Belagavi: ಮಗನ ನಿರ್ಧಾರದಿಂದ ತಾಯಿಗೆ ಆಘಾತ – ಅಯ್ಯೋ! ಮಗನ ಸಾವಿಗೆ ದೀಪಾವಳಿ ರಜೆಯೇ ಕಾರಣವಾಯಿತೆ ?

Karnataka death news student commits suicide in Belagavi latest news

Belagavi: ಕೇವಲ ಹದಿನಾಲ್ಕು ವರ್ಷ ವಯಸ್ಸಿನ ಬಾಲಕನೋರ್ವ ತಾಯಿಯ ಮಾತಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ (Belagavi) ಮೂಡಲಗಿ ಪಟ್ಟಣದ ದೇಶಪಾಂಡೆ ಫ್ಲ್ಯಾಟ್ ನಲ್ಲಿ ನಡೆದಿದೆ.

ಸಮರ್ಥ ಸುರೇಶ ಭಜಂತ್ರಿ (14) ತಾಯಿಯ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ ಬಾಲಕ. ಪ್ರಸ್ತುತ ಮೂಡಲಗಿ ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ 8 ನೇ ತರಗತಿಯಲ್ಲಿ ಓದುತಿದ್ದು, ದೀಪಾವಳಿ ರಜೆಯ ಕಾರಣ ಮನೆಯಲ್ಲಿದ್ದನು.

ಮನೆಯಲ್ಲಿ ಆಟವಾಡಿಕೊಂಡಿದ್ದ ಮಗನನ್ನು ಕಂಡು “ದೀಪಾವಳಿ ರಜೆ ಇದೆ ಅಂತ ಅಲ್ಲಿ ಇಲ್ಲಿ ತಿರುಗಬೇಡ, ಹೋಗಿ ಓದಿಕೋ” ಎಂದು ಆತನ ತಾಯಿ ಬುದ್ಧಿಮಾತನ್ನು ಹೇಳಿದ್ದರು. ಈ ಮಾತಿನಿಂದ ಬೇಸರಗೊಂಡ ಪುತ್ರ ತಮ್ಮ ಮನೆಯಲ್ಲಿದ್ದ ಸೀರೆಯಿಂದ ನೇಣು ಬಿಗಿದುಕೊಂಡು ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ.

ತನ್ನ ಪುತ್ರನ ಆತ್ಮಹತ್ಯೆಯಿಂದಾಗಿ ಹಬ್ಬದ ಸಂಭ್ರಮ ಕಳೆಗುಂದಿ ಶೋಕದ ಮಡುವಿನಲ್ಲಿ ತಾಯಿಯು ಕೊರಗುವಂತಾಗಿದೆ. ಈ ಸಂಬಂಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಾಸನಾಂಬೆ ದರ್ಶನದ ಕೊನೆ ದಿನಾಂಕ ನಿಗದಿ, ಇಲ್ಲಿಯತನಕ ಹರಿದು ದುಡ್ಡು ಎಷ್ಟು ಕೋಟಿ ಗೊತ್ತಾ ?

Leave A Reply

Your email address will not be published.