Puneet Rajkumar: ಅಪ್ಪುವಿನ 2 ನೇ ವರ್ಷದ ಪುಣ್ಯಸ್ಮರಣೆ – ಈ ಸಮಾಧಿಗೆ ಇದೆ ಹಲವು ವಿಶೇಷತೆ !

Puneet Rajkumar 2nd Year Commemoration This tomb has many special features

Puneet Rajkumar: ನಾಳೆ ಅಂದರೆ ಅಕ್ಟೋಬರ್ 29 ಪುನೀತ್ ರಾಜ್ ಕುಮಾರ್ ಅಗಲಿ 2 ವರ್ಷ ಕಳೆಯುತ್ತದೆ. ಕಂಠೀರವ ಸ್ಟುಡಿಯೋದಲ್ಲಿ ನಾಳೆಯ ಪುಣ್ಯಸ್ಮರಣೆಗೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಪುನೀತ್ ರಾಜ್ ಕುಮಾರ್ ಸ್ಮಾರಕವನ್ನು ಬಿಳಿ ಮಾರ್ಬಲ್ಸ್ ನಲ್ಲಿ ನಿರ್ಮಾಣವಾಗಿರಲಿದ್ದಾರೆ. ಸ್ಮಾರಕದ ಮೇಲೆ ಪುನೀತ್ ರಾಜ್ ಕುಮಾರ್ (Puneet Rajkumar) ಫೋಟೋ ಕೂಡ ಇದೆ. ಸ್ಮಾರಕದ ಸುತ್ತಲ್ಲೂ ಸಾದೇನಹಳ್ಳಿ ಕಲ್ಲಿನ ಚಪ್ಪಡಿ ಹೊದಿಸಲಾಗಿದೆ.
ಪುನೀತ್ ಅಗಲಿಕೆಯ ನೋವು ಇನ್ನೂ ಕುಟುಂಬಸ್ಥರನ್ನು ಕಾಡುತ್ತಿದೆ. ಬೆಳಗ್ಗೆ 9 ಗಂಟೆಗೆ ಪುನೀತ್ ರಾಜ್ಕುಮಾರ್ ಕುಟುಂಸ್ಥರು ಸಮಾಧಿ ಸ್ಥಳಕ್ಕೆ ಬರಲಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಮಕ್ಕಳು ಪೂಜೆ ಸಲ್ಲಿಸಲಿದ್ದಾರೆ. ರಾಘಣ್ಣ, ಶಿವಣ್ಣ ಸೇರಿದಂತೆ ಕುಟಂಬಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ರಕ್ತದಾನ ಶಿಬಿರ ನೇತ್ರ ತಪಾಸಣೆ ಇರಲಿದೆ. ಇನ್ನು ಇಡೀ ದಿನ ರಾಜ್ ಕುಟುಂಬಸ್ಥರು ಅನ್ನದಾನ ಮಾಡುತ್ತಿದ್ದಾರೆ. ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆ ಕಂಠೀರವ ಸ್ಟುಡಿಯೋಗೆ ಜನ ಸಾಗರವೇ ಹರಿದು ಬರ್ತಿದೆ. ಅಭಿಮಾನಿಗಳು ಆರಾಧ್ಯ ದೈವ ಪುನೀತ್ ರಾಜ್ಕುಮಾರ್ ಪುಣ್ಯ ಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.
ಪುನೀತ್ ರಾಜ್ ಕುಮಾರ್ ಸಮಾಧಿ ಸ್ಥಳಕ್ಕೆ ನಟ ನೆನಪಿರಲಿ ಪ್ರೇಮ್ ಕುಟುಂಬ ಸಮೇತರಾಗಿ ಭೇಟಿ ನೀಡಿದ್ರು. ಮಗಳ ಟಗರು ಪಲ್ಯ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಪ್ರೇಮ್ ಅಪ್ಪು ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಸಮಾಧಿ ನಿರ್ಮಾಣ ಕೆಲಸಗಳು ನಡೀತಿರೋ ಕಾರಣ ಸದ್ಯಕ್ಕೆ ಯಾರಿಗೂ ದರ್ಶನವಿಲ್ಲ. ಮಧ್ಯಾಹ್ನದ ನಂತ್ರ ಸಮಾಧಿ ಬಳಿಗೆ ಅಭಿಮಾನಿಗಳನ್ನು ಬಿಡುವ ಸಾಧ್ಯತೆ ಇದೆ. ಸದ್ಯ ಲೈಟಿಂಗ್ ಅರೇಂಜ್‌ಮೆಂಟ್ಸ್ ಮಾಡಲಾಗ್ತಿದೆ. ರಾಜ್ ಕುಮಾರ್ ಸ್ಮಾರಕದ ರೀತಿಯಲ್ಲೇ ಅಪ್ಪು ಸ್ಮಾರಕ ನಿರ್ಮಾಣ ಮಾಡಲಾಗ್ತಿದೆ. ಅಕ್ಟೋಬರ್ 29ಕ್ಕೆ ಪುನೀತ್ ನಿಧನರಾಗಿ ಎರಡು ವರ್ಷ ಕಂಪ್ಲೀಟ್ ಆಗಿದ್ದು, ಕಳೆದ 1 ತಿಂಗಳಿನಿಂದ ಅಪ್ಪು ಸಮಾಧಿ ನಿರ್ಮಾಣ ಮಾಡಲಾಗಿದೆ.

ಅಪ್ಪು 2ನೇ ವರ್ಷದ ಪುಣ್ಯ ಸ್ಮರಣೆಯನ್ನು ಸಾರ್ಥಕವಾಗಿ ಆಚರಿಸಲು ಅಭಿಮಾನಿಗಳು ಸಜ್ಜು ಮಾಡಿದ್ದಾರೆ. ಬೆಳಗ್ಗೆಯಿಂದ ರಾತ್ರಿವರೆಗೂ ಸ್ಮಾರಕದ ಬಳಿ ನಿರಂತರ ಅನ್ನದಾನ ಮಾಡುತ್ತಾರೆ. ಅಪ್ಪು ನೆನಪಲ್ಲಿ ಅಭಿಮಾನಿಗಳಿಂದ ರಕ್ತದಾನ, ನೇತ್ರದಾನ ಶಿಬಿರ ಕೂಡ ಆಯೋಜಿಸಲಾಗಿದೆ. ನೀವೂ ಕೂಡ ಭಾಗಿಯಾಗಬಹುದು. ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ.

Leave A Reply

Your email address will not be published.