Pregnancy tips: ಇಷ್ಟು ಸಲ ಸಂಭೋಗ ಮಾಡಿದ್ರೆ ಮಾತ್ರ ಪ್ರೆಗ್ನೆಂಟ್ ಆಗ್ತಾರೆ, ಪುರುಷರೇ ಇಲ್ಲಿ ಕೇಳಿ!

Lifestyle pregnancy tips how often should you have physical relationship to conceive

Pregnancy tips: ಲೈಂಗಿಕ ಕ್ರಿಯೆಯ ಬಗ್ಗೆ ಎಲ್ಲರಿಗೂ ಅರಿವು ಇರಲೇಬೇಕು. ಅದರಲ್ಲೂ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೂ ಈ ಲೈಂಗಿಕ ಪ್ರಜ್ಞೆ ಇರಲೇಬೇಕು. ಸೆಕ್ಸ್ ಎಜುಕೇಶನ್ ಎಂದೇ ಇದನ್ನ ಪರಿಗಣಿಸಲಾಗುತ್ತದೆ. ಇನ್ನು ಮದುವೆ ಆದ ನಂತರ ಅದೆಷ್ಟೋ ಜನರಿಗೆ ಬಂಜೆತನ ದೊಡ್ಡ ತಲೆ ನೋವಾಗಿರುತ್ತೆ. ಹೊರಬರಲು ಹರಸಾಹಸನೆ ಪಡುತ್ತಾರೆ. ಹಾಗಾದ್ರೆ ಈ ಸಂಭೋಗವನ್ನ ಎಷ್ಟು ಸಲ ಮಾಡಿದರೆ ಮಹಿಳೆ ಗರ್ಭಿಣಿ ಆಗುತ್ತಾಳೆ ಎಂಬುದನ್ನ ತಿಳಿಯೋಣ(Pregnancy tips). ಇದನ್ನು ಇತ್ತೀಚಿಗಷ್ಟೇ ಹೊರಬಂದ ಸರ್ವೆ ತಿಳಿಸಿದೆ.

ಅಧ್ಯಯನವೊಂದು 1,194 ಪೋಷಕರ ಮೇಲೆ ಸಮೀಕ್ಷೆ ನಡೆಸಿದೆ. ಸಾಕಷ್ಟು ದಂಪತಿ ಪೋಷಕರಾಗಲು ಪ್ರಯತ್ನಿಸುವಾಗ ತಿಂಗಳಿಗೆ 13 ಬಾರಿ ಲೈಂಗಿಕತೆಯನ್ನು ಹೊಂದಿದ್ದರು ಎಂದು ಉತ್ತರಿಸಿದ್ದಾರೆ. ಎಷ್ಟೋ ಬಾರಿ ಸಂಭೋಗ ಮಾಡುವುದು ಮೋಜಿನ ಸಂಗತಿಯೆನಿಸಿದರೂ, ಹೇಗಾದರೂ ಪಾಸಿಟಿವ್ ರಿಪೋರ್ಟ್ ಪಡೆಯಲು ಆಗದೇ ಇರುವುದಕ್ಕೆ ಆತಂಕ ಮತ್ತು ಒತ್ತಡ ಕಾರಣವಾಗಿದೆ.

ಈ ಅಧ್ಯಯನದಲ್ಲಿ ಭಾಗವಹಿಸಿದವರು ಪೋಷಕರಾಗಲು ಪ್ರಯತ್ನಿಸುವಾಗ ಲೈಂಗಿಕತೆಯನ್ನು ಹೊಂದುವುದು ಒಂದು ಕೆಲಸವೆಂಬಂತೆ ಆಗಿತ್ತು ಎಂದು ಅಭಿಪ್ರಾಯ ತಿಳಿಸಿದ್ದಾರೆ. 43 ರಷ್ಟು ಮಂದಿ ತಾವು ಗರ್ಭಿಣಿಯಾಗಲು ಸಾಧ್ಯವಿಲ್ಲ ಮತ್ತು ಮಗುವಾಗುವುದಿಲ್ಲ ಎಂಬ ಭಯವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಒಂದು ಹಂತದಲ್ಲಿ ಗರ್ಭಿಣಿಯಾಗುವುದು ಕಠಿಣ ಕೆಲಸ ಮತ್ತು ಒತ್ತಡದಂತೆ ತೋರುತ್ತದೆ ಎಂದಿದ್ದಾರೆ.

ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಲೈಂಗಿಕ ಕ್ರಿಯೆಗೆ ಒಳಗಾಗಬಾರದು. ನೀವು ಹಲವಾರು ಬಾರಿ ದೈಹಿಕ ಸಂಪರ್ಕ ಹೊಂದಿದರೆ ನೀವು ಪೋಷಕರಾಗಬಹುದು ಎಂಬುದು ಸುಳ್ಳು ಎಂದು ತಜ್ಞರೆ ಹೇಳಿದ್ದಾರೆ.

