Bigg Boss 10: ಬಿಗ್ ಬಾಸ್ ನಲ್ಲಿ ಈ ವಾರದ ಕಳಪೆ ಇಬ್ಬರು, ಸೆರೆಮನೆಯಲ್ಲಿ ಡಬಲ್ ಜೋರು ಜಗಳ!

Bigg Boss 10 This week's poor performance in Bigg Boss went to two

ಬಿಗ್ ಬಾಸ್ ಆರಂಭವಾಗಿ ಒಂದು ತಿಂಗಳಗಳೇ ಕಳೆದು ಹೋಯಿತು. ಈಗಾಗಲೇ ಮನೆಯಿಂದ 3 ಜನ ಎಲಿಮಿನೇಟ್ ಕೂಡ ಆಗಿದ್ದಾರೆ. ನಾಳೆಯ ಕಿಚ್ಚನ ಪಂಚಾಯಿತಿಯಲ್ಲಿ ಏನು ನಡೆಯಲಿದೆ ಎಂಬುದು ಕಾದು ನೋಡಬೇಕಾಗಿದೆ. ಪ್ರತಿವಾರ ಕಳಪೆ ಎಂಬುದು ಕಾಮನ್. ಒಬ್ಬರಿಗೆ ಹೋಗುವ ಕಳಪೆ ಈ ಬಾರಿ ಇಬ್ಬರಿಗೆ ಹೋಗಿದೆ!

ಹೌದು ಇವರ ಗಂಧದಗುಡಿ ಹಾಗೂ ವಜ್ರಕಾಯ ಎಂಬ ಎರಡು ಗುಂಪುಗಳು ಇತ್ತು. ಇದರಲ್ಲಿ ಗಂಧದ ಗುಡಿ ವಿನ್ ಆಗಿ ಕ್ಯಾಪ್ಟನ್ ಮೈಕಲ್ ಆಗಿದ್ದಾರೆ. ಶುಕ್ರವಾರ ನಡೆಯಲಿರುವ ಕಳಪೆ ಈ ವಾರ ಈಶಾನಿ ಮತ್ತು ನೀತುಗೆ ಹೋಗಿದೆ.

ಹಲವಾರು ಕಾರಣಗಳನ್ನ ಸ್ಪರ್ಧಿಗಳು ನೀಡುತ್ತಾ, ಇಬ್ಬರಿಗೂ ಏಳು ವೋಟುಗಳು ಬಿದ್ದಿದೆ. ಬಿಗ್ ಬಾಸ್ ಇಬ್ಬರಿಗೂ ಕಳಪೆ ಸಮವಸ್ತ್ರವನ್ನ ನೀಡಿ ಜೈಲಿಗೆ ಕಳಿಸಿದ್ದಾರೆ.

ಆದರೆ ಜೈಲಿನಲ್ಲಿ ಇದ್ದಾಗ ಈಶಾನೀ ಮತ್ತು ಮೈಕಲ್ ನಡುವೆ ಜಗಳ ಮೂಡುತ್ತೆ. ನೀನ್ ಇವತ್ತು ರಾತ್ರಿ ಫುಲ್, ಜೇಲಿನ ಹೊರಗೆ ನನ್ನೊಟ್ಟಿಗೆ ಮಾತನಾಡುತ್ತಾ ಇರಬೇಕು ಎಂದು ಈಶಾನ್ಯ ಹೇಳಿದಾಗ ಮೈಕಲ್ ಅದಿಕ್ಕೆ ಪ್ರಾಕ್ಟಿಕಲ್ ಆಗಿ ಇರು ನಾನು ಈಗ ಕ್ಯಾಪ್ಟನ್ ನಮ್ಮನ್ನ 100 ಕ್ಯಾಮರಗಳು ನೋಡುತ್ತಾ ಇದೆ ಅಂತ ಹೇಳ್ತಾನೆ. ಆಗ ಇಶಾನೀ ಬೇಸರಗೊಂಡು ಮೈಕಲ್ ಎಂದು ಹೇಳಿಕೊಂಡು ಅಳ್ತಾಳೆ, ಮಧ್ಯದಲ್ಲಿ ನೀತು ಮೂಕವಿಸ್ಮಿತಳಾಗಿರ್ತಾಳೆ. ಇದು ತುಂಬಾ ಸೀರಿಯಸ್ ಮ್ಯಾಟರ್ ಅಂತ ಕೂಡ ಹೇಳ್ತಾಳೆ.

ಒಟ್ಟಿನಲ್ಲಿ ಈವಾರ ಇಬ್ಬರು ಸೆರೆಮನೆಗೆ ಹೋಗಿದ್ದಾರೆ. ಒಳಗೆ ಇರುವವರು ಹೊರಗೆ ಇದ್ದವರೊಂದಿಗೆ ಜಗಳ ಕೂಡ ಮಾಡಿದ್ದಾರೆ. ಈ ವಾರದ ಕಿಚ್ಚನ ಪಂಚಾಯಿತಿಲಿ ಯಾರಿಗೆ ಕಾದಿದೆ ಕ್ಲಾಸ್ ಎಂದು ಕಾದು ನೋಡಬೇಕಾಗಿದೆ.

Leave A Reply

Your email address will not be published.