Social Media: ತನ್ನ ಕಂಕುಳಿನಲ್ಲಿ ಬೆಳೆದ ಕೂದಲನ್ನು ತೋರಿಸುವ ಮೂಲಕ ಹಣ ಗಳಿಸಿದ ಲೇಡಿ!

Social Media woman who earned money by showing armpit hair

ಈಗಿನ ಕಾಲದಲ್ಲಿ ಹೇಗೆಲ್ಲಾ ಹಣ ಗಳಿಸುತ್ತಾರೆ ಅಂತ ಹೇಳೋಕೆ ಆಗಲ್ಲ ಸ್ವಾಮಿ. ಯಾಕಂದ್ರೆ ಲಾಕ್​ಡೌನ್​ ಟೈಮ್​ನಲ್ಲಿ ನಾನಾರೀತಿಯಾಗಿ ಹಣ ಗಳಿಸಲು ಜನರು ಕಲಿತಿದ್ದಾರೆ, ಅನೇಕ ಬ್ಯಸಿನೆಸ್​ ಐಡಿಯಾಗಳು ಕೂಡ ಹುಟ್ಟಿಕೊಂಡು ಅದರಿಂದ ಸಕ್ಸಸ್​ ಕೂಡ ಆಗಿದ್ದಾರೆ. ಆದರೆ ಇಲ್ಲಿ ವೈರಲ್​ ಆಗ್ತಾ ಇರೋ ಲೇಡಿ ವೈರಲ್​ ಆಗ್ತ ಇರೋ ವಿಚಾರ ಕೇಳಿದ್ರೆ ನಿಮಗೆ ಅಸಹ್ಯ ಅನಿಸಬಹುದು. ಯಾಕೆ ಗೊತ್ತಾ ಆಕೆಯ ಬ್ಯುಸಿನೆಸ್​ ಇಂದ. ಇನ್ನಷ್ಟು ಮಾಹಿತಿ ನಿಮಗಾಗಿ.

ಲಾಕ್‌ಡೌನ್ ಸಮಯದಲ್ಲಿ, ಜನರು ಹಣ ಸಂಪಾದಿಸುವ ವಿಚಿತ್ರ ಮಾರ್ಗಗಳು ವೈರಲ್ ಆಗಿವೆ. ಲಾಕ್‌ಡೌನ್ ಸಮಯದಲ್ಲಿ ಮಹಿಳೆಯೊಬ್ಬಳು ತನ್ನ Vases ಮಾರಾಟ ಮಾಡುವ ಮೂಲಕ ಸಾಕಷ್ಟು ಹಣವನ್ನು ಗಳಿಸಿದ್ದಳು. ಹಾಗೆಯೇ ಇಲ್ಲಿ ಒಬ್ಬಳು ತನ್ನ ಕಂಕುಳಿನಲ್ಲಿ ಬೆಳೆದ ಕೂದಲನ್ನು ತೋರಿಸುವ ಮೂಲಕ ಹಣ ಗಳಿಸಿದ್ದಾಳೆ.

ಶೀ, ಏನಿದು ಅಸಹ್ಯ ಅಂತ ನಿಮಗೆ ಅನಿಸ್ತಾ ಇದ್ಯಾ? ಎಸ್​ ನಿಜ, ಓನ್ಲಿ ಫ್ಯಾನ್ಸ್ ಹೆಸರಿನ ಖಾತೆಗಳ ಮೂಲಕ ಅನೇಕ ಜನರು ಸಾಕಷ್ಟು ಹಣವನ್ನು ಗಳಿಸಿದ್ದಾರೆ. ಫೆನೆಲ್ಲಾ ಫಾಕ್ಸ್ ಎಂಬ ಮಹಿಳೆ ವಿಚಿತ್ರ ರೀತಿಯಲ್ಲಿ ಗಳಿಸುವ ಈ ವಿಧಾನಗಳನ್ನು ಅಳವಡಿಸಿಕೊಂಡರು. ಫೆನೆಲ್ಲಾ ಎಂಬಾಕೆ ತನ್ನ ಕಂಕುಳಿನ ಕೂದಲನ್ನು ಆನ್‌ಲೈನ್‌ನಲ್ಲಿ ತೋರಿಸಿ 5 ಕೋಟಿಗೂ ಹೆಚ್ಚು ಗಳಿಸಿದ್ದಾಳೆ. ಈ ವಿಚಿತ್ರ ರೀತಿಯಲ್ಲಿ ಮಹಿಳೆ ಲಕ್ಷಾಧಿಪತಿಯಾದ್ರೂ ಗೌರವ ಕಳೆದುಕೊಂಡಿದ್ದಾಳೆ. ಈ ವೃತ್ತಿಯಲ್ಲಿ ಅವರು ಹಣವನ್ನು ಪಡೆದರು ಆದರೆ ಅನೇಕ ನಷ್ಟಗಳನ್ನು ಅನುಭವಿಸಬೇಕಾಯಿತು ಎಂದು ಫೆನೆಲ್ಲಾ ಹೇಳಿದರು.

ಬ್ರಿಟನ್‌ನ ವೋರ್ಸೆಸ್ಟರ್ ನಿವಾಸಿ ಮೂವತ್ತು ವರ್ಷದ ಫೆನೆಲ್ಲಾ, ಈ ವೃತ್ತಿಯಿಂದಾಗಿ ಜನರು ತನ್ನನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ ಎಂದು ಹೇಳಿದರು. ತನ್ನ ಕಂಕುಳಿನ ಕೂದಲನ್ನು ಪೋಸ್ಟ್ ಮಾಡಿದ ನಂತರ ಜನರು ಅವಳನ್ನು ವಿಚಿತ್ರವಾಗಿ ನೋಡಲು ಪ್ರಾರಂಭಿಸಿದರು ಎಂದು ಹೇಳಿದರು. ಆಕೆಗೆ ಹಲವಾರು ಬಾರಿ, ಹಲವಾರು ಜನರು ಬ್ಲಾಕ್​ಮೇಲ್​ ಕೂಡ ಮಾಡಿದ್ದರು.
ಇದಲ್ಲದೇ ಈ ವರ್ಷದ ಆರಂಭದಲ್ಲಿ ಮತ್ತೊಬ್ಬ ವ್ಯಕ್ತಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದ. ಫೆನೆಲ್ಲಾ ಅವರ ವೈಯಕ್ತಿಕ ಜೀವನವು ಸವಾಲಿನದು. ಅವಳು ಇಲ್ಲಿಯವರೆಗೆ ಪುರುಷರನ್ನು ಡೈರೆಕ್ಟ್​ ಆಗಿ ನೋಡಿಲ್ಲ. ಅವಳು ಯಾರೊಂದಿಗಾದರೂ ರಿಲೇಷನ್​ಶಿಪ್​ನಲ್ಲಿ ಇರಬಹುದು ಎಂದು ಎಲ್ಲರೂ ಭಾವಿಸುತ್ತಾರೆ. ನೋಡಿ, ಹೇಗೆಲ್ಲಾ ಹಣ ಗಳಿಸುತ್ತಾರೆ ಅಂತ.

Leave A Reply

Your email address will not be published.