Lunar Eclipse: ಸಮೋಸ ಸವಿದು ಗ್ರಹಣ ಸ್ವಾಗತಿಸಿದ ಪ್ರಗತಿವೀರರು – ಸಂಪೂರ್ಣ ದೇವ ಮಂದಿರಗಳನ್ನು ಶುದ್ಧಿಗೊಳಿಸಿದ ಭಕ್ತರು | ವಿಭಿನ್ನ ನಂಬಿಕೆಗಳ ಮಧ್ಯೆ ಸರಿದು ಹೋದ ಚಂದ್ರ !

Karnataka news people welcome lunar eclipse eating samosa at Bengaluru

Lunar Eclipse: ನಭೋಮಂಡಲದ ವಿಸ್ಮಯಗಳಲ್ಲಿ ಒಂದಾದ ಚಂದ್ರಗ್ರಹಣದ (Lunar Eclipse) ವಿಸ್ಮಯವನ್ನು ಒಂದೊಂದು ಮನಸ್ಸುಗಳು ಒಂದೊಂದು ರೀತಿಯಲ್ಲಿ ವಿಶ್ಲೇಷಿಸುತ್ತಿವೆ. ಇಂದು ಆಚರಣೆಗಳನ್ನು ನಂಬುವವರು ಅದನ್ನು ದೈವಿಕ ಸ್ವರೂಪ ಎಂದುಕೊಂಡು ಪೂಜೆ ಪುರಸ್ಕಾರ ಶುದ್ದಕಾರ್ಯ ಮಾಡಿದರೆ ಹಲವು ಪ್ರಗತಿಪರರು ಆಹಾರ ಸೇವನೆ ಮಾಡುತ್ತಾ ಚಂದ್ರಗ್ರಹಣ ವೀಕ್ಷಣೆ ಮಾಡಿದ್ದಾರೆ.

ʻಖಗೋಳ ವಿಸ್ಮಯ ಚಂದ್ರಗ್ರಹಣ ಸಂಭ್ರಮಿಸೋಣ, ಮೂಡನಂಭಿಕೆ ಅಳಿಸೋಣ, ಮಾನವೀಯತೆ ಉಳಿಸೋಣ, ವಿಜ್ಞಾನದೆಡೆಗೆ ನಮ್ಮ ನಡಿಗೆʼ ಎಂಬ ಘೋಷವಾಕ್ಯದೊಂದಿಗೆ ಸಮೋಸ (Samosa), ಬಾಳೆಹಣ್ಣು ತಿನ್ನುತ್ತಾ 2023ರ ಚಂದ್ರಗ್ರಹಣಕ್ಕೆ ಪ್ರಗತಿಪರರು ನಿನ್ನೆ ಮಧ್ಯರಾತ್ರಿ ಸ್ವಾಗತ ಕೋರಿದ್ದಾರೆ.

ಬೆಂಗಳೂರಿನ ಚಾಲುಕ್ಯ ವೃತ್ತದ ಬಸವಣ್ಣ ಪ್ರತಿಮೆ (Basavanna Statue) ಮುಂದೆ ಜಮಾಯಿಸಿದ್ದ ಹಲವು ಪ್ರಗತಿಪರರು ʻಗ್ರಹಣದ ಸಮಯದಲ್ಲಿ ಊಟ ಮಾಡಬಾರದುʼ ಅನ್ನೋ ಜೋತಿಷಿಗಳ ನಂಬಿಕೆಗೆ ಸೆಡ್ಡು ಹೊಡೆದು ಆಹಾರ ಸೇವನೆ ಮಾಡಿದರು. ಗ್ರಹಣದ ಸಮಯದಲ್ಲಿ ಊಟ ಮಾಡಬಾರದು ಅನ್ನೋದು ಮೌಢ್ಯ, ಅದನ್ನ ವಿರೋಧಿಸಿ ಚಂದ್ರಗ್ರಹಣ ಸಂಭ್ರಮಿಸೋಣ ಎಂದು ಪ್ರಗತಿಪರರು ಕರೆ ನೀಡಿದ್ದಾರೆ. ನಟ ಚೇತನ್ ದಂಪತಿ ಕೂಡ ಈ ‘ಸಂಭ್ರಮ’ ದಲ್ಲಿ ಭಾಗಿಯಾಗಿದ್ದಾರೆ. ಜತೆಗೆ, ಮೂಢನಂಬಿಕೆ ವಿರೋಧಿ ಒಕ್ಕೂಟದಿಂದ ‘ವಿಜ್ಞಾನದೆಡೆಗೆ ನಮ್ಮ ನಡಿಗೆ’ ಹೇಳಿಕೆಯೊಂದಿಗೆ ಗ್ರಹಣದ ಬಗ್ಗೆ ಮೌಢ್ಯ ಬೇಡವೆಂದು ನೆಹರೂ ತಾರಾಲಯದಲ್ಲಿ (Nehru Planetarium) ಜಾಗೃತಿ ಮೂಡಿಸುವ ಪ್ರಯತ್ನವನ್ನು ಸಹಾ ಮಾಡಿತು.

