Bigg boss 10: ಈ ವಾರ ಕಿಚ್ಚನ ಚಪ್ಪಾಳೆ ಯಾರಿಗೆ? ಡ್ರೋನ್​ ಪ್ರತಾಪ್​ ಹೇಳಿದ್ದೇನು?

Entertainment news bigg boss kannada this week kichcha sudeep claps latest news

Bigg boss 10 ಆರಂಭವಾಗಿ ಒಂದು ತಿಂಗಳು ಆಯ್ತು. ಈಗಾಗಲೇ 3 ಜನ ಎಲಿಮಿನೇಟ್​ ಆಗಿದ್ದಾರೆ. ಈ ವಾರದ ಕಿಚ್ಚನ ಪಂಚಾಯ್ತಿಗೆ ಎಲ್ಲರೂ ಕಾಯ್ತಾ ಇದ್ದಾರೆ. ಅದರಲ್ಲೂ ಕಿಚ್ಚನ ಚಪ್ಪಾಳೆ ಯಾರಿಗೆ ಅಂತ ಗೊತ್ತಾ? ಇಲ್ಲಿದೆ ನೋಡಿ ಫುಲ್​ ಡೀಟೇಲ್ಸ್​.

ಈ ವಾರ ಬಿಗ್​ ಬಾಸ್ ಮನೆಯಲ್ಲಿ ಗಂಧದ ಗುಡಿ ಹಾಗೂ ವಜ್ರಕಾಯ ತಂಡವಾಗಿ ಸ್ಪರ್ಧಿಗಳು ಆಟವಾಗಿದ್ರು. ಗಂಧದ ಗುಡಿ ತಂಡಕ್ಕೆ ಡ್ರೋನ್​ ಪ್ರತಾಪ್ ಕ್ಯಾಪ್ಟಲ್ ಆಗಿದ್ರು. ​ ವಜ್ರಕಾಯ ತಂಡದ ಕ್ಯಾಪ್ಟನ್ ಆಗಿ ಸಿರಿ ಟಾಸ್ಕ್​ ಗಳ ಮುಂದಾಳತ್ವ ವಹಿಸಿದ್ರು. ಡ್ರೋನ್ ಪ್ರತಾಪ್​ ನಾಯಕತ್ವವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ತಂಡದವರೇ ತಿರುಗಿಬಿದ್ರು ತಾಳ್ಮೆಯಿಂದ ಆಟವಾಡಿದ ಪ್ರತಾಪ್​ ಗಂಧದಗುಡಿ ಟೀಮ್ ವಿನ್​ ಆಗಿದೆ.

ಗಂಧದ ಗುಡಿ ತಂಡದಲ್ಲಿದ್ದ ವರ್ತೂರ್ ಸಂತೋಷ್​, ತನಿಷಾ ತಂಡ ಕ್ಯಾಪ್ಟನ್ ಡ್ರೋನ್​​ ಪ್ರತಾಪ್ ವಿರುದ್ಧವೇ ತಿರುಗಿಬಿದ್ದಿದ್ರು. ಕಾರ್ತಿಕ್, ಸಂಗೀತಾ ಪ್ರಶ್ನೆಗಳ ಸುರಿಮಳೆಗೈದ್ರು. ಎಲ್ಲವನ್ನು ತಾಳ್ಮೆಯಿಂದ ಎದುರಿಸಿ ನ್ಯಾಯಯುತವಾಗಿ ಆಟವಾಡಿದ ಡ್ರೋನ್​ ಪ್ರತಾಪ್​ಗೆ ಈ ಬಾರಿ ಕಿಚ್ಚನ ಮೆಚ್ಚುಗೆ ಚಪ್ಪಾಳೆ ಗಿಟ್ಟಿದೆ. ಕಿಚ್ಚನ ಚಪ್ಪಾಳೆ ಸಿಕ್ಕ ಖುಷಿಯಲ್ಲಿ ಪ್ರತಾಪ್ ಇದ್ದಾರೆ.

ಕಿಚ್ಚನ ಚಪ್ಪಾಳೆ ಸಿಕ್ಕ ಬಳಿಕ ಮಾತಾಡಿದ ಡ್ರೋನ್​ ಪ್ರತಾಪ್​, ಹೊರಗೆ ನನ್ನನ್ನು ಕಳ್ಳ-ಸುಳ್ಳ ಎಂದ್ರು. ಆ ನೋವು ನನಗೆ ಈಗಲೂ ಇದೆ. ಮೋಸ ಮಾಡಿದ್ದಾನೆ, ಮಹಾ ವಂಚಕ ಎಂದ್ರು. ಇದು ನನಗೆ ಬಿಗ್ ಮೂಮೆಂಟ್ ಹೊರಗೆ ಎರಡು ಕಡೆಯಿಂದ ಏನು ತಪ್ಪು ಅನ್ನೋದು ಕಾಣಿಸೋದಿಲ್ಲ. ನನಗೆ ಮಾತಾಡಿರುವುದನ್ನು ಹೇಳಿಕೊಳ್ಳಲು ನನಗೆ ಮುಜುಗರವಿಲ್ಲ. ಅದೆಲ್ಲಾ ಈಗ ನೆನೆದುಕೊಂಡ್ರೇ ಮನಸ್ಸು ಬಹಳ ನಿರಾಳವೆನಿಸುತ್ತಿದೆ ಎನ್ನುತ್ತಾ ಡ್ರೋನ್​ ಪ್ರತಾಪ್ ಭಾವುಕರಾದ್ರು.

ಆಟವನ್ನು ನ್ಯಾಯವಾಗಿ ಆಡಿದಕ್ಕೆ ಕಿಚ್ಚ ಪ್ರತಾಪ್​ಗೆ ಚಪ್ಪಾಳೆ ಕೊಟ್ಟಿದ್ದಾರೆ. ಈ ದೃಶ್ಯ ಅಂತೂ ಸೂಪರ್​ ಆಗಿದೆ. ಹೊರಗೆ ಬೇರೆ ತರ ಪೋಟ್ರೇ ಆಗಿದ್ದೆ. ತಪ್ಪು ಮಾಡಿದ್ದೇನೆ ನಿಜ, ಆದರೆ ಈಗ ಮತ್ತೆ ಅದೇ ತಪ್ಪು ಮಾಡಲ್ಲ ಎಂದು ಪ್ರತಾಪ್​ ಹೇಳಿದ್ದಾರೆ.

ಇದನ್ನೂ ಓದಿ: ಊಟದ ನಂತರ ಸಿಹಿ ತಿಂತೀರಾ? ಡೇಂಜರ್, ಮೊದಲು ಈ ಅಭ್ಯಾಸವನ್ನು ಸ್ಟಾಪ್ ಮಾಡಿ

Leave A Reply

Your email address will not be published.