ವಾಸ್ತವವಾಗಿ ಹೇಳುವುದಾದರೆ ಆಗಾಗ ಸಂಭೋಗದಲ್ಲಿ ತೊಡಗುವುದರಿಂದ ಆರೋಗ್ಯಕರ ವೀರ್ಯದ ಸಂಖ್ಯೆ ಕಡಿಮೆ ಆಗುತ್ತದೆ. ಗರ್ಭಧರಿಸಲು ಪ್ರಯತ್ನಿಸುತ್ತಿರುವ ದಂಪತಿಗಳು ಪ್ರತಿ ಎರಡು ದಿನಗಳಿಗೊಮ್ಮೆ ಮಿಲನ ಹೊಂದುವುದರಿಂದ ಪ್ರಯೋಜನ ಪಡೆಯಬಹುದು. ಇದನ್ನು ಪ್ರಯತ್ನಿಸಿದ ದಂಪತಿಗಳು ಗರ್ಭಧರಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಅಂಡೋತ್ಪತ್ತಿಯ ವಿಶಿಷ್ಟ ಅವಧಿ 28 ದಿನಗಳು. ಅಂದರೆ, ಋತುಚಕ್ರದ ಅಂತ್ಯದ ನಂತರ 14 ನೇ ದಿನದಂದು ಇದು ಸಂಭವಿಸುತ್ತದೆ. ಋತುಚಕ್ರದ ಮೊದಲು ಮಧ್ಯದ ದಿನಗಳಲ್ಲಿ ಇದು ಬೆಳವಣಿಗೆಯಾಗುತ್ತದೆ. ಅಂದರೆ ಮುಟ್ಟಿನ ನಾಲ್ಕು ದಿನಗಳಿಗೂ ಮುನ್ನ ಅಥವಾ ನಾಲ್ಕು ದಿನಗಳ ಒಳಗೆ ಇದು ಸಂಭವಿಸುತ್ತದೆ. ಈ ಅಂಡೋತ್ಪತ್ತಿ ಸಮಯದಲ್ಲಿ ಮೊಟ್ಟೆಯು ಬಿಡುಗಡೆಯಾಗುತ್ತದೆ.

ಅವರು ಫಾಲೋಪಿಯನ್ ಟ್ಯೂಬ್ಗೆ ಹೋಗಿ ಸಿಲುಕಿಕೊಳ್ಳುತ್ತವೆ. ಈ ಸಮಯದಲ್ಲಿ ವೀರ್ಯಗಳು ಪ್ರಯಾಣಿಸುತ್ತವೆ ಮತ್ತು ಅವು ಪ್ರವೇಶಿಸಿದಾಗ ಮೊಟ್ಟೆಯತ್ತ ಆಕರ್ಷಿತವಾಗಬಹುದು. ನಂತರ ಅದು ಫಲವತ್ತಾದ ಮೊಟ್ಟೆಯಾಗಿ ಬೆಳೆಯುತ್ತದೆ ಮತ್ತು ಮಹಿಳೆಯರು ಗರ್ಭಿಣಿಯಾಗುವ ಸಾಧ್ಯತೆಗಳಿವೆ. ಹಾದುಹೋಗುವ ವೀರ್ಯಗಳು ಐದು ದಿನಗಳವರೆಗೆ ಬದುಕಬಲ್ಲವು.

ಎಲ್ಲಾ ಕಾರಣದಿಂದ ಸಂಭೋಗವನ್ನು ಎರಡು ದಿನಕ್ಕೊಮ್ಮೆ ಮಾಡಿದರೆ ಮಹಿಳೆ ಗರ್ಭಿಣಿಯಾಗುತ್ತಾಳೆ. ರೀಸನ್ಗಳನ್ನ ತಜ್ಞರೇ ಕೊಟ್ಟಿರುವುದಾಗಿ ನಾವು ನಿಮಗೆ ತಿಳಿಸುತ್ತಿದ್ದೇವೆ.

ಇದನ್ನೂ ಓದಿ: ಆಧಾರ್ ಲಿಂಕ್ ಮಾಡಿ ಬರುವಾಗ ಆದ ಆಘಾತ: ಆಟೋ – ಟ್ಯಾಂಕರ್ ಡಿಕ್ಕಿಯಲ್ಲಿ 3 ತಿಂಗಳ ಮಗು ಸೇರಿ ಒಂದೇ ಕುಟುಂಬದ 6 ಸಾವು !

Leave A Reply

Your email address will not be published.