Actor Jaggesh: ಹುಲಿ ಬಾಯಿಯಿಂದ ತಪ್ಪಿಸಿಕೊಂಡ ನಟ ಜಗ್ಗೇಶ್‌! ನವರಸ ನಾಯಕನಿಗೆ ಈ ಬಗ್ಗೆ ಕೋರ್ಟ್​ ಹೇಳಿದ್ದೇನು?

High court issued stay on forest department notice to actor Jaggesh matter of tiger nails

ಹುಲಿ ಉಗುರು ಪ್ರಕರಣದಲ್ಲಿ ಬಿಗ್​ ಬಾಸ್​ ವರ್ತೂರ್​ ಸಂತೋಷ್​ 5 ದಿನಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ಬಂಧನವಾಗಿದ್ದರು. ಇದೀಗ ಜಾಮೀನು ಸಿಕ್ಕಿ ಹೊರಗೆ ಕೂಡ ಬಂದಿದ್ದಾರೆ. ಇದರ ಬೆನ್ನಲ್ಲೇ ನಟ ದರ್ಶನ್​, ಜಗ್ಗೇಶ್​ ಮತ್ತು ನಿಖಿಲ್​ ಕುಮಾರಸ್ವಾಮಿಯ ಹೆಸರುಗಳು ಕೇಳಿ ಬಂದಿತ್ತು. ಹುಲಿ ಉಗುರು ಕಂಟಕದಿಂದ ಸದ್ಯಕ್ಕೆ ನವರಸನಾಯಕ ಪಾರಾಗಿದ್ದಾರಂತೆ! ಇದರ ಅಪ್ಡೇಟ್​ ಇಲ್ಲಿದೆ ನೋಡಿ.

ಹುಲಿ ಉಗುರು ಹೊಂದಿದ್ದ ಆರೋಪಕ್ಕೆ ಸಿಲುಕಿದ್ದ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್​ ಅವರಿಗೆ ಬಿಗ್​​ ರಿಲೀಫ್ ಸಿಕ್ಕಿದೆಯಂತೆ. ಜಗ್ಗೇಶ್ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ರು. ಈ ಪ್ರಕರಣದಲ್ಲಿ ಜಗ್ಗೇಶ್ ವಿರುದ್ಧದ ಕ್ರಮ ಕಾನೂನು ಬಾಹಿರವೆಂದು ವಾದಿಸಿದ್ರು. ವಾದ-ಪ್ರತಿವಾದ ಕೇಳಿದ ಬಳಿಕ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಜಗ್ಗೇಶ್​ ಪರ ಆದೇಶ ನೀಡಲಾಗಿದೆ.

ಅರಣ್ಯ ಇಲಾಖೆ ಕ್ರಮವನ್ನು ಜಗ್ಗೇಶ್ ಪ್ರಶ್ನೆ ಮಾಡಿದ್ದರು. ಅರಣ್ಯಾಧಿಕಾರಿಗಳು ನೀಡಿದ ನೋಟಿಸ್ ರದ್ದು ಮಾಡುವಂತೆ ಜಗ್ಗೇಶ್​ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಉತ್ತರಿಸುವ ಮೊದಲೇ 14 ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮನೆಯಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ಸಂದರ್ಶನದಲ್ಲಿ ಹೇಳಿದ ಮಾತನ್ನು ಆಧರಿಸಿ ತೇಜೋವಧೆ ಮಾಡಲಾಗಿದೆ ಎಂದು ಜಗ್ಗೇಶ್​ ಅರ್ಜಿ ಮೂಲಕ ತಿಳಿಸಿದ್ದಾರೆ.

ನಟ ದರ್ಶನ್​, ರಾಕ್​ ಲೈನ್ ವೆಂಕಟೇಶ್​ ಬಳಿ ಕೂಡ ಹುಲಿ ಉಗುರಿನ ಲಾಕೆಟ್​ ಇದೆ. ಹುಲಿ ಚರ್ಮದ ಮೇಲೆ ವಿನಯ್ ಗುರೂಜಿ ಕುಳಿತುಕೊಳ್ತಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಅಷ್ಟೇ ಅಲ್ಲದೇ ಚಾಲೆಂಜಿಂಗ್ ಸ್ಟಾರ್​ ದರ್ಶನ್​ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ಒಟ್ಟಿನಲ್ಲಿ ನವರಸ ನಾಯಕ ಅಂತೂ ಪಾರಾಗಿದ್ದಾರೆ ಅನ್ನುವ ಬಿಗ್​ ಅಪ್ಡೇಟ್​ ಸಿಕ್ಕಿದೆ ಅಷ್ಟೇ.

Leave A Reply

Your email address will not be published.