Singer Darlyn Morais Dies: ಜೇಡವೊಂದು ಕಚ್ಚಿ ಖ್ಯಾತ ಗಾಯಕ ಸಾವು

Brazilian Singer Darlyn Morais Dies After Being Bitten By A Spider

Singer Darlyn Morais Dies: ಅಪಾರ ಅಭಿಮಾನಿಗಳನ್ನು ಹೊಂದಿದ್ದ ಖ್ಯಾತ ಗಾಯಕನೋರ್ವ ಜೇಡ ಕಚ್ಚಿಸಿಕೊಂಡು ಸಾವನ್ನಪ್ಪಿದ್ದಾರೆ. ಬ್ರೆಜಿಲಿಯನ್ (Brazilian) ನ ಡಾರ್ಲಿನ್ ಮೊರೈಸ್ (Darlene Morais) ಎಂಬ ಗಾಯಕನಿಗೆ ಕೇವಲ 28 ವರ್ಷ ವಯಸ್ಸಾಗಿತ್ತು. ಅತೀ ಸಣ್ಣ ವಯಸ್ಸಿನಲ್ಲೇ ಸಂಗೀತ ಕ್ಷೇತ್ರಕ್ಕೆ ಧುಮುಕಿ, ಸಾಧನೆ ಮಾಡಿ, ಇದೀಗ ವಯಸ್ಸಲ್ಲದ ವಯಸ್ಸಿನಲ್ಲಿ ಮೃತ್ಯು ಹೊಂದಿರುವುದು(Singer Darlyn Morais Dies)  ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿದೆ.

ಅಂದು, ಜೇಡ ಕಚ್ಚಿದ ದಿನವೇ ಗಾಯಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತ, ಅಲ್ಲಿ ಆತ ಚಿಕಿತ್ಸೆ ಕೂಡ ಪಡೆದಿದ್ದರು. ಆದರೆ ಮನೆಗೆ ಬಂದ ಬಳಿಕ ತೀವ್ರ ಆಯಾಸ ಉಂಟಾಗಿತ್ತು. ಆದರೆ ದಿನಗಳು ಕಳೆಯುತ್ತಾ ದಿನದಿಂದ ದಿನಕ್ಕೆ ಅವರ ದೇಹದ ಬಣ್ಣ ಕೂಡ ಬದಲಾಗಲಾರಂಭಿಸಿದೆ. ಹಾಗಾಗಿ ಆತನನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯಾವುದೇ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ ಅಪಾರ ಪ್ರಭುತ್ವ ಹೊಂದಿದ್ದ ಡಾರ್ಲಿನ್, ಜಬುಂಬಾ ಸೇರಿದಂತೆ ಹಲವು ವಾದ್ಯಗಳನ್ನು ಅವರು ನುಡಿಸುತ್ತಿದ್ದರು. ವಾದ್ಯ ಮತ್ತು ಹಾಡಿನ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಅಗಲಿದ ನೆಚ್ಚಿನ ಗಾಯಕನಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ ಎಂದು ಅವರ ಪತ್ನಿ ತಿಳಿಸಿದ್ದಾರೆ.

ಇದನ್ನೂ ಓದಿ: ವರ್ತೂರ್ ಸಂತೋಷ್ ಗೆ ಎಂಗೇಜ್ ಮೇಂಟ್ ಫಿಕ್ಸ್ ಆಗಿದೆ, ತನಿಷನ್ನ ಟೀಸ್ ಮಾಡಬೇಡಿ!

Leave A Reply

Your email address will not be published.