Puneeth kerehalli: ಕೆರೆಹಳ್ಳಿ ಪುನೀತ್ ಮೇಲೆ ಬಿತ್ತು ಮತ್ತೊಂದು ಕೇಸ್, ಈ ಸಲದ ಪ್ರಕರಣ ಯಾಕಾಗಿ ಗೊತ್ತೇ ?

Karnataka news FIR against Hindu activist Puneeth kerehalli latest news

Puneeth kerehalli: ಹಿಂದೂ ಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಪದಗಳ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ತುಮಕೂರಿನ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ನಿನ್ನ, ಶನಿವಾರದಂದು ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕೆಪಿಸಿಸಿ ವಕ್ತಾರ ವಕೀಲ ಮತ್ತು ಸೂರ್ಯ ಮುಕುಂದರಾಜು ಮತ್ತು ಅವರ ಸಹೋದ್ಯೋಗಿಗಳ ವಿರುದ್ಧ ಅವಹೇಳನಕಾರಿ ಪದ ಬಳಸಿ ಪೋಸ್ಟ್ ಹಂಚಿಕೊಳ್ಳಲಾಗಿತ್ತು. ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಲ್ ಎಚ್ ತೇಜಸ್ ಗೌಡ ಎಂಬವರು ದೂರು ದಾಖಲಿಸಿದ್ದಾರೆ.

ರಾಷ್ಟ್ರ ರಕ್ಷಣಾ ಪಡೆಯ ಅಧ್ಯಕ್ಷ ಪುನೀತ್ ಕೆರೆಹಳ್ಳಿ( Puneeth kerehalli) ಫೇಸ್ಟುಕ್ ಖಾತೆ ನಿರ್ಬಂಧಿಸಬೇಕು ಹಾಗೂ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ತುಮಕೂರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಈಗ ನ್ಯಾಯಾಲಯದ ಆದೇಶದ ಮೇರೆಗೆ ಕಲಂ 504ರ ಅಡಿ ಪುನೀತ್ ಕೆರೆಹಳ್ಳಿ ವಿರುದ್ಧ ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಸಮೋಸ ಸವಿದು ಗ್ರಹಣ ಸ್ವಾಗತಿಸಿದ ಪ್ರಗತಿವೀರರು – ಸಂಪೂರ್ಣ ದೇವ ಮಂದಿರಗಳನ್ನು ಶುದ್ದಿಗೊಳಿಸಿದ ಭಕ್ತರು | ವಿಭಿನ್ನ ನಂಬಿಕೆಗಳ ಮಧ್ಯೆ ಸರಿದು ಹೋದ ಚಂದ್ರ !

Leave A Reply

Your email address will not be published.