Bigg Boss house: ಬಿಗ್ ಬಾಸ್ ಮನೆಯಲ್ಲಿ ಸಂಗೀತ ಕಛೇರಿ! ಏನಪ್ಪಾ ಇದು ಎಂದ ನೆಟ್ಟಿಗರು!

Entertainment news bbk live update A concert in the Bigg Boss house

Bigg Boss house: ಬಿಗ್ ಬಾಸ್ 10 ನಲ್ಲಿ ಎಷ್ಟು ಜಗಳ ಆಗುತ್ತೋ ಅಷ್ಟೇ ಹ್ಯಾಪಿ, ಡ್ಯಾನ್ಸ್ ಎಲ್ಲವೂ ಇರುತ್ತೆ. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ಸಂಗೀತ ಕಛೇರಿ ನಡೆದಿದೆ.

ಕಾರ್ತಿಕ್‌ ಮತ್ತು ತನಿಷಾ ಸ್ವಿಮ್ಮಿಂಗ್ ಪೂಲ್‌ ಬಳಿ ಆರಾಮವಾಗಿ ಮಲಗಿಕೊಂಡು ಮಾತಾಡ್ತಾ ಇರ್ತಾರೆ. ಅಲ್ಲಿಗೆ ಮೊದಲು ಬಂದಿದ್ದು ಇಶಾನಿ. ನಂತರ ಅವರ ಜೊತೆ ನೀತು, ನಮ್ರತಾ ಬಂದು ಕುಳಿತರು. ಆಗಲೇ ಇಶಾನಿ ಬಾಯಲ್ಲಿ, ‘ಪರಪ್ಪಪ್ಪಪ್’ ಎಂದು ಹಾಡು ಬಂತು.

Bigg Boss house

ಮಳೆ ಬರುವ ಹಾಗಿರುವ ಸಂಜೆ ಎಲ್ಲರಲ್ಲಿಯೂ ಹರಟೆ ಇಶಾನಿ ಮೂಡ್‌ ಹುಟ್ಟಿಸಿತ್ತು. ನಮ್ರತಾಗೆ ಈ ವಾತಾವರಣದಲ್ಲಿ ಟ್ರಾವೆಲ್ ಮಾಡಬೇಕು ಅನಿಸುತ್ತಿದೆ ಎಂಬ ಅನಿಸಿಕೆಯನನ್ನೂ ಹಂಚಿಕೊಂಡರು. ಈ ಮಾತಿನ ನಡುವೆಯೇ ಕಾರ್ತಿಕ್ ಗರ್ಲ್‌ಫ್ರೆಂಡ್ ಬಗ್ಗೆಯೂ ಚರ್ಚೆ ಬಂತು.‘ಈಗ ಯಾರು ನಿಂಗೆ ಸ್ಪೆಷಲ್ ಫ್ರೆಂಡ್‌?’ ಎಂದು ನಮ್ರತಾ ಕೇಳಿದರೆ ಕಾರ್ತಿಕ್ ಅಷ್ಟೇ ಚಾಣಕ್ಷತನದಿಂದ, ‘ಫ್ರೆಂಡ್ಸೆಲ್ಲ ಸ್ಪೆಷಲ್ಲೇ’ ಅಂದ್ರು.

ಈ ಹೊತ್ತಿನಲ್ಲಿ ಈ ಗುಂಪಿನಿಂದ ತುಸು ದೂರದಲ್ಲಿ ಬಾಲ್ಕನಿ ಮೇಲೆ, ಮರದ ನೆರಳಿನಲ್ಲಿ ಸಂಗೀತಾ ಕೂತಿದ್ದರು. ಅವರನ್ನು ಸೇರಿಕೊಂಡವರು ಇಶಾನಿ. ‘ಇದು ತುಂಬ ಕಾಮ್‌ ಪ್ಲೇಸ್. ಇಲ್ಲಿನ ಎನರ್ಜಿಯೇ ಡಿಫರೆಂಟ್‌’ ಎಂದರು ಇಶಾನಿ. ಹಕ್ಕಿಗಳ ಕಲರವ, ಮರದ ತಂಪು ಎಲ್ಲದರ ಬಗ್ಗೆ ಸಂಗೀತಾ ಮತ್ತು ಇಶಾನಿ ಮಾತುಕತೆ ಸಾಗಿತು. ಸಂಗೀತಾ ಶಿಳ್ಳೆ ಹಾಕಿ ಹಕ್ಕಿಗಳ ಜೊತೆಗೆ ಮಾತುಕತೆ ನಡೆಸಲೂ ಪ್ರಯತ್ನಿಸಿದರು.

