Lip kiss: ಲಿಪ್ ಕಿಸ್ ಮಾಡೋ ಜನರಿಗೆ ಸ್ವೀಟ್ ನ್ಯೂಸ್ ! ಆ ಕ್ಷಣ ದೇಹದಲ್ಲಿ ಆಗುವ ಕೆಮಿಕಲ್ ರಿಯಾಕ್ಷನ್ ಬಗ್ಗೆ ಕೇಳಿದ್ರೆ ಅಚ್ಚರಿ ಪಡ್ತೀರಾ !

Lifestyle health news relationship tips intresting facts about Lip kiss

Lip kiss: ಚುಂಬನ ಒಂದು ರೀತಿಯ ರೊಮ್ಯಾನ್ಸ್ . ಕಿಸ್‌ ಹಣೆಗೆ, ಕೆನ್ನೆಗೆ ಕೊಟ್ಟಾಗ ಆಗುವ ಅನುಭವಕ್ಕಿಂತ ತುಟಿಗೆ ಕೊಟ್ಟಾಗ ಆಗುವ ಅನುಭವ ಬೇರೆನೇ ಇದೆ. ಅದಕ್ಕೊಂದು ನಿರ್ದಿಷ್ಟ ಕಾರಣವಿದೆ. ತುಟಿ ತುಂಬಾ ಮೃದು. ನರತಂತುಗಳು ಚರ್ಮದ ಕೆಳಗೆ ಇರುತ್ತದೆ. ಸಂವೇದನಾ ಶೀಲತೆ ತುಟಿಗಳಲ್ಲಿ ಬಹಳ ಬೇಗ ಆಗುವುದರಿಂದ, ಬೆಚ್ಚಗಿನ ಉಸಿರು ತಾಗಿದರೂ ಅವು ಸ್ಪಂದಿಸುವುದು ಬೇಗ. ವಿಷಯವೇನೆಂದರೆ, ತುಟಿಗಳನ್ನು ಮಿದುಳಿಗೆ ಸಂಪರ್ಕಿಸುವ ನರಗಳ ಸಂಖ್ಯೆ, ಮಿದುಳನ್ನು ದೇಹದ ಬೇರೆ ಯಾವುದೇ ಭಾಗಕ್ಕೆ ಸಂಪರ್ಕಿಸುವ ನರಗಳ ಸಂಖ್ಯೆಗಿಂತ ಹೆಚ್ಚು. ತುಟಿಗೆ ತುಟಿ ಬೆರಸಿ ಮಾಡುವ ಚುಂಬನದ( Lip kiss) ಸಂದರ್ಭ ದೇಹದಲ್ಲಾಗುವ ಕೆಮಿಕಲ್ ರಿಯಾಕ್ಷನ್ ಬಗ್ಗೆ ಕೇಳಿದ್ರೆ ನೀವು ಅಚ್ಚರಿ ಪಡ್ತೀರ. ಅಷ್ಟೇ ಅಲ್ಲದೆ, ಪ್ರೀತಿಯ ಉತ್ತುಂಗದ ಅನುಭವವನ್ನು ಅಧರ ಚುಂಬನ ನೀಡಿ, ಹಲವು ಸಲ ಪುರುಷರು ಚುಂಬನ ಮಾತ್ರದಿಂದಲೇ ಸ್ಕಲನ ಸುಖ ಪಡೆಯಬಲ್ಲರು. ಸ್ತ್ರೀಯರು ಕಿಸ್ ಸಂದರ್ಭ ಒದ್ದೆ (Wet) ಆಗಿ, ಭಾವತೃಪ್ತಿ (Orgasm) ಆಗುವುದು ಕೂಡಾ ಆಗಾಗ ನಡೆಯುತ್ತದೆ.

ಚುಂಬನ ಲೈಂಗಿಕತೆಯ ಒಂದು ಭಾಗ. ಈ ಚುಂಬನದಿಂದ ತೂಕ ಕಡಿಮೆ ಆಗುತ್ತದೆ ಎನ್ನಲಾಗಿದೆ. ಆತಂಕ, ಖಿನ್ನತೆ ಮುಂತಾದವುಗಳು ಚುಂಬನದಿಂದ ಕಡಿಮೆ ಆಗುತ್ತದೆ. ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ಮುಖ್ಯವಾಗಿ ಮಾನಸಿಕ ಆರೋಗ್ಯವನ್ನು ಸಮೃದ್ಧಗೊಳಿಸುತ್ತದೆ. ಮುಖದ ಸ್ನಾಯುಗಳಿಗೆ ಕೂಡಾ ಚುಂಬನ ಒಳ್ಳೆಯ ವ್ಯಾಯಾಮ ಕೊಡುತ್ತದೆ. ಇದರಿಂದ ಮುಖದ ಸೌಂದರ್ಯ ಹೆಚ್ಚಾಗುತ್ತದೆ. ಚುಂಬನದಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮೈಗ್ರೇನ್ ಕಡಿಮೆಯಾಗಲು ನಿಯಮಿತ ಚುಂಬನ ಸಹಾಯ ಮಾಡುತ್ತದೆ.

