Lulu Mall: ಲುಲು ಮಾಲ್ ನ ಪ್ರಕರಣದ ಕೈ ಕೊನೆಗೂ ಸಿಕ್ತು! ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್

a man misbehaved with women at Lulu mall

ಲುಲು ಮಾಲ್ ನಲ್ಲಿ ಮಹಿಳೆಯರ ಮೇಲೆ ಅನುಚಿತ ವರ್ತನೆ ಎಸಗಿದ ವ್ಯಕ್ತಿ ಕೊನೆಗೂ ಸಿಕ್ಕಿ ಹಾಕೊಂಡೆ ಬಿಟ್ರು. ಮಹಿಳೆಯರೊಂದಿಗೆ ಕುಚ್ ಕುಚ್ ಮಾಡಲು ಹೋದ ಕೆಟ್ಟ ವ್ಯಕ್ತಿಯನ್ನು ಪೊಲೀಸರು ಕೊನೆಗೂ ಹಿಡಿದೆ ಬಿಟ್ಟರು. ಮುಂದೇನಾಯ್ತು?

ಈತ‌ನ ಹೆಸರು ಅಶ್ವತ್ ನಾರಾಯಣ. ಬಸವೇಶ್ವರನಗರ ನಿವಾಸಿ. ಪ್ರತಿಷ್ಠಿತ ಮಠದ ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದ ಈತ 8 ತಿಂಗಳ ಹಿಂದೆಯಷ್ಟೇ ನಿವೃತ್ತಿ ಆಗಿದ್ದ. 3 ದಿನಗಳ‌ ಹಿಂದೆ ಲುಲು ಮಾರ್ಟ್‌ಗೆ ಬಂದವನು ಮಹಿಳೆಯರಿಗೆ ಗುದ್ದಿ ಗುದ್ದಿ ಹೋಗುತ್ತಿದ್ದ. ಯುವಕನೊಬ್ಬ ವಿಡಿಯೋ ಮಾಡಿದ ಮೇಲೆ ಸಖತ್ ವೈರಲ್ ಆಗಿತ್ತು. ವಿಡಿಯೋದ ಸಹಾಯದಿಂದಲೇ ಪೊಲೀಸರು ಆತನನ್ನು ಪತ್ತೆ ಹಚ್ಚಿದ್ದಾರೆ.

ಲೂಲು ಮಾಲ್ ನಲ್ಲಿ ಮಹಿಳೆಯರ ಮೇಲೆ ಕೆಟ್ಟದಾಗಿ ನಡೆದುಕೊಂಡ ವ್ಯಕ್ತಿ ಸಿಕ್ಕಿದ್ದಾರೆ. ಆರೋಪಿ ಅಶ್ವಥ್ ನಾರಾಯಣ್ ಎಂದು ತಿಳಿದುಬಂದಿದೆ. ಇವರು ಕೋರ್ಟ್ ಮುಂದೆ ಸರೆಂಡರ್ ಕೂಡ ಆಗಿದ್ದಾರೆ.

ಎಸಿಎಂಎಂ ೨ ರ ನ್ಯಾಯಾಧೀಶರ ಮುಂದೆ ಸರೆಂಡರ್ ಆಗಿದ್ದಾರೆ ಆರೋಪಿ. ಆರೋಪಿ ಅಶ್ವಥ್ ನಾರಾಯಣ್ ಗೆ ಜಾಮೀನು ಮಂಜೂರು ಮಾಡಿದ್ದಾರೆ ನ್ಯಾಯಾಧೀಶರು. ಹೌದು, ಐಪಿಸಿ ಸೆಕ್ಷನ್ 354 ಎ , 294, 509 ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು.

ತಲೆಮರೆಸಿಕೊಂಡಿದ್ದ ಅಶ್ಚಥ್ ನಾರಾಯಣ್ ಗಾಗಿ ಹುಡುಕಾಟ ನಡೆಸ್ತಿದ್ದ ಪೊಲೀಸ್ರು. ಇಂದು ನ್ಯಾಯಾಧೀಶರ ಮುಂದೆ ಹಾಜರಾಗಿ ಜಾಮೀನು ಪಡೆದಿದ್ದಾರೆ ಆರೋಪಿ ಅಶ್ಚಥ್ ನಾರಾಯಣ್. ಆರೋಪಿ ಪರ ಹಿರಿಯ ವಕೀಲ ಕೆ ಎನ್ ಶಶಿಧರ್ ವಾದ ಮಂಡಿಸಿದ್ರು.

Leave A Reply

Your email address will not be published.