Bigg Boss Kannada: ಮೈಕಲ್​ ಇಶಾನಿ ಪ್ರೇಮ ಕಥೆಗೆ ಬಿತ್ತು ಬ್ರೇಕ್​! ಬಿಗ್​ ಬಾಸ್​ ಮನೆಯಲ್ಲಿ ಲವ್​ ಬ್ರೇಕ್​ ಅಪ್​

Entertainment news Bigg Boss Kannada season 10 michale and Ishani love breakup

Bigg Boss Kannada: ಬಿಗ್​ ಬಾಸ್​ ಸೀಸನ್​ 10ರಲ್ಲಿ (Bigg Boss Kannada) ಈ ವಾರ ಯಾರು ಎಲಿಮಿನೇಟ್​ ಆಗ್ತಾರೆ ಅಂತ ಕಾದು ನೋಡಬೇಕಾಗಿದೆ. ಅದರ ನಡುವೆ ಒಂದು ಪ್ರೇಮ ಕಥೆ ಎಂಡ್​ ಆಗಿದೆ. ಹೌದು, ಮೈಕಲ್​ ಅಜಯ್​ ಮತ್ತು ಇಶಾನಿ ಮನಸಾರೆ ತುಂಬಾ ಪ್ರೀತಿ ಮಾಡ್ತಾ ಇದ್ದರು. ಇದೀಗ ಇವರ ಲವ್​ ಎಂಡ್​ ಆದಂತಿದೆ. ಯಾಕೆ? ಏನು? ಎಂಬುದಕ್ಕೆ ಇಲ್ಲಿದೆ ನೋಡಿ ಮಾಹಿತಿ.

ಅಡುಗೆ ಮನೆಯಲ್ಲಿ ಕಾರ್ತಿಕ್​ ಮತ್ತು ಇಶಾನಿ ಮಧ್ಯದಲ್ಲಿ ವಾದ ವಿವಾದಗಳು ನಡೆಯುತ್ತದೆ. ಆಗ ಮೈಕಲ್​ ಇಶಾನಿ ಪಕ್ಕದಲ್ಲಿ ಇದ್ದೂ ಕೂಡ ಸಪೋರ್ಟ್​ ಮಾಡಿಲ್ಲ ಎಂಬುದಾಗಿ ಗಲಾಟೆ ಆರಂಭವಾಗುತ್ತೆ. ಮತ್ತೆ ಬೆಡ್​ ರೂಂನಲ್ಲಿ ಇಶಾನಿ ಮತ್ತು ಮೈಕಲ್ ಗೆ ಜಗಳ ಆಗುತ್ತೆ. ಅಲ್ಲಿಂದ ಡೈರೆಕ್ಟ್​ ಆಗಿ ಇಶಾನಿ ಅತ್ತುಕೊಂಡು ಬಾತ್​ರೂಂ ಗೆ ಓಡಿಹೋಗ್ತಾರೆ.

Bigg Boss Kannada

ಅಲ್ಲಿ ನಮ್ರತಾ, ವಿನಯ್​, ಸ್ನೇಹಿತ್​ ಬರ್ತಾರೆ ಇಶಾನಿನ ಸಮಾಧಾನ ಮಾಡಲು. ಆದರೆ ಇಶಾನಿಗೆ ಸೈಕೋ ಅಂತ ಮೈಕಲ್​ ಬೈತಾನೆ. ಇದರಿಂದ ಮತ್ತೆ ಇಶಾನಿ ಕೋಪಗೊಂಡು ನನಗೆ ಯಾರು ಸೈಕೋ ಅಂತಾರೋ ಅಂತ ಹುಡುಗರು ನಂಗೆ ಬೇಡ, I am donec bro ಅಂತ ಹೇಳ್ತಾಳೆ.

ಅಂದರೆ ಸಧ್ಯಕ್ಕೆ ಬ್ರೇಕ್​ ಅಪ್​ ಆಗಿದೆ. ಯಾವಾಗ ಸರಿ ಆಗುತ್ತೆ ಈ ಲವ್​? ಅಥವಾ ಕೋಪ ಮಾಡಿಕೊಂಡೇ ಇರ್ತಾರಾ ಎಂಬುದೇ ದೊಡ್ಡ ಪ್ರಶ್ನೆ ಆಗಿ ಉಳಿದಿದೆ.

Leave A Reply

Your email address will not be published.