Varthur santhosh bail: ಹುಲಿ ಪಂಜಾದಿಂದ ಬಿಡಿಸಿಕೊಂಡು ಬಂದ ವರ್ತೂರು, ಮತ್ತೆ ಬಿಗ್ ಬಾಸ್ ಮನೆಗೆ ಈ ರೈತ ಹೋಗೋ ಬಗ್ಗೆ ಬಿಗ್ ಅಪ್ಡೇಟ್ !

Entertainment news bigg boss kannada contestant Varthur santhosh bail granted

Varthur santhosh bail :ಬಿಗ್ ಬಾಸ್ 10 ಸ್ಪರ್ದಿ ವರ್ತೂರ್ ಸಂತೋಷ್ ಹುಲಿ ಉಗುರು ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. ಸತತ ಐದು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂದಿತರಾಗಿದ್ದರು. ಹಲವಾರು ವಾದ ವಿವಾದಗಳ ನಂತರ ಸಂತೋಷ ಅವರು ಬಿಡುಗಡೆಯಾಗಿದ್ದಾರೆ(Varthur santhosh bail ). ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.

ಹುಲಿ ಉಗುರಿನ ಪೆಂಡೆಂಟ್ ಧರಿಸಿ ಬಂಧಿತನಾಗಿದ್ದರು ವರ್ತೂರು ಸಂತೋಷ್. ಹೀಗಾಗಿ ಬಿಗ್ ಬಾಸ್ ಮನೆಯಿಂದಲೇ ನೇರವಾಗಿ ವಿಚಾರಣೆಗೆ ಒಳಪಡಿಸಲಾಗಿತ್ತು. ಇದಾದ ಬಳಿಕ ನ್ಯಾಯಾಲಯದ ಪ್ರಕಾರ ಜೈಲಿಗೆ ಹೋಗಬೇಕಾಯಿತು.

ಕಗ್ಗಲೀಪುರ ವಲಯ ಅರಣ್ಯಾಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದರು ಸಂತೋಷ್.
ಕಳೆದ ಐದು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿಯೆ ಇದ್ರು ಬಿಗ್ ಬಾಸ್ ಸ್ಪರ್ಧಿ.

ವರ್ತೂರು ಸಂತೋಷ್ ಗೆ ಇದೀಗ ಜಾಮೀನು ಸಿಕ್ಕಿದೆ. ನಾಲ್ಕು ಸಾವಿರ ಅಥವಾ ಒಬ್ಬರ ಶ್ಯೂರಿಟಿ ಮೇರೆಗೆ ಜಾಮೀನು ನೀಡಲಾಗಿದೆ. ಎರಡನೇ ಎಸಿಜೆಎಂ ಕೋರ್ಟ್ ನಿಂದ ಜಾಮೀನು ಮಂಜೂರು ಕೂಡ ಆಗಿದೆ. ನ್ಯಾಯಾಧೀಶರಾದ ನಾಗೇಂದ್ರ ರವರಿಂದ ಜಾಮೀನು ಆದೇಶಿಸಲಾಗಿದೆ.

ಇನ್ನು ಮುಂದಿನ ದಿನಗಳಲ್ಲಿ ವರ್ತೂರ್ ಸಂತೋಷ್ ಅವರು ಮರಳಿ ಬಿಗ್ ಬಾಸ್ ಮನೆಗೆ ಹೋಗ್ತಾರಾ? ಅಥವಾ ಸೀದಾ ತನ್ನ ನಿವಾಸಕ್ಕೆ ಹೋಗ್ತಾರ ಎಂಬುದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ.

ಇದನ್ನೂ ಓದಿ: ಮುಳ್ಳಯ್ಯನಗಿರಿ ಬೆಟ್ಟಕ್ಕೆ ನೋ ಎಂಟ್ರಿ! ಯಾಕೆ ಏನಾಯ್ತು ?ಪ್ರವಾಸಕ್ಕೆ ಜಿಲ್ಲಾಡಳಿತ ನಿರ್ಬಂಧ!

Leave A Reply

Your email address will not be published.