Costliest Fish: ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಮೀನುಗಾರ, ಅಷ್ಟಕ್ಕೂ ಆ ಸಣ್ಣ ಬಲೆಯಲ್ಲಿ 7 ಕೋಟಿ ಸಿಕ್ಕಿ ಬಿದ್ದಿದ್ದು ಹೇಗೆ ?

Costliest Fish A fisherman became a billionaire overnight

Costliest Fish: ಅದೃಷ್ಟ ಯಾವಾಗ, ಹೇಗೆಲ್ಲಾ ಕೈಹಿಡಿಯುತ್ತದೆ ಎಂಬುದಕ್ಕೆ ನಿದರ್ಶನದಂತಿರುವ ಈ ಘಟನೆಯೊಂದು ನಡೆದಿದೆ. ಮೀನುಗಾರನೊಬ್ಬ ರಾತ್ರೋರಾತ್ರಿ ಕೋಟ್ಯಾಧಿಪತಿ ಆಗಿದ್ದಾನೆ. ಅದು ಹೇಗೆ ಸಾಧ್ಯ ಎನ್ನುವ ರೋಚಕ ಮಾಹಿತಿ ಇಲ್ಲಿದೆ. ಈ ಘಟನೆ ನಡೆದಿರುವುದು ನೆರೆಯ ಪಾಕಿಸ್ತಾನದ ಕರಾಚಿ ಬಳಿಯ ಇಬ್ರಾಹಿಮ್‌ ಹೈದರಿ ಗ್ರಾಮದಲ್ಲಿ.

ಹಾಜಿ ಬಲೋಚ್‌ ಎಂಬ ಹೆಸರಿನ ಮೀನುಗಾರನೊಬ್ಬ ಮೀನುಗಾರಿಕೆಗೆಂದು ಸಮುದ್ರಕ್ಕೆ ತೆರಳಿದ್ದ. ಈ ವೇಳೆ ಆತನಿಗೆ ಅಪರೂಪದ ಮೀನೊಂದು ದೊರಕಿದ್ದು, ಅದು ಆತನ ಅದೃಷ್ಟವನ್ನೇ ಬದಲಾಯಿಸಿದೆ. ಸ್ಥಳೀಯ ಭಾಷೆಯಲ್ಲಿ “ಕಿರ್ ಅಥವಾ ಸೋವಾ” ಎಂದು ಕರೆಯಲ್ಪಡುವ ಆ ಅಪರೂಪದ ಮೀನು ವಿಶೇಷತೆಯನ್ನು ಹೊಂದಿದೆ. ಸಾಮಾನ್ಯವಾಗಿ ಈ ಮೀನು ಮಾರುಕಟ್ಟೆಯಲ್ಲಿ 20 ಲಕ್ಷ ರೂ. ಬೆಲೆಬಾಳುತ್ತದೆ. ಆದರೆ, ಈ ಮೀನು ಹರಾಜಿಗೆ ಹೋಗಿದ್ದು, ಅಲ್ಲಿ ಅದು ಯಾರೂ ಕಂಡು ಕೇಳರಿಯದ ಬೆಲೆಗೆ ಮಾರಾಟವಾಗಿದೆ. ಬರೋಬ್ಬರಿ 7 ಕೋಟಿ ರೂ.ಗಳಿಗೆ ಮಾರಾಟವಾಗುವ ಮೂಲಕ ಈ ಸುದ್ದಿ ಎಲ್ಲರ ಗಮನ ಸೆಳೆದಿದೆ‌.

ಔಷಧೀಯ ಗುಣಗಳಿರುವ ಈ ಸೋವಾ ಮೀನಿಗೆ ವಿಶ್ವಾದಾದ್ಯಂತ ವ್ಯಾಪಕ ಬೇಡಿಕೆಯಿದೆ. ಒಂದೂವರೆ ಮೀಟರ್‌ ಉದ್ದವಿದ್ದು, 20 ರಿಂದ 40 ಕಿಲೋ ತೂಗುವ ಅಪರೂಪದ ಮೀನು ಇದಾಗಿದ್ದು, ಶಸ್ತ್ರಕ್ರಿಯೆ ಸಂದರ್ಭಗಳಲ್ಲೂ ಇದನ್ನು ಬಳಸಲಾಗುತ್ತದೆ ಎನ್ನುವುದು ವಿಶೇಷ. ಹೀಗೆ ಹಲವು ವಿಶೇಷತೆಯುಳ್ಳ ಈ ಮೀನು ತನ್ನ ಸಂತನಾಭಿವೃದ್ಧಿಯ ಸಂದರ್ಭದಲ್ಲಿ ಮಾತ್ರ ಸಮುದ್ರ ತೀರದತ್ತ ಈಜಿಕೊಂಡು ಆಗಮಿಸುತ್ತದೆ. ಈ ಸಮಯದಲ್ಲೇ ಈ ಪ್ರತಿಷ್ಠಿತ ಸೋವಾ ಮೀನು ಹಾಜಿ ಬಲೋಜ್‌ ಬೀಸಿದ ಬಲೆಯಲ್ಲಿ ಬಿದ್ದಿದ್ದು, ಇದೀಗ ಆತನ ಬದುಕನ್ನೇ ಬದಲಿಸುವ ಮಟ್ಟಿಗೆ ದಾಖಲೆ ಬೆಲೆಯಲ್ಲಿ ಮಾರಾಟವಾಗಿದೆ. ಈ ಮೀನು ಮಾರಾಟದಿಂದ ದೊರಕಿರುವ ಹಣವನ್ನು ತನ್ನ ತಂಡದೊಂದಿಗೆ ಹಂಚಿಕೊಳ್ಳುವುದಾಗಿ ಹಾಜಿ ಬಲೋಚ್‌ ತಿಳಿಸಿದ್ದು, ಆತನ ಸಹವರ್ತಿ ಮೀನುಗಾರರು ಫುಲ್ ಖುಷಿಯಾಗಿದ್ದಾರೆ.

Leave A Reply

Your email address will not be published.