟ್ ಮಾಡೋಕೆ ಆಗಲ್ಲ ಗುರೂ !

Latest News Do you know the TRP of Bigg Boss and Sarigampa

ಈಗಂತೂ ಬಿಗ್ ಬಾಸ್ದೇ ಹವಾ ಅಂತ ಹೇಳಿದ್ರೂ ತಪ್ಪಾಗೋದಿಲ್ಲ. ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರೆ ಬರೀ ಬಿಗ್ ಬಾಸ್ ಸ್ಪರ್ಧಿಗಳ ಮೀಮ್ಗಳೇ ಕಾಣುತ್ತೆ. ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಇದ್ರೆ, ಜೀ ಕನ್ನಡದವರು ಸ ರಿ ಗ ಮ ಪ ಶೋ ಆರಂಭಿಸಿದ್ದಾರೆ. ಆಗಿದ್ ಆಗ್ಲಿ ಯಾವ ಚಾನೆಲ್ಗೆ ಹೈ TRP ಇದೆ ಅಂತ ನೋಡೋಣ್ವಾ?

ಸರಿಗಮಪ ಸೀಸನ್ 20’ ಇತ್ತೀಚೆಗೆ ಆರಂಭ ಆಗಿದೆ. ಜೀ ಕನ್ನಡ ವಾಹಿನಿಯಲ್ಲಿ ಸರಿಗಮಪ 20ನೇ ಸೀಸನ್ ಪ್ರಸಾರ ಆಗ್ತಾ ಇದೆ. ನಗರ ಭಾಗದಲ್ಲಿ ಸರಿಗಮಪ ಸೀಸನ್ 20 ಪ್ರೋಗ್ರಾಂ 8.2 ಟಿಆರ್ಪಿ ಪಡೆದಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫಿನಾಲೆಗೆ 5.1 ರೇಟಿಂಗ್ ಸಿಕ್ಕಿದೆ ಎಂಬ ಅಧಿಕೃತ ಮಾಹಿತಿಗಳು ಹೊರಬಿದ್ದಿದೆ.

ಕಲರ್ಸ್ ಕನ್ನಡದ ಬಿಗ್ ಬಾಸ್ ವಾರದ ದಿನದಲ್ಲಿ ಈ ರಿಯಾಲಿಟಿ ಶೋ ನಗರ ಭಾಗದಲ್ಲಿ 5.7 ರೇಟಿಂಗ್ ಪಡೆದಿದೆ. ವೀಕೆಂಡ್ನಲ್ಲಿ 7.1 ರೇಟಿಂಗ್ ಶೋಗೆ ಸಿಕ್ಕಿದೆ. ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಬರುತ್ತಾರೆ. ಈ ಕಾರಣಕ್ಕೆ ವಿಕೆಂಡ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ರಿಯಾಲಿಟಿ ಶೋ ನೋಡುತ್ತಾರೆ.

ಧಾರಾವಾಹಿಗಳ TRP:
ನಗರ ವಿಭಾಗದ ಟಿಆರ್ಪಿ ಪರಿಗಣನೆಗೆ ತೆಗೆದುಕೊಂಡರೆ, ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನದಲ್ಲಿದೆ. ‘ಸೀತಾ ರಾಮ’ ಧಾರಾವಾಹಿಗೆ ಎರಡನೇ ಸ್ಥಾನ ಸಿಕ್ಕಿದೆ. ‘ಶ್ರೀರಸ್ತು ಶುಭಮಸ್ತು ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿದೆ. ನಾಲ್ಕನೇ ಸ್ಥಾನದಲ್ಲಿ ‘ಸತ್ಯ’ ಧಾರಾವಾಹಿ ಇದೆ. ಐದನೇ ಸ್ಥಾನದಲ್ಲಿ ‘ಗಟ್ಟಿಮೇಳ’ ಧಾರಾವಾಹಿ ಇದೆ. ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಆರನೇ ಸ್ಥಾನಕ್ಕೆ ಹಾಗೂ ‘ಅಮೃತಧಾರೆ’ ಧಾರಾವಾಹಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಹೇಗೇ ಲೆಕ್ಕ ಹಾಕಿದ್ರೂ ಕೂಡ ಕಲರ್ಸ್ ಕನ್ನಡ ಟಾಪ್ ಲಿ ಕೂತಿದೆ ಅಂತಲೇ ಹೇಳಬಹುದು. ಎಲ್ಲಾ ಈಗ ಶುರುವಾದ ಬಿಗ್ ಬಾಸ್ದೇ ಹವಾ ಅಲ್ವಾ ಗುರೂ?

 

ಇದನ್ನು ಓದಿ: Soumya Vishwanathan murder: ಬರೋಬ್ಬರಿ 15 ವರ್ಷದ ನಂತರ ಪತ್ರಕರ್ತೆ ಸೌಮ್ಯ ಕೊಲೆಗಡುಕರಿಗೆ ಶಿಕ್ಷೆಯಾದ ಕುತೂಹಲಕಾರಿ ಕಥೆ – ಸೌಜನ್ಯಾ ಪ್ರಕರಣಕ್ಕೆ ಕಂಡುಬರುತ್ತಿರುವ ಭಾರೀ ಹೋಲಿಕೆ !

Leave A Reply

Your email address will not be published.