ಆದರೆ ಮತ್ತೊಂದೆಡೆ ಇಂದು ಗ್ರಹಣದ ನಿಮಿತ್ತ ಬಹುತೇಕ ದೇಗುಲಗಳನ್ನು ಓಪನ್ ಮಾಡಿ ಶುದ್ಧೀಕರಣ ಕಾರ್ಯ ಮಾಡಲಾಗಿದೆ. ಬೆಂಗಳೂರಿನ ಬನಶಂಕರಿ ದೇವಾಲಯ ಒಂದು ಪೂಜೆ ನಂತರ ಶುದ್ಧೀಕರಣ ಮಾಡಿಲಾಗಿದೆ ಅಲ್ಲದೆ ಗರ್ಭಗುಡಿಗೆ ಪೂಜೆ ಸಲ್ಲಿಸಿ ದೇಗುಲವನ್ನು ಓಪನ್ ಮಾಡಲಾಗಿದೆ ಗ್ರಹಣದ ಸಂದರ್ಭ ಬನಶಂಕರಿ ದೇವಿಯ ದೇವಸ್ಥಾನದ ಸುತ್ತಲೂ ಧರ್ಬೆ ದಿಗ್ಬಂದನ ಹಾಕಲಾಗಿತ್ತು.

ಅಲ್ಲದೆ ಬೆಂಗಳೂರಿನ ಕಾಡು ಮಲ್ಲೇಶ್ವರ (Bangalore Kadu Malleshwara) ದೇವಾಲಯದ ಬಾಗಿಲು ಕೂಡಾ ತೆರೆದಿದ್ದು ಸಂಪೂರ್ಣ ದೇವಾಲಯದ ಸಂಪೂರ್ಣ ಆವರಣವನ್ನು ಶುದ್ಧೀಕರಣ ಮಾಡಲಾಗಿದೆ. ದರ್ಬೆ ಬಂಧನವನ್ನು ಮುಕ್ತಿ ಮಾಡಿ ಶುದ್ಧ ಕಾರ್ಯ ನಡೆಸಿದ ನಂತರ ಇದೀಗ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗ್ರಹಣ ಮೋಕ್ಷದ ನಂತರ ಶುದ್ಧೀಕರಣ ಪೂಜೆ ಇತ್ಯಾದಿ ನೆರವೇರಿಸಲಾಗಿದೆ. ಹಲವು ಕಡೆಗಳಲ್ಲಿ ಪೂಜೆಯ ನಂತರ ಪಂಚಾಮೃತ ಅಭಿಷೇಕ ನಡೆಸಿ ಪ್ರಸಾದ ವಿತರಿಸಲಾಗಿದೆ. ಮಂಡ್ಯ, ಮೈಸೂರು, ಕಾರವಾರ, ಉಡುಪಿ ದೇವಸ್ಥಾನಗಳಲ್ಲಿ ಕೂಡ ಶುಚಿ ಕಾರ್ಯ ನಡೆದಿದ್ದು ನಂತರವೇ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಇಂದು ಚಂದ್ರಗ್ರಹಣ: ಗ್ರಹಣದ ಸಮಯದಲ್ಲಿ ಈ ಹೆಸರು ಪಠಿಸಿದರೆ ಯಾವ ದೋಷವೂ ತಾಗಲ್ಲ – ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ ?

Leave A Reply

Your email address will not be published.