Actress Urvashi: ನಾಟಿ ನಟಿ ಊರ್ವಶಿ ರೌಟೇಲಾ ಫೋನ್ ಕದ್ದ ಕಳ್ಳನಿಂದ ವಿಚಿತ್ರ ಈ ಮೇಲ್ ಬೇಡಿಕೆ – ‘ನೀವು ಅದನ್ನು ಕೊಡಿ, ನಾ ಇದನ್ನು ಕೊಡ್ತೇನೆ’ ಎಂಬ ಕೋರಿಕೆ !

Strange demand from thief stole actress Urvashi Rautela's phone

ಅಕ್ಟೋಬರ್ 14 ರಂದು ಪಾಕಿಸ್ತಾನ ಮತ್ತು ಭಾರತದ ನಡುವೆ ಕಿಕೆಟ್ ಪಂದ್ಯ ನಡೆದ ಸಂದರ್ಭ ಭಾರತ ಪಾಕ್ ಎದುರು ಗೆಲುವು ಸಾಧಿಸಿದ ಸುದ್ದಿ ಎಲ್ಲರಿಗೂ ತಿಳಿದಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆದಿತ್ತು. ಈ ಪಂದ್ಯ ವೀಕ್ಷಿಸಿದ ಲಕ್ಷಾಂತರ ಜನರಲ್ಲಿ ನಟಿ ಊರ್ವಶಿ ರೌಟೇಲಾ ಕೂಡ ಒಬ್ಬರು.

ಈ ಸಮಯದಲ್ಲಿ, ಮ್ಯಾಚ್ ಗೆದ್ದ ನಟಿಯ ಮುಖದಲ್ಲಿನ ಸಂತೋಷದ ಬದಲು ದುಃಖ ಜಿನುಗಿದೆ. ಏಕೆಂದರೆ ಆಕೆಯ 24 ಕ್ಯಾರೆಟ್ ಚಿನ್ನದ ಐಫೋನ್ ಮಾಯವಾಗಿತ್ತು. ಈ ಬಗ್ಗೆ ಸ್ವತಃ ನಟಿಯೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು. ಇದೀಗ ಫೋನ್ ಕಳೆದು ಹೋದ ನಂತರ ಐದು ದಿನಗಳ ಬಳಿಕ, ಊರ್ವಶಿ ರೌಟೇಲಾ ತನ್ನ ಫೋನ್ ಸಂಬಂಧಿಸಿದ ಅಪ್ಡೇಟ್ ಕೊಟ್ಟಿದ್ದಾರೆ. ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕಳ್ಳನಿಂದ ಬಂತು ಇ-ಮೇಲ್:
ಈಗ ಕಳೆದುಹೋದ ಫೋನ್ ಬಗ್ಗೆ ಊರ್ವಶಿ ರೌಟೇಲಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ಫೋನ್ ಕದ್ದವರಿಂದ ನನಗೆ ಇಮೇಲ್ ಬಂದಿದೆ. ಫೋನ್ ಕದ್ದವರು ಬೇಡಿಕೆ ಇಟ್ಟಿದ್ದಾರೆ. ತಮ್ಮ ಬೇಡಿಕೆ ಈಡೇರಿಸಿದರೆ ವಾಪಸ್ ಕೊಡುವುದಾಗಿ ಹೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಗ್ರೋವ್ ಟ್ರೇಡರ್ಸ್ ಎಂಬ ಹೆಸರಿನಲ್ಲಿ ಮೇಲ್ ಅನ್ನು ಸ್ವೀಕರಿಸಿದ್ದಾರೆ ಊರ್ವಶಿ ರೌಟೇಲಾ. ಅದರ ಸ್ಕ್ರೀನ್ಶಾಟ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. “ನಿಮ್ಮ ಫೋನ್ ನನ್ನ ಬಳಿ ಇದೆ, ನೀವು ಅದನ್ನು ಮರಳಿ ಪಡೆಯಲು ಬಯಸಿದರೆ ನನಗೆ ಸಹಾಯ ಮಾಡಬೇಕು. ನನ್ನ ಸಹೋದರನಿಗೆ ಕ್ಯಾನ್ಸರ್ ಇದೆ. ಅವನಿಗೆ ಚಿಕಿತ್ಸೆಗೆ ಹಣ ಬೇಕು” ಎಂದು ವ್ಯಕ್ತಿ ಆ ಇಮೇಲ್ನಲ್ಲಿ ಕೇಳಿದ್ದಾರೆ. ಅದಕ್ಕೆ ಪೂರಕವಾಗಿ ಸ್ಪಂದಿಸಿದ ನಟಿ ಊರ್ವಶಿ ಈ ಪೋಸ್ಟ್ನಲ್ಲಿ ‘ಥಂಪ್ಸ್ ಅಪ್’ ಸೈನ್ ಮಾಡಿದ್ದಾರೆ. ಊರ್ವಶಿ ಅವರಿಗೆ ಸಹಾಯ ಮಾಡಬಹುದು ಎಂದು ಸೋಶಿಯಲ್ ಮೀಡಿಯಾ ಹೇಳುತ್ತಿದೆ.
24 ಕ್ಯಾರೆಟ್ ಚಿನ್ನದ ಐಫೋನ್ !
ಊರ್ವಶಿಯ ಈ ಐಫೋನ್ ತುಂಬಾ ವಿಶೇಷವಾಗಿದ್ದು, ಅದು 24 ಕ್ಯಾರೆಟ್ ಚಿನ್ನದ ಐಫೋನ್ ಆಗಿದೆ. ಆಕೆ ತನ್ನ ಫೋನ್ನೊಂದಿಗೆ ಸೆಲ್ಫಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈಗ ಊರ್ವಶಿ ಕಳ್ಳನನ್ನು ಹಿಿಡೀತಾರಾ ಅಥವಾ ಕಳ್ಳನ ಸೋದರನ ಕ್ಯಾನ್ಸರ್ ರೋಗಕ್ಕೆ ಮಿಡೀತಾರಾ? ಕಾದು ನೋಡಬೇಕಾಗಿದೆ.

 

ಇದನ್ನು ಓದಿ: Soumya Vishwanathan murder: ಬರೋಬ್ಬರಿ 15 ವರ್ಷದ ನಂತರ ಪತ್ರಕರ್ತೆ ಸೌಮ್ಯ ಕೊಲೆಗಡುಕರಿಗೆ ಶಿಕ್ಷೆಯಾದ ಕುತೂಹಲಕಾರಿ ಕಥೆ – ಸೌಜನ್ಯಾ ಪ್ರಕರಣಕ್ಕೆ ಕಂಡುಬರುತ್ತಿರುವ ಭಾರೀ ಹೋಲಿಕೆ !

 

 

Leave A Reply

Your email address will not be published.