ಆಗಲೇ ಇಶಾನಿ ಮತ್ತೆ, ‘ಪರಪ್ಪಪ್ಪ ಪ್ಪ ಪ್ಪ ಪ್ಪ’ ಎಂದು ಹಾಡಲು ಶುರುಮಾಡಿದರು. ಸಂಗೀತಾಗೆ ಇದ್ದಕ್ಕಿದ್ದ ಹಾಗೆಯೇ ಸಂಗೀತ ಕಲಿಯುವ ಹುಕಿ ಬಂತು. ‘ನಂಗೂ ಕಲಿಸಿಕೊಡಿ’ ಎಂದು ಅವರು ಇಶಾನಿ ಬಳಿಯಿಂದ ಸಂಗೀತ ಹೇಳಿಸಿಕೊಳ್ಳಲು ಪ್ರಾರಂಭಿಸಿದರು. ಅಷ್ಟೇ ಅಲ್ಲ, ಗುರುವಿನಿಂದ ಶಹಭಾಶ್‌ಗಿರಿಯನ್ನೂ ಪಡೆದುಕೊಂಡರು.

ಅತ್ತ ಕಡೆ ವರ್ತೂರ್ ಸಂತೋಷ್‌ ಮತ್ತಿತರರು ಕೃಷಿಯ ಕುರಿತಾಗಿ ಜೋರು ಜೋರಾಗಿ ಮಾತುಕತೆ ನಡೆಸುತ್ತಿದ್ದರೆ ಇತ್ತ ಬಾಲ್ಕನಿಯಲ್ಲಿ ಸಂಗೀತದ ಅಲೆಗಳು ಸಂಜೆಯ ತಂಗಾಳಿಯ ಹಾಗೆ ಸುಳಿಯುತ್ತಿದ್ದವು.

ರಾಪ್‌ ಸ್ಟೈಲ್‌ನಿಂದ ಇಶಾನಿ ಕ್ಲಾಸಿಕಲ್ ಮ್ಯೂಸಿಕ್ ಕಡೆಗೆ ಹೊರಳಿ, ‘ಸ ರಿ ಗ ಮ ಪ ದ ನಿ ಸ; ಸ ನಿ ದ ಪ ಮ ಗ ರಿ ಸ’ ಎಂದು ಸಂಗೀತಾ ಮತ್ತು ಇಶಾನಿ ಇಬ್ಬರೂ ಒಟ್ಟಿಗೇ ಹೇಳಿದರು. ಸಂಗೀತ ಅವರೂ ತಮಗಿರುವ ಸಂಗೀತದ ಅರಿವನ್ನು ಹಂಚಿಕೊಂಡರು. ಕೆಲವು ಕಾಲ ಇಶಾನಿ ಮತ್ತು ಸಂಗೀತಾ ನಡುವೆ ನಡೆದ ಈ ಸಂಗೀತದ ಜುಗಲ್ಬಂದಿ ನಿಜಕ್ಕೂ ಕುತೂಹಲಕಾರಿಯಾಗಿತ್ತು.

ಒಟ್ಟಿನಲ್ಲಿ ಜಗಳದ ಹಿರಿಸು ಮುನಿಸುಗಳ ನಡುವೆ ಈ ಹಾಡು ಸಕತ್ತಾಗಿ ಮನಸ್ಸಿಗೆ ಖುಷಿ ಕೊಟ್ಟಿದೆ. ನೀವು ಕೂಡ ಬಿಗ್ ಬಾಸ್(Bigg Boss house) 24 ಗಂಟೆ live ನೋಡ್ಬೇಕ? ಹಾಗಾದ್ರೆ jio live ನೋಡಿ.

ಇದನ್ನೂ ಓದಿ: Bigg Boss ಮನೆಗೆ ಬಂದ್ರು ಹತ್ತಾರು ಮಂದಿ!ಯಪ್ಪಾ! ಯಾರಪ್ಪಾ ಇವ್ರೆಲ್ಲಾ? ನೀವೇ ನೋಡಿ

Leave A Reply

Your email address will not be published.