Congress Guarantee: ಅತ್ತೆಗೆ 4,000, ಸೊಸೆಗೆ 2,500 ರೂಪಾಯಿ – ಒಟ್ಟು 6 ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್ : ಸಿ.ಎಂ ಸಿದ್ಧರಾಮಯ್ಯ ಭರವಸೆ

Congress Guarantee news Congress announced a total of 6 guarantees

Congress Guarantee: ರಾಷ್ಟ್ರದ ಐದು ರಾಜ್ಯಗಳ ಚುನಾವಣೆಯಲ್ಲಿ ಕರ್ನಾಟಕ ಗ್ಯಾರಂಟಿಗಳು ಸದ್ದು ಮಾಡ್ತಿವೆ. ತೆಲಂಗಾಣದಲ್ಲಿ (Telangana) ಅಧಿಕಾರದ ಬೆಳೆ ಬೆಳೆಯಲು ಗ್ಯಾರಂಟಿಯ ಬೀಜ ಬಿತ್ತಿದೆ ಕಾಂಗ್ರೇಸ್. ಕರ್ನಾಟಕ ಮಾದರಿಯಲ್ಲೇ ಇಲ್ಲೂ ಕೂಡ ಕಾಂಗ್ರೆಸ್ ಪಕ್ಷ (Congress Guarantee) ಗ್ಯಾರಂಟಿಗಳನ್ನು ನೆಚ್ಚಿಕೊಂಡು ಅದರ ಅನುಷ್ಠಾನಕ್ಕೆ ಹೊರಟಿದೆ.
ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಒಟ್ಟು ಆರು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ರೇವಂತ್ ರೆಡ್ಡಿ (Revanth Reddy) ಪರ ನಿನ್ನೆ ಕಾಮಾರೆಡ್ಡಿ ಕ್ಷೇತ್ರದಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸಿದ್ದಾರೆ. ಸಿಎಂ ಕೆಸಿಆರ್ ವಿರುದ್ಧ ರೇವಂತ್ ಗೆಲ್ಲೋದು ಫಿಕ್ಸ್ ಅಂದಿದ್ದಾರೆ.

ಅಧಿಕಾರಕ್ಕೆ ಬಂದ ನೂರು ದಿನದಲ್ಲಿ ಗ್ಯಾರಂಟಿಗಳನ್ನು ಜಾರಿ ಮಾಡಲಾಗುತ್ತೆ ಎಂಬ ಭರವಸೆಯನ್ನು ಗ್ಯಾರಂಟಿಗಳ ಎಕ್ಸ್ಪರ್ಟ್ ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಇಲ್ಲಿನ ಮುಖ್ಯಮಂತ್ರಿ ಕೆಸಿಆರ್ ಕರ್ನಾಟಕಕ್ಕೆ ಬಂದು ನಮ್ಮ ಗ್ಯಾರಂಟಿಗಳ ಜಾರಿಯನ್ನು ನೋಡಲಿ ಎಂದು ಸವಾಲ್ ಹಾಕಿದ್ದಾರೆ.

ಏನು ಕಾಂಗ್ರೆಸ್‍ನ ಹೊಸ ಆರು ಗ್ಯಾರಂಟಿಗಳು ?
ಗ್ಯಾರಂಟಿ 1: ಪ್ರತಿ ತಿಂಗಳು ಅತ್ತೆಗೆ 4,000 ರೂ. – ಸೊಸೆಗೆ 2,500 ರೂ.
ಗ್ಯಾರಂಟಿ 2: ಮಹಾಲಕ್ಷ್ಮಿ ಯೋಜನೆ ಜಾರಿ. ಪ್ರತಿ ಹೆಣ್ಣುಮಗುವಿನ ಖಾತೆಗೆ ಪ್ರತಿ ತಿಂಗಳು 2,500 ರೂ.
ಗ್ಯಾರಂಟಿ 3: ಪಿಂಚಣಿ ಮೊತ್ತ 2,000 ರೂ.ನಿಂದ 4,000 ರೂ.ಗೆ ಹೆಚ್ಚಳ
ಗ್ಯಾರಂಟಿ 4: 500 ರೂಪಾಯಿಗೆ ಒಂದು ಗ್ಯಾಸ್ ಸಿಲಿಂಡರ್
ಗ್ಯಾರಂಟಿ 5: ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ನೆರವು
ಗ್ಯಾರಂಟಿ 6: ಬಡವರಿಗೆ 200 ಯೂನಿಟ್‍ ಉಚಿತ ವಿದ್ಯುತ್

Leave A Reply

Your email address will not be published.