Rain forecast 2023: ನಾಳೆಯಿಂದ ಮೂರು ದಿನಗಳ‌ ಕಾಲ ವರುಣನ ಅಬ್ಬರ !! ಯಾವೆಲ್ಲಾ ಪ್ರದೇಶದ ಜನರು ಅಲರ್ಟ್ ಆಗಿರಬೇಕು?

Weather forecast 2023 heavy rain from November 2nd in these places latest news

Rain forecast 2023: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹವಮಾನ ಯಾವಾಗ ಹೇಗೆ ಬದಲಾಗುತ್ತದೆ ಎಂದು ಹೇಳಲು ಅಸಾಧ್ಯವಾಗಿದೆ. ಬೇಸಿಗೆ ಕಾಲದಲ್ಲೂ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಹಾಗೆ ಚಳಿಗಾಲದಲ್ಲಿ ಬಿಸಿಲು ಬರುವ ಸಾಧ್ಯತೆಯೂ ಹೆಚ್ಚಿದೆ. ಇದೀಗ ಚಳಿಗಾಲದಲ್ಲಿ ಒಂದಷ್ಟು ಕಡೆ ನಾಳೆ ಮಳೆ ಹಾಕುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ(Rain forecast 2023) ತಿಳಿಸಿದೆ. ಇದರ ಕಂಪ್ಲಿಟ್ ಡೀಟೇಲ್ಸ್ ಎಲ್ಲಿದೆ ನೋಡಿ

ನವೆಂಬರ್‌ ತಿಂಗಳಿನಲ್ಲಿ ಸುರಿಯುವ ಸಾಮಾನ್ಯ ಮಳೆಗಿಂತ ಹೆಚ್ಚಿನ ಮಳೆ ಬರುವ ಸಾಧ್ಯತೆ ಇದೆ ಎಂದು ಎಂದು ಐಎಂಡಿ ಹೇಳಿದೆ. ಆದರೆ, ಪ್ರಸ್ತುತ ದೇಶದ ಬಹುತೇಕ ರಾಜ್ಯಗಳಲ್ಲಿ ಒಣಹವೆ ಮುಂದುವರಿದಿದೆ. ಅದೇ ಸಮಯದಲ್ಲಿ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆಗಾಲವು ಮುಂದುವರಿಯಲಿದೆ.

ಇಂದಿನ ಹವಾಮಾನದ ಕುರಿತು ಹೇಳೋದಾದ್ರೆ ಕರಾವಳಿ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹಗುರದಿಂದ ಸಾಧಾರಣ ಮಳೆಯ ಜೊತೆಗೆ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಇಂದು ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಪ್ರದೇಶ ಮತ್ತು ಲಕ್ಷದ್ವೀಪದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಆಂಧ್ರಪ್ರದೇಶದಲ್ಲಿ ಲಘುವಾಗಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ದೆಹಲಿ ಮತ್ತು ಎನ್‌ಸಿಆರ್‌ನ ವಾಯು ಗುಣಮಟ್ಟ ಸೂಚ್ಯಂಕವು ಅತ್ಯಂತ ಕಳಪೆ ವರ್ಗದಲ್ಲಿದೆ. ಈ ಹವಾಮಾನವನ್ನು ಪರಿಗಣಿಸಿಕೊಂಡು ನಾವು ನಮ್ಮ ಜೀವನ ಶೈಲಿಯನ್ನ ಪಾಲನೆ ಮಾಡಬೇಕಾಗಿದೆ.

 

Leave A Reply

Your email address will not be published.