ಅಂದಹಾಗೆ, ಆಲಿಂಗನವು ಪ್ರೀತಿಯ ಸಂಕೇತ ಮಾತ್ರವಲ್ಲ ಇದು ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು. ಎಂಟು ನಿಮಿಷಗಳ ಕಾಲ ಪರಸ್ಪರ ಆಲಂಗಿಸಿಕೊಂಡರೆ ಅದರಿಂದ ಆರೋಗ್ಯಕ್ಕೂ ಲಾಭವುಂಟಾಗುತ್ತದೆ. ಆಪ್ತರನ್ನು ಭೇಟಿಯಾದಾಗ ಹಿತವಾಗಿ ಅಪ್ಪಿಕೊಳ್ಳುವುದರಿಂದ ಸಂಬಂಧಗಳು ಗಟ್ಟಿಯಾಗುತ್ತವೆ. ಒಂದು ಆಲಿಂಗನ ನಿಮ್ಮ ಮನಸ್ಸನ್ನು ಶಾಂತವಾಗಿರಿಸುವುದು ಮಾತ್ರ ವಲ್ಲ ಆಕ್ಸಿಟೋಸಿನ್ ಹಾರ್ಮೋನನ್ನು ಉತ್ತೇಜಿಸುತ್ತದೆ.

ಹಾಗೇ ನಮ್ಮ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಹಾರ್ಮೋನ್‌ಗಳು ಇರುವುದು ತುಂಬಾನೇ ಮುಖ್ಯ. ನಾವು ಸಂತೋಷವಾಗಿರಲು ನಮ್ಮ ದೇಹದಲ್ಲಿ ಕೆಲವು ಹಾರ್ಮೋನುಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ. ಯಾವ ಹಾರ್ಮೋನುಗಳು? ಇಲ್ಲಿದೆ ಮಾಹಿತಿ!!.

ಡೋಪಮೈನ್: ಈ ಹಾರ್ಮೋನ್‌ನ ಹೆಚ್ಚಿನ ಬಿಡುಗಡೆಯ ಕಾರಣ, ನಾವು ಉತ್ತಮ ಆಲೋಚನೆಗಳೊಂದಿಗೆ ಶಕ್ತಿಯುತರಾಗಿದ್ದೇವೆ. ತೂಕವನ್ನು ಕಳೆದುಕೊಳ್ಳುವುದು ಮತ್ತು ಉತ್ತಮ ಆಕಾರವನ್ನು ಪಡೆಯುವುದು ಸೇರಿದಂತೆ ದೊಡ್ಡ ಅಥವಾ ಸಣ್ಣ ಗುರಿಗಳನ್ನು ಸಾಧಿಸಿದಾಗ ಈ ಹಾರ್ಮೋನ್ ಅಧಿಕವಾಗಿ ಉತ್ಪತ್ತಿಯಾಗುತ್ತದೆ ಮತ್ತು ನಮ್ಮನ್ನು ಹೆಚ್ಚು ಉತ್ಸುಕಗೊಳಿಸುತ್ತದೆ. ಜೊತೆಗೆ ಸಿರೂಟೋನಿನ್ ಹಾರ್ಮೋನ್ ನಮ್ಮಲ್ಲಿ ಒತ್ತಡ ಮತ್ತು ಆತಂಕದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನಾವು ಆರೋಗ್ಯವಾಗಿದ್ದೇವೆ ಎಂದು ಭಾವಿಸುತ್ತೇವೆ.

ಎಂಡಾರ್ಫಿನ್‌ಗಳು: ಎಂಡಾರ್ಫಿನ್‌ಗಳು ನಮಗೆ ಸಂತೋಷವನ್ನು ಉಂಟುಮಾಡಲು ನೇರವಾಗಿ ಸಂಬಂಧಿಸಿದ ಹಾರ್ಮೋನುಗಳಾಗಿವೆ. ಇವು ನೋವನ್ನು ಕಡಿಮೆ ಮಾಡುತ್ತವೆ ಮತ್ತು ನಮ್ಮ ದೇಹವನ್ನು ಆರಾದಾಯಕವಾಗಿಸುತ್ತದೆ. ಗಾಯದ ಕಾರಣದಿಂದಾಗಿ ದೇಹದ ಯಾವುದೇ ಸ್ನಾಯುಗಳಿಗೆ ಹಾನಿಯಾದರೆ, ಈ ಎಂಡಾರ್ಫಿನ್‌ಗಳು ರಿಪೇರಿ ಮಾಡಿ, ನಮ್ಮನ್ನು ಆರಾಮದಾಯಕ ಸ್ಥಿತಿಗೆ ತರುತ್ತವೆ. ಹಾಗಾಗಿ ಚುಂಬನ ಆಲಿಂಗನ ಮಿಸ್ ಮಾಡ್ಕೋಬೇಡಿ. ಕಿಸ್ ಮಾಡಿ, ರಿಲಾಕ್ಸ್ ಆಗಿ !

ಇದನ್ನೂ ಓದಿ:  ನೋಡೋಕೆ ಸೂಪರ್ ಫಿಗರ್, ಆದ್ರೆ ಈಕೆ ಮಾಡೋ ಕೆಲಸ ಎಷ್ಟು ಡೇಂಜರ್, ಏನಾ ಮಹಾ ಡೇಂಜರ್ ನ ಕೆಲ್ಸ ?!

Leave A Reply

Your email address will not be published.