Hyderabad University polls: ಮುಸ್ಲಿಂ ವಿದ್ಯಾರ್ಥಿನಿಯನ್ನು ಕಣಕ್ಕೆ ಇಳಿಸಿದ ABVP, ಅಚ್ಚರಿ ಮೂಡಿಸಿದ ಸಂಘ ಪರಿವಾರದ ನಡೆ !

Hyderabad news ABVP puts up Muslim girl in Hyderabad University polls

Hyderabad University polls: ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಇದೇ ಮೊದಲ ಬಾರಿಗೆ ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣೆಗೆ (Hyderabad University polls) ಮುಸ್ಲಿಂ ವಿದ್ಯಾರ್ಥಿನಿಯನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಅಚ್ಚರಿ ಮೂಡಿಸಿದೆ.

ಸಂಘ ಪರಿವಾರದ ಮೂಲದ ಎಬಿವಿಪಿ ಈ ರೀತಿ ಮುಸ್ಲಿಂ ಅಭ್ಯರ್ಥಿ ಶೇಕ್ ಆಯೇಶಾ ಎಂಬ ವಿದ್ಯಾರ್ಥಿನಿಯು ನ.9 ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಸಿದೆ. ಎಸ್ಎಫ್ಐ ಎಎಸ್-ಟಿಎಸ್ಎಫ್ ಮೈತ್ರಿಕೂಟದ ಅಭ್ಯರ್ಥಿ ಮೊಹಮ್ಮದ್ ಅತೀಕ್ ಅವರ ಪ್ರತಿಸ್ಪರ್ಧಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಎಬಿವಿಪಿಯ ಶೇಕ್ ಆಯೇಷಾ ರವರು ಸ್ಪರ್ಧಿಸಲಿದ್ದಾರೆ. ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಇದೇ ಮೊದಲ ಬಾರಿಗೆ ಅಲ್ಪಸಂಖ್ಯಾತ ಸಮುದಾಯದ ಇಬ್ಬರು ವಿದ್ಯಾರ್ಥಿಗಳು ಅತೀದೊಡ್ಡ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಮತ್ತೊಂದೆಡೆ ಎಬಿವಿಪಿ ಮುಸ್ಲಿಂ ಯುವತಿಯನ್ನು ಕಣಕ್ಕೆ ಇಳಿಸಿರುವುದು ಗಮನ ಸೆಳೆದಿದೆ. ಆಕೆ ಹಲವು ವರ್ಷಗಳಿಂದ ಎಬಿವಿಪಿ ಯಲ್ಲಿ ಅತ್ಯಂತ ಸಕ್ರಿಯ ಸದಸ್ಯಳು ಆಕಾರಣದಿಂದ ಆಕೆಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಘ ನಿಷ್ಠ ಪರಿವಾರದ ಮೂಲಕ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗಿದೆ. ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಈಕೆ ಈಗ PHD ವಿದ್ಯಾರ್ಥಿನಿಯಾಗಿದ್ದಾಳೆ.

ಇದನ್ನೂ ಓದಿ:  ಏನೇ ಕದ್ದರೂ ಈ ವಸ್ತುಗಳನ್ನು ಮಾತ್ರ ಕಳ್ಳರು ಕದಿಯೋದಿಲ್ಲ, ಕಾರಣ ಸಖತ್ತಾಗಿದೆ!

Leave A Reply

Your email address will not be published.