Mullayyanagiri Hill: ಮುಳ್ಳಯ್ಯನಗಿರಿ ಬೆಟ್ಟಕ್ಕೆ ನೋ ಎಂಟ್ರಿ! ಯಾಕೆ ಏನಾಯ್ತು ?ಪ್ರವಾಸಕ್ಕೆ ಜಿಲ್ಲಾಡಳಿತ ನಿರ್ಬಂಧ!

Chikkamagaluru news No entry to Mullayyanagiri Hill district administration restricted travel

Mullayyanagiri Hill: ಟ್ರಿಪ್ ಹೋಗ್ಬೇಕು ಅಂತ ಪ್ಲಾನ್ ಹಾಕಿದ್ದೀರಾ? ಅದರಲ್ಲೂ ಮಲೆನಾಡು ಆದ ಚಿಕ್ಕಮಗಳೂರಿಗೆ ಹೋಗಬೇಕು ಅಂತ ಇದ್ದೀರಾ? ನೆನಪಿರಲಿ, ಈ ಸಮಯದಲ್ಲಿ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಗೆ (Mullayyanagiri Hill) ನೋ ಎಂಟ್ರಿ. ಯಾಕೆ ಎಂಬುದಾಗಿ ಡೀಟೇಲ್ಸ್ ಇಲ್ಲಿದೆ ನೋಡಿ.

ಪ್ರತಿ ವರ್ಷ ದತ್ತ ಮಾಲೆ ಹಾಕಿ ಈ ಬೆಟ್ಟಕ್ಕೆ ಬರುವವರ ಮಂದಿ ಸಾವಿರಾರು. ಹಾಗೆ ಇಲ್ಲಿ ಗಲಭೆಗಳು ಕೂಡ ಆಗುವುದುಂಟು. ಈ ಬಾರಿ ಮುನ್ನೆಚ್ಚರಿಕೆ ಕ್ರಮವನ್ನು ಕೂಡ ವಹಿಸಲಾಗಿದೆ.

ಚಿಕ್ಕಮಗಳೂರಿನಲ್ಲಿರುವ ಪ್ರವಾಸಿಗರ ನೆಚ್ಚಿನ ತಾಣ ಮುಳ್ಳಯ್ಯನಗಿರಿ, ದತ್ತ ಬೆಟ್ಟಕ್ಕೆ ನವೆಂಬರ್ 4 ರಿಂದ 3 ದಿನ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ದತ್ತಮಾಲಾ ಅಭಿಯಾನ ಹಿನ್ನೆಲೆ ನವೆಂಬರ್ 4 ರಿಂದ 6 ವರೆಗೆಗೆ ದತ್ತಪೀಠ, ಮಾಣಿಕ್ಯಧಾರ, ಸೀತಾಳಯ್ಯನಗಿರಿ, ಮಾಣಿಕ್ಯಧಾರ, ಗಾಳಿಕೆರೆಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಅ.30 ರಿಂದ ನ.5 ರವರೆಗೆ ದತ್ತಮಾಲಾ ಅಭಿಯಾನ ನಡೆಯಲಿದ್ದು, ಸಾವಿರಾರು ಮಾಲಾಧಾರಿಗಳು ದತ್ತಪೀಠಕ್ಕೆ ತೆರಳಲಿದ್ದಾರೆ. ಈ ಹಿನ್ನೆಲೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಈ ಅಧ್ಯಯನ ಮುಗಿದ ನಂತರ ಎಂದಿನಂತೆ ನೀವು ಕೂಡ ಈ ಬೆಟ್ಟಕ್ಕೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ತೆರಳಬಹುದು. ಇದು ಅಧಿಕೃತ ಘೋಷಣೆಯಾಗಿದೆ.

Leave A Reply

Your email address will not be published.