Aligarh Muslim University: ಐಸಿಸ್ ಪರ ವಿದ್ವಂಸಕ ಸಂಚು – ವಿವಿಯ 6 ಮುಸ್ಲಿಂ ವಿದ್ಯಾರ್ಥಿಗಳು ಅರೆಸ್ಟ್

National news six aligarh Muslim University students arrested for working as ISIS operative

Aligarh Muslim University: ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ  6 ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶದ (Uttar Pradesh) ಭಯೋತ್ಪಾದನಾ ನಿಗ್ರಹ ದಳದ (ATS) ಪೊಲೀಸರು ಬಂಧಿಸಿದ್ದಾರೆ. ಐಸಿಸ್ (ISIS) ಪರವಾಗಿ ಕೆಲಸ ಮಾಡುತ್ತಿದ್ದ ಕಾರಣದಿಂದ ಈ ಬಂಧನ ನಡೆದಿದೆ.

ನಾಲ್ವರನ್ನು ರಕೀಬ್ ಇನಾಮ್, ನಾವೇದ್ ಸಿದ್ದಿಕಿ, ಮೊಹಮ್ಮದ್ ನೋಮನ್ ಮತ್ತು ಮೊಹಮ್ಮದ್ ನಾಜಿಮ್ ಎಂದು ಗುರುತಿಸಲಾಗಿದೆ. ಉಳಿದಿಬ್ಬರ ಹೆಸರು ಬಹಿರಂಗ ಆಗಬೇಕಿದೆ. ಇದೀಗ ಈ ಆರು ವಿದ್ಯಾರ್ಥಿಗಳನ್ನು ಬಂಧಿಸುವುದರೊಂದಿಗೆ ಯುಪಿಯ ಅಲಿಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಭಯೋತ್ಪಾದಕ ಜಾಲ ಹೊರಕ್ಕೆ ಬಂದಿದೆ.

ಬಂಧಿತ ಆರೂ ಆರೋಪಿಗಳು ಅಲಿಗಢ ವಿಶ್ವವಿದ್ಯಾನಿಲಯದ(Aligarh Muslim University) ವಿದ್ಯಾರ್ಥಿ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದರು.ಇದೀಗ ಗೊತ್ತಾಗಿರುವ ವಿಚಾರ ಏನೆಂದರೆ, ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಪ್ರಕಾರ ಬಂಧಿತರು ದೇಶದಲ್ಲಿ ಬಹುದೊಡ್ಡ ಭಯೋತ್ಪಾದಕ ದಾಳಿ ಸಂಚು ನಡೆಸಲು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ವಿದ್ಯಾರ್ಥಿ ಸಂಘದ ಸಭೆಗಳು ಐಸಿಸ್ ನ ಹೊಸ ನೇಮಕಾತಿ ಸೆಲ್ ಆಗಿ ಮಾರ್ಪಟ್ಟಿವೆ ಎಂದು ಭಯೋತ್ಪಾದನಾ ನಿಗ್ರಹ ದಳ ಹೇಳಿದೆ.

ಮಹಾರಾಷ್ಟ್ರದ ಪುಣೆಯ ಇಸ್ಲಾಮಿಕ್ ಸ್ಟೇಟ್ ಮಾಡ್ಯೂಲ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿರುವ ರಿಜ್ವಾನ್ ಮತ್ತು ಶಹನವಾಜ್ ಅವರ ವಿಚಾರಣೆಯ ವೇಳೆ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಹಲವು ವಿದ್ಯಾರ್ಥಿಗಳು ದೇಶವಿರೋಧಿ ಅಜೆಂಡಾವನ್ನು ಹರಡಲು ತೊಡಗಿರುವ ವಿಚಾರ ಬೆಳಕಿಗೆ ಬಂದಿತ್ತು. ಮೂಲಗಳ ಪ್ರಕಾರ, ಅಲಿಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈಗ ಕೇಂದ್ರೀಯ ತನಿಖಾ ಸಂಸ್ಥೆಗಳ ನಿಗಾದಲ್ಲಿದ್ದರು. ಈಗ ಈ ಇಬ್ಬರ ವಿಚಾರಣೆಯ ನಂತರ ಉತ್ತರ ಪ್ರದೇಶ ಎಟಿಎಸ್ ಆರು ವಿದ್ಯಾರ್ಥಿಗಳನ್ನು ಬಂಧಿಸಿದೆ, ವಿದ್ವಂಸಕ ಸಂಚು ಬಯಲಾಗಿದೆ.

ಇದನ್ನೂ ಓದಿ: ಈ ವಾರ ಕಿಚ್ಚನ ಚಪ್ಪಾಳೆ ಯಾರಿಗೆ? ಡ್ರೋನ್ ಪ್ರತಾಪ್ ಹೇಳಿದ್ದೇನು?

Leave A Reply

Your email address will not be published.