Hasanamba Temple Darshan: ಹಾಸನಾಂಬೆ ದರ್ಶನದ ಕೊನೆ ದಿನಾಂಕ ನಿಗದಿ, ಇಲ್ಲಿಯತನಕ ಹರಿದು ದುಡ್ಡು ಎಷ್ಟು ಕೋಟಿ ಗೊತ್ತಾ ?

Karnataka news Hasanamba Temple Darshan Breaks Records By Collecting Crores Of Income latest news

Hasanamba Temple Darshan : ಹಾಸನದ ಹಾಸನಾಂಬೆ ದೇವಿ (Hasanamba) ಸನ್ನಿಧಾನಕ್ಕೆ ಜನದ ಜತೆ ಹಣದ ಹೊಳೆಯೇ ಹರಿದು ಬಂದಿದೆ. ಜಾತ್ರಾ ಮಹೋತ್ಸವ ಸಂದರ್ಭದಲ್ಲೇ ಈ ಬಾರೀ ಅತೀ ಹೆಚ್ಚು ಆದಾಯ ಸಂಗ್ರಹವಾಗಿದೆ. ಇದೇ ಮೊದಲ ಬಾರಿಗೆ 5.8 ಕೋಟಿ ರೂಪಾಯಿ ಭರ್ಜರಿ ಆದಾಯ ಹರಿದು ಬಂದಿದೆ. ಇದರಲ್ಲಿ ವಿಶೇಷ ದರ್ಶನದ 1,000 ರೂಪಾಯಿ ಟಿಕೆಟ್‍ ನಿಂದಲೆ 2.59 ಕೋಟಿ ರೂಪಾಯಿ, 300 ರೂಪಾಯಿ ಟಿಕೆಟ್‍ನಿಂದ 2 ಕೋಟಿ ರೂ. ಹಣ ಸಂಗ್ರಹವಾಗಿದೆ ಎಂಬ ಮಾಹಿತಿ ಇದೆ. ವರ್ಷಕ್ಕೊಂದು ಬಾರಿ ಮಾತ್ರ ತೆರೆಯುವ ಈ ದೇವಾಲಯ ದೀಪಾವಳಿ ಸಂದರ್ಭ ತೆರೆದಾಗ ಭಾರೀ ಜನ ಸಂದಣಿ ಉಂಟಾಗಿತ್ತು.

ಈ ಬಾರಿ ಅತೀ ಹೆಚ್ಚು ಜನ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಈ ತಿಂಗಳ 2 ರಿಂದ ಹಾಸನಾಂಬೆ ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು. ಅಲ್ಲದೇ ವಿಶೇಷ ದರ್ಶನದ (Hasanamba Temple Darshan ) ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ ಒಟ್ಟಾರೆಯಾಗಿ 5.8 ಕೋಟಿ ರೂ. ಹಣ ಸಂಗ್ರಹವಾಗಿದೆ. ಮೊದಲ ಬಾರಿಗೆ 10 ಲಕ್ಷಕ್ಕೂ ಹೆಚ್ಚಿನ ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದಾರೆ. ಕಳೆದ ವರ್ಷ 3.61 ಕೋಟಿ ರೂ. ಹಣ ಸಂಗ್ರಹವಾಗಿತ್ತು.

ಹಾಸನಾಂಬೆ ದೇವಿಯ ದೇಗುಲ ಇಂದು, ಸೋಮವಾರ ಮತ್ತು ನಾಳೆ ಮಂಗಳವಾರ ಮಾತ್ರ ಸಾರ್ವಜನಿಕ ದರ್ಶನಕ್ಕೆ ಅವಕಾಶವಿದೆ. ಬುಧವಾರದ ದಿನ ಮಧ್ಯಾಹ್ನ 12 ಗಂಟೆಯ ಬಳಿಕ ಶಾಸ್ತ್ರೋಕ್ತವಾಗಿ ದೇವಾಲಯದ ಗರ್ಭಗುಡಿ ಬಾಗಿಲನ್ನು ಮುಚ್ಚುವ ಕೆಲಸ ನಡೆಯುತ್ತದೆ. ಈಗ ಇಂದು ಕೂಡಾ ಹಾಸನಾಂಬ ದೇವಿಯ ದರ್ಶನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಮೊನ್ನೆ ಏಕಾಏಕಿ ಜನ ಸಂದಣಿ ನುಗ್ಗಿ ಬಂದ ಸಂದರ್ಭ ಕರೆಂಟ್ ಶಾಕ್ ಉಂಟಾಗಿತ್ತು ಮತ್ತು ನೂಕುನುಗ್ಗಲು ಉಂಟಾಗಿತ್ತು.

ಇದನ್ನೂ ಓದಿ: ದೀಪಾವಳಿಯಂದೇ ನಷ್ಟ ತಂದಿಟ್ಟ ಅಗ್ನಿ ದುರಂತ – ಬೆಂಕಿಗೆ ಆಹುತಿಯಾದ ಐಟಿ ಕಂಪನಿ !

Leave A Reply

Your email address will not be published.